ನ್ಯೂಸ್

ಗಂಡ ಮಾರ್ಕೆಟ್​ನಲ್ಲಿ ಬೇರೆ ಹೆಂಗಸಿನ ಜತೆಗಿದ್ದ; ಅದನ್ನು ಕಂಡ ಹೆಂಡತಿ ಬೀದಿರಂಪ ಮಾಡಿದ್ಲು; ಮದ್ವೆಯಾಗಿ ಒಂದೇ ವರ್ಷಕ್ಕೆ ಹೀಗೆಲ್ಲ...

ನವದೆಹಲಿ: ಗಂಡ ಮಾರ್ಕೆಟ್​ನಲ್ಲಿ ಬೇರೆ ಹೆಂಗಸಿನ ಜತೆಗೆ ಇದ್ದಿದ್ದನ್ನು ಆಕಸ್ಮಿಕವಾಗಿ ಕಂಡ ಹೆಂಡತಿ ಬೀದಿರಂಪ ಮಾಡಿದ್ದಲ್ಲದೆ, ಗಂಡನ ಜತೆ ಕಿತ್ತಾಡಿಕೊಂಡಿದ್ದಾಳೆ. ಗಂಡ-ಹೆಂಡಿರ ಜಗಳವನ್ನು ಕಂಡ ಸ್ಥಳೀಯರು ಠಾಣೆಗೆ ಕರೆ ಮಾಡಿ ತಿಳಿಸಿ, ಇಬ್ಬರನ್ನೂ ಪೊಲೀಸರಿಗೆ ಒಪ್ಪಿಸಿದ್ದಾರೆ. ವಿಶೇಷವೆಂದರೆ ಇಬ್ಬರೂ ಮದುವೆಯಾಗಿ ಒಂದು ವರ್ಷವಷ್ಟೇ ಕಳೆದಿದ್ದು, ಅಷ್ಟರೊಳಗೆ ಸಂಸಾರದಲ್ಲಿ ಸಾಕಷ್ಟು ಭಿನ್ನಾಭಿಪ್ರಾಯ ಉಂಟಾಗಿದ್ದಲ್ಲದೆ, ಇದೀಗ ಬೀದಿರಂಪವೂ ನಡೆದುಹೋಗಿದೆ. ಪರಿಣಾಮ, ಪತಿ ಅದ್ನಾನ್​ ಹಾಗೂ ಪತ್ನಿ ಆಯೇಷಾ ಇಬ್ಬರೂ ಪೊಲೀಸ್ ಠಾಣೆ ಮೆಟ್ಟಿಲೇರುವಂತಾಗಿದೆ.

ಅದ್ನಾನ್​ ಹಾಗೂ ಆಯೇಷಾಗೆ 2020ರ ಫೆಬ್ರವರಿಯಲ್ಲಿ ಮದುವೆಯಾಗಿತ್ತು. ಆದರೆ ಆ ಬಳಿಕ ಇಬ್ಬರ ನಡುವೆ ಭಿನ್ನಾಭಿಪ್ರಾಯ ಉಂಟಾಗಿದ್ದು, ಅದ್ನಾನ್​ ಆಯೇಷಾಳನ್ನು ಆಕೆಯ ತವರು ಮನೆಯಲ್ಲಿ ಬಿಟ್ಟಿದ್ದ. ಆದರೆ ಇಂದು ಪತಿ ಇನ್ನೊಬ್ಬಳೊಂದಿಗೆ ಮಾರುಕಟ್ಟೆಯಲ್ಲಿ ಕಾಣಿಸಿದ್ದೇ ಪತ್ನಿಯ ಸಿಟ್ಟು ನೆತ್ತಿಗೇರಲು ಕಾರಣವಾಗಿದೆ.

ಪೊಲೀಸ್​ ಠಾಣೆಯಲ್ಲೂ ಗಂಡ-ಹೆಂಡತಿ ವಾಗ್ವಾದ ಮುಂದುವರಿದಿದೆ. ಇಬ್ಬರ ಮಧ್ಯೆ ವಿಚ್ಛೇದನದ ಅರ್ಜಿ ಪ್ರಕ್ರಿಯೆ ಜಾರಿಯಲ್ಲಿದೆ ಎಂದು ಗಂಡ ಹೇಳಿದರೆ, ಎಲ್ಲಿ ಡೈವೋರ್ಸ್ ಪೇಪರ್ ತೋರಿಸು ಎಂದು ಹೆಂಡತಿ ಪ್ರಶ್ನಿಸಿದ್ದಾಳೆ. ಡೈವೋರ್ಸ್ ಅರ್ಜಿ ಈಗಾಗಲೇ ನೀಡಲಾಗಿದೆ, ಆ ಬಗ್ಗೆ ನೀನಿನ್ನೂ ಸಹಿ ಹಾಕಿಲ್ಲ ಎಂದು ಗಂಡ ದಬಾಯಿಸಿದ್ದಾನೆ. ಇಬ್ಬರ ಮಧ್ಯೆ ಡೈವೋರ್ಸ್​ಗೆ ನಿರ್ಧಾರವಾಗಿದ್ದು, ಪ್ರಕ್ರಿಯೆ ಜಾರಿಯಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್)