ನ್ಯೂಸ್

ಪ್ರಿಯಕರನ ಜೊತೆ ಸಿಕ್ಕಿಬಿದ್ದ ಪತ್ನಿಯ ಮೂಗನ್ನೇ ಕಚ್ಚಿ ತುಂಡುಮಾಡಿದ ಪತಿ | Nose

Nose: ವ್ಯಕ್ತಿಯೊಬ್ಬ ತನ್ನ ಪತ್ನಿ ಪ್ರಿಯಕರನೊಂದಿಗೆ ಇರುವುದನ್ನು ನೋಡಿ ಆಕೆಯ ಮೂಗನ್ನು ಕಚ್ಚಿದ ಘಟನೆ ಉತ್ತರ ಪ್ರದೇಶದ ಹಾರ್ದೋಯ್ ಜಿಲ್ಲೆಯಲ್ಲಿ ನಡೆದಿದೆ.

ನಡೆದಿದ್ದೇನು?

ರಾಮ್ ಖಿಲಾವನ್ ಅವರ ಪತ್ನಿ ಅದೇ ಗ್ರಾಮದಲ್ಲಿರುವ ತನ್ನ ಪ್ರಿಯಕರನ ಮನೆಗೆ ಭೇಟಿಯಾಗಲೆಂದು ತೆರಳಿದ್ದಾರೆ. ಈ ವಿಷಯ ತಿಳಿದ ಪತಿ ರಾಮ್ ಖಿಲಾವನ್ ಆಕೆಯನ್ನು ಹಿಂಬಾಲಿಸಿಕೊಂಡು ಹೋಗಿದ್ದಾನೆ ಕೆಲ ಸಮಯದ ಬಳಿಕ ಪತ್ನಿ ಆಕೆಯ ಪ್ರಿಯಕರನ ಮನೆಯಲ್ಲಿದ್ದ ವೇಳೆ ರಾಮ್ ಖಿಲಾವನ್ ಮನೆಯೊಳಗೆ ಪ್ರವೇಶಿಸಿದ್ದಾನೆ ಈ ವೇಳೆ ಪತಿ - ಪತ್ನಿ ನಡುವೆ ಜಗಳ ನಡೆದಿದ್ದು, ಇದರಿಂದ ಕೋಪಗೊಂಡ ಪತಿ ಪತ್ನಿಯ ಮೂಗನ್ನೇ ಕಚ್ಚಿ ಗಾಯಗೊಳಿಸಿದ್ದಾನೆ.

ತೀವ್ರ ನೋವಿನಿಂದ ಪತ್ನಿ ಜೋರಾಗಿ ಕಿರುಚಿದಾಗ ನೆರೆಹೊರೆಯವರು ಬಂದು ಗಾಬರಿಗೊಂಡ ಜನ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ, ನಂತರ ಬಳಿಕ ಸ್ಥಳಕ್ಕೆ ಬಂದ ಪೊಲೀಸರು ಮಹಿಳೆಯನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಪೊಲೀಸರು ಪತಿ ರಾಮ್ ಖಿಲಾವನ್ ಅವರನ್ನು ವಶಕ್ಕೆ ಪಡೆದು ತನಿಖೆ ಆರಂಭಿಸಿದ್ದಾರೆ. (ಏಜೆನ್ಸೀಸ್​)