ಕೇರಳ: ಮಹಿಳಾ ಪೊಲೀಸ್ ಪೇದೆಯನ್ನು ತನ್ನ ಪತಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಬರ್ಬರವಾಗಿ ಹತ್ಯೆ(Murder) ಮಾಡಿದ ಘಟನೆ ಇಲ್ಲಿನ ಕಣ್ಣೂರು ಜಿಲ್ಲೆಯಲ್ಲಿ ಗುರುವಾರ (ನ.21) ನಡೆದಿದೆ.
ಮೃತರನ್ನು ದಿವ್ಯಾಶ್ರೀ ಎಂದು ಗುರುತಿಸಲಾಗಿದ್ದು, ಕಾಸರಗೋಡು ಜಿಲ್ಲೆಯ ಚಾಂದೇರಾ ಪೊಲೀಸ್ ಠಾಣೆಯಲ್ಲಿ ಸಿವಿಲ್ ಪೊಲೀಸ್ ಅಧಿಕಾರಿ(ಸಿಪಿಒ) ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಕೌಟುಂಬಿಕ ಕಲಹ ಹಿನ್ನೆಲೆ ದಿವ್ಯಾಶ್ರೀ ಮತ್ತು ತನ್ನ ಪತಿ ರಾಜೇಶ್ ಬೇರ್ಪಟ್ಟಿದ್ದು, ತಮ್ಮ ತಮ್ಮ ಪಾಲಕರ ಜತೆ ವಾಸವಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: Mandya | ಟೋಲ್ ಹಣ ಕಟ್ಟದೆ ಧಿಮಾಕು ತೋರಿದ ಪುಡಾರಿಗಳು!
ರಾಜೇಶ್ ಗುರುವಾರ ಸಂಜೆ 5.30 ರ ಸುಮಾರಿಗೆ ಪತ್ನಿ ದಿವ್ಯಾಶ್ರೀ ಮನೆಗೆ ಬಂದಿದ್ದಾನೆ. ಪತ್ನಿ ಮೇಲೆ ಏಕಾಏಕಿ ಹಲ್ಲೆ ನಡಿಸಿದ್ದು, ಅಕೆಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಹಲ್ಲೆ ತಡೆಯಲು ಬಂದ ದಿವ್ಯಾಶ್ರೀ ತಂದೆ ವಾಸುವಿಗೆ ಕೂಡ ಗಂಭೀರ ಗಾಯಗಳಾಗಿವೆ. ಅಲ್ಲಿದ್ದ ಸ್ಥಳೀಯರು ಕೂಡಲೇ ದಿವ್ಯಾಶ್ರೀ ಮತ್ತ ವಾಸು ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿತಾದರೂ ಮಾರ್ಗ ಮಧ್ಯೆ ದಿವ್ಯಾಶ್ರೀ ಮೃತ ಪಟ್ಟಿದ್ದಾರೆ. ವಾಸು ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ಬಳಿಕ ಪರಾರಿಯಾಗಿದ್ದ ರಾಜೇಶ್ನ್ನನ್ನು ಕಣ್ಣೂರು ಪಟ್ಟಣದಲ್ಲಿ ಪೊಲೀಸರು ವಶಕ್ಕೆ ಪಡೆದಿದುಕೊಂಡಿದ್ದಾರೆ. ಇತನ ವಿರುದ್ಧ ಕೊಲೆ ಯತ್ನ ಮತ್ತು ಕೊಲೆ ಆರೋಪದಡಿ ಕೇಸ್ ದಾಖಲಿಸಲಾಗಿದ್ದು, ವಿಚಾರಣೆ ನಡೆಸುತ್ತಿದ್ದಾರೆ, (ಏಜೆನ್ಸೀಸ್).