ಬೆಂಗಳೂರು: ಮೊಸಳೆಗಳು ನೋಡಲು ಭಯಂಕರವಾಗಿರುವಂತೆ, ಅವುಗಳ ದಾಳಿಯು ಇನ್ನಷ್ಟು ಭಯಾನಕವಾಗಿರುತ್ತದೆ. ಅವು ನೀರಿನಲ್ಲಿ ತಮ್ಮ ಗುರಿ ನಿಗದಿಪಡಿಸಿದರೆ ತಪ್ಪಿಸಿಕೊಳ್ಳುವುದು ಅಸಾಧ್ಯ. ಅಂತಹ ಮೊಸಳೆಗಳು ಗಂಭೀರವಾಗಿ ಹಸಿದಿದ್ದರೆ ಪರಿಸ್ಥಿತಿ ಏನಾಗಬೇಡ. ಹೌದು ಇಲ್ಲಾಗಿರುವುದೂ ಅದೇ..ಭಯಂಕರ ಹಸಿವಿನಿಂದ ಬಳಲಿದ್ದ ಮೊಸಳೆ ಮತ್ತೊಂದು ಮೊಸಳೆಯನ್ನು ಕೊಂದು ತಿಂದಿದೆ.
ಇದರ ಸಂಬಂಧದ ವೀಡಿಯೋ ಈಗ ಇಂಟರ್ನೆಟ್ನಲ್ಲಿ ಸದ್ದು ಮಾಡುತ್ತಿದೆ. ಈ ವೀಡಿಯೋ ನೋಡಿದ ನೆಟ್ಟಿಗರು ಹಸಿದ ಮೊಸಳೆಗಳೂ ಹೀಗೆ ಮಾಡುತ್ತವೆಯೇ? ಎಂದು ಕಾಮೆಂಟ್ ಮಾಡುತ್ತಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಬೃಹತ್ ಗಾತ್ರದ ಹಸಿದ ಮೊಸಳೆ ಬೇಟೆಗಾಗಿ ಅಲೆದಾಡುತ್ತದೆ. ಆದರೆ ಯಾವ ಪ್ರಾಣಿಯೂ ಕಾಣಲಿಲ್ಲ. ಕೊನೆಗೆ ಮತ್ತೊಂದು ಮೊಸಳೆಯ ಮೇಲೆ ದಾಳಿ ಮಾಡಿದೆ. ಆಗ ಅದನ್ನು ಬಲವಾಗಿ ಕಚ್ಚಿ ಪ್ರಾಣ ತೆಗೆದು, ಬಳಿಕ ಅದನ್ನು ತನ್ನ ಬಾಯಿಯಲ್ಲಿ ಹಿಡಿದು ಸ್ವಲ್ಪದೂರ ಎಳೆದೊಯ್ದಿದೆ. ಇಡೀ ಘಟನೆಯನ್ನು ಅದೇ ನೀರಿನಲ್ಲಿ ದೋಣಿಯಲ್ಲಿದ್ದವರು ತಮ್ಮ ಮೊಬೈಲ್ಗಳಲ್ಲಿ ಸೆರೆ ಹಿಡಿದಿದ್ದಾರೆ.
ಸದ್ಯ ಈ ವೀಡಿಯೋಗೆ ನೆಟಿಜನ್‌ಗಳು ವಿಭಿನ್ನ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ. ಕೆಲವರು, "ಅಯ್ಯೋ, ಇವು ಹೀಗೂ ಮಾಡುತ್ತವೆಯೇ?" ಎಂದು ಪ್ರಶ್ನಿಸುತ್ತಿದ್ದಾರೆ. ಈ ವೀಡಿಯೊ ಪ್ರಸ್ತುತ 18 ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ.