ನ್ಯೂಸ್

ನಾಯಿ ಗೂಡಲ್ಲಿ ಪ್ರಾಣ ಕಳೆದುಕೊಂಡ ಪತಿ! 'ಹೃದಯಾಘಾತ ಅಲ್ಲ, ಕೊಲೆ' ಎನ್ನುತ್ತಿರುವ ಸಂಬಂಧಿಕರು..!

ನೆಲಮಂಗಲ: ಇಲ್ಲಿ ವ್ಯಕ್ತಿಯೊಬ್ಬ ಕುಡಿದು ಬಂದು ನಾಯಿ ಗೂಡಿನಲ್ಲಿ ಮಲಗಿ ಪ್ರಾಣ ಕಳೆದುಕೊಂಡಿದ್ದಾನೆ. ಆದರೆ ಹೆಂಡತಿ ಮಾತ್ರ 'ಏನಾಗಿದೆ ಎಂದು ಗೊತ್ತಿಲ್ಲ, ಆತ ನನಗೆ ಪ್ರಾಣ' ಎನ್ನುತ್ತಿದ್ದಾಳೆ. ಈ ನಡುವೆ ಮೃತ ವ್ಯಕ್ತಿಯ ಕತ್ತಲ್ಲಿ ಮಾರ್ಕ್​ಗಳು ಕಂಡುಬಂದಿದ್ದು ಆತ್ಮಹತ್ಯೆ ಅಥವಾ ಕೊಲೆಯಾ ಎಂದು ಸಂಶಯ ಮೂಡಿಸುವಂತಿದೆ.

ಬೆಂಗಳೂರು ಉತ್ತರ ತಾಲ್ಲೂಕು, ಮಾಚೋಹಳ್ಳಿಯಲ್ಲಿ ಘಟನೆ ನಡೆದಿದ್ದು ಸುನೀಲ್(28) ಎನ್ನುವಾತ ಮೃತ ವ್ಯಕ್ತಿ. ಮೃತದೇಹದ ಕುತ್ತಿಗೆ ಭಾಗದಲ್ಲಿ ನೇಣು ಬಿಗಿದ ರೀತಿ ಗುರುತು ಪತ್ತೆಯಾಗಿದೆ. ಈ ಸುನೀಲ್​ ಕಳೆದ 4 ವರ್ಷಗಳಿಂದ ಆಶಾ ಎಂಬುಕೆಯೊಂದಿಗೆ ದಾಂಪತ್ಯ ಜೀವನ ನಡೆಸಿದ್ದಾನೆ. ಇನ್ನೂ ವಿಚಿತ್ರ ಏನಪ್ಪಾ ಅಂದರೆ ಈತನ ಪತ್ನಿ ಆಶಾ ಈ ಹಿಂದೆ ಸುನೀಲ್‌ನ ಸ್ನೇಹಿತನ ಹೆಂಡತಿ ಆಗಿದ್ದಳು!

ಮೊದಲ ಪತಿಯನ್ನ ತ್ಯಜಿಸಿದ್ದ ಆಶಾ, ಸುನೀಲ‌ನೊಂದಿಗೆ ವೈವಾಹಿಕ ಜೀವನ ನಡೆಸುತ್ತಿದ್ದಳು. ಆಕೆಯ ಮೊದಲ ಪತಿಗೆ 3 ಜನ ಮಕ್ಕಳಿದ್ದಾರೆ. 'ಸುನೀಲ್ ಕುಡಿದು ಬಂದಾಗಲೆಲ್ಲ ಮನೆಯಲ್ಲಿ ಪ್ರತಿನಿತ್ಯ ಜಗಳ ನಡೆಯುತ್ತಿತ್ತು, ಜಗಳವಾದಗಲೆಲ್ಲ ನಾಯಿ ಗೂಡಿನಲ್ಲಿ ಮದ್ಯದ ನಶೆಯಲ್ಲಿ ಮೃತ ಸುನೀಲ ಮಲಗುತ್ತಿದ್ದ. ಇದ್ದಕ್ಕಿದ್ದಂತೆ ಸುನೀಲ ನಾಯಿ ಗೂಡಿನಲ್ಲಿ ಸಾವನ್ನಪ್ಪಿದ್ದಾರೆ' ಎಂದು ಆಶಾ ಹೇಳಿಕೆ ನೀಡಿದ್ದಾರೆ.

ಆದರೆ ಸುನೀಲ್ ಮೃತದೇಹ ಕುತ್ತಿಗೆ ಭಾಗದಲ್ಲಿ ನೇಣಿನ ಬಿಗಿದ ಗುರುತು ಪತ್ತೆಯಾಗಿದ್ದು ಇದು ಹೃದಯಘಾತವಲ್ಲ ಕೊಲೆ ಎಂದು ಮೃತನ ಸಂಬಂಧಿಕರ ಆರೋಪ ಮಾಡುತ್ತಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.