175 km: ಮನೆಯಲ್ಲಿನ ಕುಟುಂಬ ಕಲಹದಿಂದಾಗಿ ಮನೆ ಬಿಟ್ಟು ಹೋಗಿದ್ದ ತನ್ನ ಪತ್ನಿ 175 ಕಿ.ಮೀ ದೂರ ಪ್ರಯಾಣಿಸಿ ಹುಡುಕಿ ಆಕೆಯ ಕತ್ತು ಸೀಳಿದ ಘಟನೆ ಸೆ.18ರಂದು ಒಡಿಸ್ಸಾದ ಬಾಲಸೋರ್ನಲ್ಲಿ ನಡೆದಿದ್ದು, ತಡವಾಗಿ ಪ್ರಕರಣ ಬೆಳಕಿಗೆ ಬಂದಿದೆ.
ಪಶ್ಚಿಮ ಬಂಗಾಳದ ಕಟಕ್ ನಗರದ ಹತ್ತಿರದಲ್ಲಿ ಪ್ರದೇಶದ ವಾಸಿಗಳಾದ ದಂಪತಿಗಳು, ಇತ್ತೀಚಿಗೆ ಮನೆಯಲ್ಲಿ ಗಲಾಟೆ ಮಾಡಿಕೊಂಡಿದ್ದಾರೆ. ಇದರಿಂದ ಬೆಸತ್ತ ಪತ್ನಿ ಮನೆ ಬಿಟ್ಟು ತೆರಳಿದ್ದಾಳೆ. ಪತ್ನಿ ಬಗ್ಗೆ ಅವರಿವರಿಂದ ಮಾಹಿತಿ ಕಲೆ ಹಾಕಿದ ಪತಿ, ಕಟಕ್ ನಗರದಿಂದ ಒಡಿಸ್ಸಾದ ಬಾಲಸೋರ್ಗೆ ಹೋಗಿ ಹೆಂಡತಿಯನ್ನು ಪತ್ತೆ ಮಾಡಿದ್ದಾನೆ.
ಇದನ್ನೂ ಓದಿ:INDVsPAK: ಟಾಸ್ ಗೆದ್ದ ಭಾರತ ಫೀಲ್ಡಿಂಗ್ ಆಯ್ಕೆ: ಮತ್ತೊಮ್ಮೆ ಹ್ಯಾಂಡ್ಶೇಕ್ ನಿರಾಕರಿಸಿದ ಸೂರ್ಯಕುಮಾರ್
ಆಕೆಯನ್ನು ಪತ್ತೆ ಮಾಡಿದ ಗಂಡ ಮನೆಗೆ ಮರಳುವಂತೆ ಒತ್ತಾಯಿಸಿದ್ದಾನೆ. ಅಲ್ಲದೆ, ಪರಿಪರಿಯಾಗಿ ಬೇಡಿಕೊಂಡಿದ್ದಾನೆ ಎಂದು ವರದಿಯಾಗಿದೆ. ಈ ಇಬ್ಬರ ಜಗಳವನ್ನು ರಸ್ತೆಯಲ್ಲಿದ್ದ ಕೆಲವರು ವಿಡಿಯೋ ರೇಕಾರ್ಡ್ ಮಾಡಿ ಅಪಹಾಸ್ಯ ಮಾಡಿದ್ದಾರೆ.
ಇದರಿಂದ ಕೋಪಗೊಂಡ ಆತ ಪ್ಯಾಂಟ್ ಜೇಬಿನಲ್ಲಿ ಕೈ ಹಾಕಿ ಚಾಕು ತಗೆದು ಕುತ್ತಿಗೆ ಹಾಕಿದ್ದಾನೆ. ಇದದಿಂದ ಆಕೆಯೂ ಅಲ್ಲೇ ರಕ್ತಸ್ರಾವವಾಗಿ ನೆಲಕ್ಕೆ ಬಿದ್ದಿದ್ದಾಳೆ. ಕೂಡಲೇ ಅಲ್ಲಿನ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇದೀಗ ಇನ್ನು ಚಿಕಿತ್ಸೆ ಪಡೆಯುತ್ತಿದ್ದಾರೆ. ಪತಿಯನ್ನು ಬಂಧಿಸಿದ್ದು, ಆರೋಪಿ ವಿರುದ್ಧ ಪ್ರಕರಣ ದಾಖಲಾಗಿದೆ. ಆಕೆಯ ಸ್ಥಿತಿ ಗಂಭೀರವಾಗಿದೆ. ಪ್ರಕರಣದ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪತಿ ಆಕೆಯ ಕತ್ತು ಸೀಳುತ್ತಿರುವ ವಿಡಿಯೋ ವೈರಲ್ ಆಗಿದೆ.(ಏಜೆನ್ಸೀಸ್)