ನ್ಯೂಸ್

ನಡುರಸ್ತೆಯಲ್ಲಿ ಕಾರಿನ ಬಾಗಿಲು ತೆರೆದ ಚಾಲಕ: ಬಾರದ ಲೋಕಕ್ಕೆ ಹೋದ ಕಂದಮ್ಮ

ಹೈದರಾಬಾದ್: ಜನನಿಬಿಡ ರಸ್ತೆಯಲ್ಲಿ ಚಾಲಕನೊಬ್ಬ ನಿರ್ಲಕ್ಷ್ಯದಿಂದ ಕಾರಿನ ಬಾಗಿಲು ತೆರೆದ ಪರಿಣಾಮ ಎರಡು ವರ್ಷದ ಹೆಣ್ಣು ಮಗು ಮೃತಪಟ್ಟಿರುವ ದಾರುಣ ಘಟನೆ ಇಲ್ಲಿನ ಎಲ್​.ಬಿ.ನಗರದಲ್ಲಿ ನಡೆದಿದೆ.

ಮೃತ ಮಗುವನ್ನು ಧನಲಕ್ಷ್ಮಿ ಎಂದು ಗುರುತಿಸಲಾಗಿದ್ದು, ಈ ಘಟನೆ ಶುಕ್ರವಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಚಾಲಕನೊಬ್ಬ ಸೂಕ್ತ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದೆ ರಸ್ತೆ ಮಧ್ಯದಲ್ಲಿ ಕಾರು ನಿಲ್ಲಿಸಿ, ಏಕಾಏಕಿ ಬಾಗಿಲನ್ನು ತೆರೆದಿದ್ದಾನೆ. ದುರಂತವೆಂದರೆ, ಸೈಯದ್ ಮತ್ತು ಶಶಿರೇಖಾ ಎಂಬ ದಂಪತಿ ತಮ್ಮ ಮಗಳು ಧನಲಕ್ಷ್ಮಿಯೊಂದಿಗೆ ಕಾರಿನ ಹಿಂದೆ ಬೈಕ್​ನಲ್ಲಿ ಬರುತ್ತಿದ್ದರು.

ಕಾರಿನ ಬ ಬೈಕ್‌ ಕಾರಿನ ಬಾಗಿಲಿಗೆ ಡಿಕ್ಕಿ ಹೊಡೆದಿದ್ದು, ಮಗು ಮೃತಪಟ್ಟಿದೆ ಈ ಹೃದಯವಿದ್ರಾವಕ ಘಟನೆ ಸಮೀಪದಲ್ಲೇ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಈ ಕುರಿತು ಪ್ರಕರಣ ದಾಖಲಿಸಿರುವ ಪೋಲಿಸರು ಆರೋಪಿಗಾಗಿ ಹುಡುಕಾಡುತ್ತಿದ್ದಾರೆ.(ಏಜೆನ್ಸೀಸ್​)