ಸಾಂದರ್ಭಿಕ ಚಿತ್ರ  
ನ್ಯೂಸ್

'ನೀನೂ ಇಲ್ಲದೇ ನಾನೂ ಇಲ್ಲ'.. ಪತ್ನಿ ತೊರೆದಿದ್ದಕ್ಕೆ ತಾಯಿಯ ಸಮಾಧಿ ಪಕ್ಕ ಪತಿ ಆತ್ಮಹತ್ಯೆ

ಶಾದ್‌ನಗರ: ಪತ್ನಿ ಕಾಣೆಯಾಗಿದ್ದಕ್ಕೆ ಪತಿಯೊಬ್ಬ ತನ್ನ ತಾಯಿಯ ಸಮಾಧಿ ಪಕ್ಕ ಸೆಲ್ಫಿ ವಿಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾದ್‌ನಗರದ ಕೊಂಡನ್ನಗುಡಂ ಗ್ರಾಮದಲ್ಲಿ ಘಟನೆ ನಡೆದಿದೆ.

ರಾಜು ಎಂಬಾತನೇ ಮೃತ ದುರ್ದೈವಿಯಾಗಿದ್ದು, ಶ್ವೇತಾ ಬಾರ್ಯ ಎಂಬಾಕೆ ಜತೆ ಈತನ ವಿವಾಹವಾಗಿತ್ತು. ಆದರೆ ಮೂರು ದಿನಗಳ ಹಿಂದೆ ರಾಜುವಿನ ಪತ್ನಿ ನಾಪತ್ತೆಯಾಗಿದ್ದು, ಆಕೆಗಾಗಿ ಹಗಲಿರುಳು ಹುಡುಕಿದ್ದಾನೆ.

ಇದನ್ನೂ ಓದಿ: ಇಂದಿನಿಂದ 4 ದಿನ ಈ ಭಾಗಗಳಲ್ಲಿ ಭಾರೀ ಮಳೆಯಾಗಲಿದೆ: ಹವಾಮಾನ ಇಲಾಖೆ ವರದಿ

ಕೊನೆಗೆ ಆಕೆ ಪತ್ತೆಯಾಗದ ಕಾರಣ ಬೇಸರಗೊಂಡಿದ್ದ ರಾಜು, ಆತ್ಮಹತ್ಯೆಗೂ ಮುನ್ನ ಸೆಲ್ಫಿ ವಿಡಿಯೋ ಮಾಡಿದ್ದಾನೆ. ಆತ್ಮಹತ್ಯೆಗೂ ಮುನ್ನ ದಾಖಲಾಗಿರುವ ಸೆಲ್ಫಿ ವಿಡಿಯೋದಲ್ಲಿ ಗಂಡನ ಕೊನೆಯ ಮಾತುಗಳು ಜನರ ಮನ ಮುಟ್ಟುತ್ತಿವೆ. ಈ ವಿಡಿಯೋದಲ್ಲಿ ರಾಜು ತನ್ನ ಮನದಾಳದ ದುಃಖವನ್ನು ತೊಡಿಕೊಂಡಿದ್ದು, ನೀನು ಇಲ್ಲದೇ ನಾನು ಇಲ್ಲ. ತನನ್ನು ತೊರೆದು ಎಲ್ಲೋ ಹೋಗಿರುವ ಪತ್ನಿ ಎಲ್ಲೇ ಇದ್ದರೂ ಸುಖವಾಗಿರಲಿ ಎಂದು ಕಣ್ಣೀರಿಟ್ಟಿದ್ದಾನೆ.

ಮೇಲಾಗಿ, ತನ್ನ ಸಾವಿನ ನಂತರ ತನ್ನ ಪತ್ನಿಯ ಮೇಲೆ ಯಾವುದೇ ಪ್ರಕರಣ ದಾಖಲಿಸದಂತೆ ಪೊಲೀಸರಿಗೆ ಮನವಿ ಮಾಡಿ ಅನಂತರ ತನ್ನ ತಾಯಿಯ ಸಮಾಧಿ ಬಳಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಘಟನೆ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.(ಏಜೆನ್ಸೀಸ್​)