ಸಾಂದರ್ಭಿಕ ಚಿತ್ರ 
ನ್ಯೂಸ್

ಹಣ, ಚಿನ್ನಕ್ಕಾಗಿ ಗೆಳೆಯನನ್ನೇ ಹತ್ಯೆಗೈದ ಪತಿ: ಕೃತ್ಯಕ್ಕೆ ಸಾಥ್​​ ನೀಡಿದ ಪತ್ನಿ..

ಕೃಷ್ಣಾ: ಹಣ ಮತ್ತು ಚಿನ್ನಕ್ಕಾಗಿ ಗೆಳೆಯನನ್ನು ಪತ್ನಿಯೊಂದಿಗೆ ಸೇರಿ ಹತ್ಯೆಗೈದು, ಶವವನ್ನು ಗುರುತು ಸಿಗದಂತೆ ನಾಶ ಮಾಡಿರುವ ಘಟನೆ ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯಲ್ಲಿ ನಡೆದಿದೆ.

ಇದನ್ನೂ ಓದಿ: ವಿದ್ಯಾರ್ಥಿನಿಯರೊಂದಿಗೆ ಅನುಚಿತವಾಗಿ ವರ್ತಿಸಿ, ಬೆದರಿಕೆ ಹಾಕಿದ್ದ ಪ್ರಿನ್ಸಿಪಾಲ್​ ಅಂದರ್​​..

ಮೃತನನ್ನು ಪುರುಷೋತ್ತಮ್ ಎಂದು ಗುರುತಿಸಲಾಗಿದ್ದು, ಮೊಹಿಂದರ್​ ಹಾಗೂ ಆತನ ಪತ್ನಿ ಕೊಲೆಗೈದ ಆರೋಪಿಗಳಾಗಿದ್ದಾರೆ. ಆರಂಭದಲ್ಲಿ ನಾಪತ್ತೆ ಪ್ರಕರಣ ಎಂದು ಭಾವಿಸಿದ್ದ ಪೊಲೀಸರು ತನಿಖೆ ನಡೆಸಿದಾಗ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ.

ಘಟನೆ ಹಿನ್ನೆಲೆ:
ಸಿಂಗ್ ನಗರದ ಪುರುಷೋತ್ತಮ್ ಎಂಬಾತನಿಗೆ 11 ವರ್ಷಗಳಿಂದ ಮೊಹಿಂದರ್ ಎಂಬ ಸ್ನೇಹಿತನಿದ್ದು, ಆತ ಆರ್ಥಿಕ ಸಂಕಷ್ಟದಲ್ಲಿದ್ದ ಮೊಹಿಂದರ್​​ಗೆ ಆಗಾಗ ಸಹಾಯ ಮಾಡುತ್ತಿದ್ದ. ಮೃತ ಬಳಿ ಯಾವಾಗಲೂ ಹಣ, ಬಂಗಾರ ಇರುವುದನ್ನು ಕಂಡ ಪತ್ನಿಯ ಗಂಡಂದಿರು ಹೇಗಾದರೂ ಮಾಡಿ ಕದಿಯಲು ಮುಂದಾಗಿ ಕೊಲೆಗೆ ಯೋಜನೆ ರೂಪಿಸಿದ್ದರು.

ಕಳೆದ ತಿಂಗಳ 31ರಂದು ಪುರುಷೋತ್ತಮ್ ಮನೆಗೆ ಕರೆಯಿಸಿಕೊಂಡಿದ್ದ ಆರೋಪಿಗಳು, ಆತನ ಬಂದೊಡನೆ ಆತನನ್ನು ವೈರ್​ನಿಂದ ಕಟ್ಟಿಹಾಕಿದ್ದಾರೆ. ಬಳಿಕ ಆತನಿಗೆ ಸಾಕಷ್ಟು ಮದ್ಯ ಕುಡಿಸಿ ಉಸಿರುಗಟ್ಟಿಸಿ ಹತ್ಯಗೈದಿದ್ದಾರೆ. ಬಳಿಕ ಮೃತನ ಬಳಿಯ ಚಿನ್ನವನ್ನೆಲ್ಲ ತೆಗೆದು ಶವವನ್ನು ಎಸೆಯಲು ಮುಂದಾಗಿದ್ದು, ಸುತ್ತಮುತ್ತ ಜನ ಇದ್ದ ಕಾರಣ ದಿಕ್ಕುತೋಚದೇ ಸುಮ್ಮನಾಗಿದ್ದಾರೆ. ಕೊನೆಗೆ ಎ.ಸಿ. ಚಾಲೂ ಮಾಡಿ ಮನೆಯಲ್ಲಿಯೇ ಇಟ್ಟಿದ್ದಾರೆ.

ಇದನ್ನೂ ಓದಿ: ಹೆರಿಗೆ ವೇಳೆಯೇ ಮಗುವಿನ ಹೆಬ್ಬೆರಳು ಕಟ್: ಮರು ಜೋಡಿಸಲು ಟೇಪ್​ ಬಳಸಿದ ಸಿಬ್ಬಂದಿ..!

ಆ ಬಳಿಕ ಮರುದಿನ ಕದ್ದ ಚಿನ್ನವನ್ನು ಗುಂಟೂರಿಗೆ ತೆಗೆದುಕೊಂಡು ಹೋಗಿ ಮಾರಾಟ ಮಾಡಿ, ಬಂದ ಹಣದಿಂದಲೇ ಸಾಲವನ್ನು ತೀರಿಸಿದ್ದಾರೆ. ನಂತರ ಅದೇ ರಾತ್ರಿ ಬಾಡಿಗೆ ಕಾರು ತೆಗೆದುಕೊಂಡು ಬಾಡಿ ಪ್ಯಾಕ್ ಮಾಡಿಕೊಂಡು ಮೂರು ವರ್ಷದ ಮಗುವನ್ನು ಕರೆದುಕೊಂಡು ರಾಜಾಜಿನಗರದ ಧವೇಶ್ವರಂ ಬ್ರಿಡ್ಜ್ ಬಳಿಯ ಕತ್ತಲ ಜಾಗಕ್ಕೆ ತೆರಳಿ ನೀರಿನ ಹರಿವು ಹೆಚ್ಚಿರುವ ಕಡೆ ಶವವನ್ನು ಬಿಸಾಡಿದ್ದರು.

ಆದರೆ, ಪುರುಷೋತ್ತಮ್ ಸುಳಿವೇ ಸಿಗದ ನಂತರ ಆತನ ಮನೆಯವರು‘ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಮೊಹೇಂದರ್ ಮನೆಯಲ್ಲಿ ಪುರುಷೋತ್ತಮ್ ಫೋನ್ ಸ್ವಿಚ್ ಆಫ್ ಆಗಿದ್ದು, ನಂತರ ಯಾರ ಸಂಪರ್ಕವೂ ಇಲ್ಲದಿರುವ ಶಂಕೆ ವ್ಯಕ್ತಪಡಿಸಿದ್ದಾರೆ. ಕೊನೆಗೆ, ತಮ್ಮದೇ ಶೈಲಿಯಲ್ಲಿ ವಿಚಾರಿಸಿದ ಬಳಿಕ ಆರೋಪಿಗಳು ತಪ್ಪೊಪಿಕೊಂಡಿದ್ದಾರೆ.(ಏಜೆನ್ಸೀಸ್​)