ಚಲಿಸುವ ವೇಳೆ ಬಸ್​ನ ಬ್ರೇಕ್​ ಫೇಲ್​​; 56ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಂಭೀರ ಗಾಯ

Bus Accident
Published on

ಶಿಮ್ಲಾ: ಚಾಲಕನ ನಿಯಂತ್ರಣ ತಪ್ಪಿ ಬಸ್ಸೊಂದು ಬೆಟ್ಟಕ್ಕೆ ಡಿಕ್ಕಿ ಹೊಡೆದ ಪರಿಣಾಮ 56 ಪ್ರಯಾಣಿಕರು ಗಾಯಗೊಂಡಿರುವ ಘಟನೆ ಹಿಮಾಚಲಪ್ರದೇಶದ ಶಿಮ್ಲಾ ಜಿಲ್ಲೆಯ ರೋಹ್ರು ಪ್ರದೇಶದಲ್ಲಿ ನಡೆದಿದೆ.

ಬಸ್​ ತಿಂಜನುವಿನಿಂದ ಚಿದ್ಗಾಂವ್‌ಗೆ ತೆರಳುತ್ತಿದ್ದ ವೇಳೆ ಬರ್ಶೀಲ್ ಪ್ರದೇಶದಲ್ಲಿ ಅಪಘಾತ ಸಂಭವಿಸಿದೆ ಎಂದು ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ.

ಬ್ರೇಕ್​ ಫೇಲ್​

ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಪೊಲೀಸ್​ ಅಧಿಕಾರಿ ಬ್ರೇಕ್ ವೈಫಲ್ಯವೇ ಅಪಘಾತಕ್ಕೆ ಕಾರಣವಾಗಿರಬಹುದು. ಮೊದಲಿಗೆ ಚಾಲಕ ಪ್ರಯಾಣಿಕರ ಬಳಿ ಈ ಬಗ್ಗೆ ಹೇಳಿದ್ದಾನೆ. ಆ ನಂತರ ಬಸ್​ಅನ್ನು ಬೆಟ್ಟಕ್ಕೆ ಡಿಕ್ಕಿ ಹೊಡೆಸುವ ಮೂಲಕ ಕಂದಕಕ್ಕೆ ಉರುಳುವುದನ್ನು ತಪ್ಪಿಸಿದ್ಧಾನೆ.

Bus Accident (1)

ಅಪಘಾತದಲ್ಲಿ ಸುಮಾರು56ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಂಭೀರವಾಗಿ ಗಾಯಗೊಂಡಿದ್ದು ಗಾಯಾಳುಗಳಿಗೆ ಚಿದ್ಗಾಂವ್​ ಸಮುದಾಯ ಕೇಂದ್ರ, ಸವಿಲ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಲಾಗುತ್ತಿದೆ ಎಂದು ಘಟನೆಯ ಕುರಿತು ಪೊಲೀಸ್​ ಅಧಿಕಾರಿ ಪ್ರತಿಕ್ರಿಯಿಸಿದ್ದಾರೆ.

ಎರಡನೇ ಪ್ರಕರಣ

ಕಳೆದ ಎರಡು ದಿನಗಳಲ್ಲಿ ಇದು ಎರಡನೇ ಪ್ರಕರಣವಾಗಿದ್ದು ಗುರುವಾರ ಮಂಡಿ ಜಿಲ್ಲೆಯಲ್ಲಿ 40ಕ್ಕೂ ಹೆಚ್ಚು ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ಬಸ್​ ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net