Rekha Gupta: ದೆಹಲಿ ಮುಖ್ಯಮಂತ್ರಿ ರೇಖಾಗುಪ್ತ ತಮ್ಮ ಪತಿಗೆ ಅಧಿಕೃತ ಕೆಲಸದಲ್ಲಿ ಭಾಗಿಯಾಗಲು ಅವಕಾಶ ನೀಡಿದ್ದಾರೆ ಎಂದು ಆಮ್ಆದ್ಮಿ ಪಕ್ಷ ಭಾನುವಾರ ಆರೋಪಿಸಿದ್ದು, ಈ ಆಡಳಿತವನ್ನು ಜನಪ್ರಿಯ ವೆಬ್ ಸಿರೀಸ್ ಆದ ಫುಲೇರಾ ಪಂಚಾಯತ್ಗೆ ಹೋಲಿಸಿದ್ದಾರೆ.
ಸರ್ಕಾರಿ ಸಭೆವೊಂದರಲ್ಲಿ ಮುಖ್ಯಮಂತ್ರಿ ಅವರ ಪಕ್ಕ ಮನೀಶ್ ಗುಪ್ತಾ ಕುಳಿತಿದ್ದ ಫೋಟೋವೊಂದನ್ನು ಹಂಚಿಕೊಂಡ ಎಎಪಿ, ರಾಜಧಾನಿಯನ್ನು ಗ್ರಾಮ ಪಂಚಾಯತ್ನಂತೆ ನಡೆಸಲಾಗುತ್ತದೆ. ಇಲ್ಲಿ ಚುನಾಯಿತರಲ್ಲದೇ ಅವರ ಕುಟುಂಬಸ್ಥರು ಆಡಳಿತ ನಡೆಸುತ್ತಿದ್ದಾರೆ ಎಂದು ಗೇಲಿ ಮಾಡಿದ್ದಾರೆ.
ಇದನ್ನೂ ಓದಿ: ಅಂತರರಾಷ್ಟ್ರೀಯ ಸಾಕ್ಷರತಾ ದಿನ; ಅತಿ ಹೆಚ್ಚು ‘ಸಾಕ್ಷರತಾ’ ಪ್ರಮಾಣ ಹೊಂದಿರುವ ರಾಜ್ಯ ಯಾವುದು ಗೊತ್ತಾ| literacy day
ದೆಹಲಿಯಲ್ಲಿ ಏನಾದರೂ ಫುಲೇರಾ ಪಂಚಾಯತ್ ಸರ್ಕಾರ ನಡೆಯುತ್ತಿದೆಯೇ? ಮುಖ್ಯಮಂತ್ರಿ ರೇಖಾಗುಪ್ತ ಅವರು ಹಲವಾರು ಅಧಿಕಾರಿಗಳೊಂದಿಗೆ ಸಭೆ ನಡೆಸುತ್ತಿದ್ದಾರೆ. ಈ ವೇಳೆ ಸಿಎಂ ಪತಿ ಮನೀಶ್ ಗುಪ್ತಾ ಅವರ ಪಕ್ಕದ ಕುರ್ಚಿಯಲ್ಲಿ ಕುಳಿತಿದ್ದಾರೆ ಎಂದು ತಿಳಿಸಿದ್ದಾರೆ.
ಹಾಗೇ ಈ ಎಎಪಿ ದೆಹಲಿ ಅಧ್ಯಕ್ಷ ಸೌರಭ್ ಭಾರದ್ವಾಜ್ ಈ ಫೋಟೋಕ್ಕೆ ಟೀಕೆ ಮಾಡಿದ್ದು, ಮುಖ್ಯಮಂತ್ರಿಯವರ ಪತಿ ಸಭೆಗಳಲ್ಲಿ ಭಾಗವಹಿಸುತ್ತಾರೆ. ಅಧಿಕಾರಿಗಳೊಂದಿಗೆ ಸಂವಹನ ನಡೆಸುತ್ತಾರೆ. ಹಾಗೆಯೇ, ನಿರ್ಧಾರ ತೆಗೆದುಕೊಳ್ಳಲು ಸಹಾಯ ಮಾಡುತ್ತಾರೆ ಎಂದು ಆರೋಪಿಸಿದ್ದಾರೆ.
ದೆಹಲಿ ಸರ್ಕಾರ ಫುಲೇರಾ ಪಂಚಾಯತ್ ಆಗಿ ಬದಲಾವಣೆಗೊಳ್ಳುತ್ತಿದೆ. ಈ ವೆಬ್ ಸಿರೀಸ್ನಲ್ಲಿ ಮಹಿಳಾ ಸರ್ಪಂಚ್ ಅವರ ಪತಿ ನಿಜವಾದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದರೆ, ಇಂದು ದೆಹಲಿಯ ಸಿಎಂ ಪತಿ ಅಧಿಕೃತ ಸಭೆಗಳಲ್ಲಿ ಕುಳಿತಿರುವುದನ್ನು ಕಾಣಬಹುದು. ಇದು ಸಂಪೂರ್ಣವಾಗಿ ಕಾನೂನು ಭಾಹಿರ. ರಾಷ್ಟ್ರದ ರಾಜಧಾನಿಯಲ್ಲಿ ಪ್ರಜಾಪ್ರಭುತ್ವ ಹಾಗೂ ಸಾಂವಿಧಾನಿಕ ನಿಯಮಗಳನ್ನು ಅಪಹಾಸ್ಯ ಮಾಡಲಾಗುತ್ತದೆ ಎಂದು ಭಾರದ್ವಾಜ್ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಬಿಜೆಪಿಯ ಬೂಟಾಟಿಕೆಗಳ ವಿರುದ್ಧ ಸಿಡಿದೆದ್ದ ಭಾರದ್ವಾಜ್ ಈ ಪಕ್ಷವು ವಂಶಪಾರಂಪರ್ಯ ರಾಜಕೀಯಕ್ಕಾಗಿ ಕಾಂಗ್ರೆಸ್ ಅನ್ನು ಟೀಕಿಸುತ್ತಿತ್ತು ಆದರೆ, ಈಗ ಅವರು ಅದನ್ನೇ ಪ್ರಚಾರ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಇದು ವಂಶಪಾರಂಪರ್ಯ ರಾಜಕೀಯವಲ್ಲದಿದ್ದರೆ, ಇದೇನು?ವಿಶ್ವದ ಅತಿದೊಡ್ಡ ಪಕ್ಷದ ಮುಖ್ಯಮಂತ್ರಿಗೆ ಒಬ್ಬ ಕಾರ್ಯಕರ್ತನೂ ಇಲ್ಲವೇ? ಅವರ ಪತಿ ಯಾಕೆ ಅಧಿಕೃತ ಸಭೆಗಳಲ್ಲಿ ಭಾಗವಹಿಸಿಬೇಕು ಎಂದು ಪ್ರಶ್ನಿಸಿದ್ದಾರೆ. (ಏಜೆನ್ಸೀಸ್)