ನ್ಯೂಸ್

ಸೈಬರಾಬಾದ್​ ಪೊಲೀಸ್​ ಆಯುಕ್ತ ವಿಶ್ವನಾಥ ಸಜ್ಜನರ್​ರಿಂದ ಕನ್ನಡಿಗರಲ್ಲಿ ವಿಶೇಷ ಮನವಿ

ಹೈದರಾಬಾದ್: ತೆಲಂಗಾಣ ಮತ್ತು ಕರ್ನಾಟಕದ ಕರೊನಾ ಸೋಂಕಿತರಲ್ಲಿ ಕನ್ನಡಿಗ ಸೈಬರಾಬಾದ್​ ಪೊಲೀಸ್​ ಆಯುಕ್ತರಾದ ವಿಶ್ವನಾಥ ಸಜ್ಜನರ್ ವಿಶೇಷ ಮನವಿ ಮಾಡಿಕೊಂಡಿದ್ದಾರೆ.

ಎನ್​ಕೌಂಟರ್ ಸ್ಪೇಷಲಿಸ್ಟ್ ಆಗಿರುವ ವಿಶ್ವನಾಥ ಸಜ್ಜನರ್ ಅವರು ಪ್ಲಾಸ್ಮಾ ಚಿಕಿತ್ಸೆ ಮೂಲಕ ಕರೊನಾ ನಿಯಂತ್ರಣ ಸಾಧ್ಯ ಎಂದು ಹೇಳುವ ಮೂಲಕ ಗುಣಮುಖರಾದವರು ರಕ್ತದಾನ ಮಾಡುವಂತೆ ಕೇಳಿಕೊಂಡಿದ್ದಾರೆ.

ಸೋಂಕಿನಿಂದ ಗುಣಮುಖರಾದವರು ರಕ್ತದಾನ ಮಾಡಬೇಕು. 500 ಎಮ್.ಎಲ್ ರಕ್ತದಾನ ಮಾಡಿದರೆ ಒಬ್ಬ ಸೋಂಕಿನಿಂದ ಪಾರಾಗಲು ಸಾಧ್ಯ. ತೆಲಂಗಾಣದಲ್ಲಿ ಸಾಕಷ್ಟು ಪೊಲೀಸರು ಸೋಂಕಿತರಿಗೆ ರಕ್ತದಾನ ಮಾಡುವ ಮೂಲಕ ‌ಮಾನವಿಯತೆ ಮೆರೆದಿದ್ದಾರೆ ಎಂದು ತಿಳಿಸಿದ್ದಾರೆ.

ಪ್ಲಾಸ್ಮಾ ಚಿಕಿತ್ಸೆಗೆ ರಕ್ತದಾನ ಮಾಡುವವರ ದೇಹದಲ್ಲಿ 24 ಗಂಟೆಯಿಂದ 72 ಗಂಟೆಯ ಒಳಗೆ ಹೊಸ ರಕ್ತ ತಯಾರಾಗುತ್ತದೆ. ಹೀಗಾಗಿ ಯಾವುದೇ ಹಿಂಜರಿಕೆ ಇಲ್ಲದೆ ದಾನ ಮಾಡಿ ಪ್ರಾಣ ಉಳಿಸಿ ಎಂದು ಮನವಿ ಮಾಡಿದ್ದಾರೆ. (ದಿಗ್ವಿಜಯ ನ್ಯೂಸ್​)