ನ್ಯೂಸ್

ನೂರಾರು ಮಂದಿ ಮನೆಗೆ ನುಗ್ಗಿ ಬೆಡ್​ರೂಮ್​ನಲ್ಲಿದ್ದ ದಂತವೈದ್ಯೆಯನ್ನೇ ಅಪಹರಿಸಿದ್ರು; ಕಾರಣವಿದು..

ತೆಲಂಗಾಣ: ನೂರಾರು ಮಂದಿ ಮನೆಗೆ ನುಗ್ಗಿ ದಾಳಿ ನಡೆಸಿದ್ದಲ್ಲದೆ ಬೆಡ್​ರೂಮ್​ನಲ್ಲಿದ್ದ ದಂತವೈದ್ಯೆಯನ್ನೇ ಅಪಹರಿಸಿಕೊಂಡು ಹೋದ ಪ್ರಕರಣವೊಂದು ನಡೆದಿದೆ. ಇತ್ತೀಚೆಗೆ ನಡೆದ ಈ ಪ್ರಕರಣದ ವಿಡಿಯೋ ವೈರಲ್​ ಕೂಡ ಆಗಿದೆ.

ತೆಲಂಗಾಣದ ರಂಗರೆಡ್ಡಿ ಪ್ರದೇಶದ ದಂತವೈದ್ಯೆ, 24 ವರ್ಷದ ವೈಶಾಲಿ ಅಪಹರಣಕ್ಕೆ ಒಳಗಾದಾಕೆ. ಈ ಬಗ್ಗೆ ಆಕೆಯ ಪಾಲಕರು ಪೊಲೀಸರಿಗೆ ದೂರು ನೀಡಿದ್ದು, ತನಿಖೆಗಿಳಿದ ಪೊಲೀಸರು ಆಕೆಯನ್ನು ಪತ್ತೆ ಮಾಡಿ ರಕ್ಷಿಸಿದ್ದಾರೆ ಮತ್ತು ಕೆಲವು ಆರೋಪಿಗಳನ್ನು ಬಂಧಿಸಿದ್ದಾರೆ.

ದಂತವೈದ್ಯೆಯ ಮನೆ ಎದುರಿನ ಕೆಫೆಯ ಮಾಲೀಕ ನವೀನ್​ ರೆಡ್ಡಿ ಈ ಅಪಹರಣದ ರೂವಾರಿ ಎನ್ನಲಾಗಿದೆ. ಈಕೆಯನ್ನು ಮದುವೆಯಾಗಲು ಆತ ಒತ್ತಾಯಿಸುತ್ತಿದ್ದು, ಅದಕ್ಕೆ ಒಪ್ಪದ ಈಕೆ ಒಪ್ಪದ ಹಿನ್ನೆಲೆಯಲ್ಲಿ ಅಪಹರಿಸಿದ್ದಾನೆ ಎನ್ನಲಾಗಿದೆ. ಅಲ್ಲದೆ ಆತ ತಾನು ವೈದ್ಯೆಯನ್ನು ಗುಟ್ಟಾಗಿ ವರಿಸಿದ್ದಾಗಿ ಹೇಳಿದ್ದು, ಆಕೆ ನಿರಾಕರಿಸಿದ್ದಾಳೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. -ಏಜೆನ್ಸೀಸ್