ನ್ಯೂಸ್

ಕಾರಿನಲ್ಲಿ ಹೊರಟಿದ್ದ ಪತ್ನಿಯನ್ನು ಹಿಂಬಾಲಿಸಿ ಕೊಂದ ಪತಿ.. ಕಾರಣ ಕೇಳಿದ್ರೆ ಶಾಕ್​! | Kill

ಕೇರಳ; ಒರ್ವ ವ್ಯಕ್ತಿಯೊಂದಿಗೆ ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದ ಪತ್ನಿಯನ್ನು ಹಿಂಬಾಲಿಸಿದ ಪತಿ, ಕಾರಿಗೆ ಪೆಟ್ರೋಲ್​ ಹಾಕಿ ಬೆಂಕಿ ಹಚ್ಚಿದ್ದಾನೆ. ಈ ಹಿನ್ನೆಲೆ ಆಕೆ ಮೃತಪಟ್ಟ(Kill) ಘಟನೆ ಇಲ್ಲಿನ ಕೊಲ್ಲಂ ಜಿಲ್ಲೆಯ ಚೆಮ್ಮುನ್​ ಮುಕ್ಕು ಎಂಬಲ್ಲಿ ಮಂಗಳವಾರ ರಾತ್ರಿ(ಡಿ.04) ನಡೆದಿದೆ.

ಸ್ಥಳೀಯ ನಿವಾಸಿ ಅನಿಲಾ(44) ಮೃತೆ ಎಂದು ಗುರುತಿಸಲಾಗಿದೆ. ಅಲ್ಲದೆ. ಪತಿ ಪದ್ಮರಾಜನ್​ ಅನ್ನು ಪೊಲೀಸರು ಬಂಧಿಸಿದ್ದಾರೆ.

ಒರ್ವ ವ್ಯಕ್ತಿಯೊಂದಿಗೆ ಅನಿಲಾ ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದಾಗ ಪತಿ ಪದ್ಮರಾಜನ್​ ಓಮ್ನಿ ವ್ಯಾನ್​ನಲ್ಲಿ ಹಿಂಬಾಲಿಸಿದ್ದಾನೆ. ಕಾರನ್ನು ಅಡ್ಡಗಟ್ಟಿ ಒಳಗೆ ಹೊರಗೆ ಪೆಟ್ರೋಲ್​ ಹಾಕಿ ಏಕಾಏಕಿ ಬೆಂಕಿ ಹಚ್ಚಿ ಪರಾರಿಯಾಗಿದ್ದಾನೆ. ಇದರಿಂದ ಎಚ್ಚೆತ್ತ ವ್ಯಕ್ತಿ ಸ್ಥಳೀಯರ ಸಹಾಯದಿಂದ ಕಾರಿನಿಂದ ಹೊರಗೆ ಬಂದು ಆಕೆಯನ್ನು ಕಾಪಾಡಲು ಪ್ರಯತ್ನಿಸಿದ್ದಾನೆ. ಆದರೆ, ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆನೆ ಮೃತಪಟ್ಟಿದ್ದಾಳೆ. ಆ ವ್ಯಕ್ತಿಗೆ ಗಾಯಗಳಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಅನಿಲಾ ಇತ್ತೀಚೀಗಷ್ಟೇ ತನ್ನ ಸ್ನೇಹಿತ ಹನೀಶ್​ ಜತೆಗೂಡಿ ಬೇಕರಿ ತೆರೆದಿದ್ದಾರೆ. ಇದನ್ನು ಪದ್ಮರಾಜನ್​​ ವಿರೋಧಿಸಿದ್ದರು ಎಂದು ಹೇಳಲಾಗಿದೆ. ಹೀಗಾಗಿ, ದಂಪತಿಗಳಿಬ್ಬರು ಪ್ರತ್ಯೇಕವಾಗಿ ಜೀವನ ಸಾಗಿಸುತ್ತಿದ್ದರು. ಕಾರಿನಲ್ಲಿ ಹನೀಶ್​ ಇದ್ದಾನೆ ಎಂದು ತಪ್ಪಾಗಿ ಅರ್ಥೈಸಿಕೊಂಡು ಈ ಕೃತ ಎಸಗಿದ್ದಾನೆ, ಇದು ಕೌಟುಂಬಿಕ ಕಲಹದಿಂದ ಈ ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ,(ಏಜೆನ್ಸೀಸ್​).