Viral video; ಹ್ಯುಮನಾಯ್ಡ್ ರೋಬೋಟ್ ಒಂದು ದುಬೈನ ರಸ್ತೆಗಳಲ್ಲಿ ಓಡಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಎಮಿರೇಟ್ಸ್ ಟವರ್ ಬಳಿ ಈ ರೋಬೋಟ್ ಕಾಣಿಸಿಕೊಂಡಿದ್ದು, ರಸ್ತೆಯಲ್ಲಿ ಹೋಗುತ್ತಿದ್ದ ವಾಹನ ಸವಾರರು ಈ ರೋಬೋಟ್ ಓಡಾಟದ ದೃಶ್ಯವನ್ನು ಸೆರೆಹಿಡಿದಿದ್ದಾರೆ.
ಇದನ್ನೂ ಓದಿ: ಮಾಲೆಗಾಂವ್ ಸ್ಫೋಟ ಪ್ರಕರಣ;ಆರ್ಎಸ್ಎಸ್ ಮುಖ್ಯಸ್ಥರನ್ನು ಬಂಧಿಸಲು ಆದೇಶಿಸಲಾಗಿತ್ತು; ನಿವೃತ್ತ ಎಟಿಎಸ್ ಅಧಿಕಾರಿ| malegaon
ವೀಡಿಯೊದಲ್ಲಿ, ಮಾನವ ರೂಪವನ್ನು ಹೋಲುವ ಹ್ಯುಮನಾಯ್ಡ್ ರೋಬೋಟ್, ಪಾದಚಾರಿ ಮಾರ್ಗದಲ್ಲಿ ಸುಲಭವಾಗಿ ಸಂಚರಿಸುವಾಗ ನೋಡುಗರನ್ನು ಆಶ್ಚರ್ಯಚಕಿತಗೊಳಿಸಿದೆ. ಮನುಷ್ಯರಂತೆ ರೋಬೋಟ್ ಸಹ ರಸ್ತೆ ದಾಟುತ್ತಿರುವುದು ಕಂಡುಬಂದಿದೆ. ಅದರ ಆಪರೇಟರ್ ಆಗಿರುವ ವ್ಯಕ್ತಿಯೊಬ್ಬರು ಅದರ ಹಿಂದೆ ನಡೆದುಕೊಂಡು ಹೋಗುತ್ತಿರುವುದನ್ನು ಕೂಡ ಕಾಣಬಹುದಾಗಿದೆ.
ಹ್ಯುಮನಾಯ್ಡ್ ರೋಬೋಟ್‌ಗಳು ಜನರಂತೆ ಕಾಣುವ ಮತ್ತು ಚಲಿಸುವ ಯಂತ್ರಗಳಾಗಿವೆ. ಟೆಕ್ ಕಂಪನಿ Nvidia ಪ್ರಕಾರ, ಅವುಗಳನ್ನು ಎತ್ತುವುದು, ಸಾಗಿಸುವುದು, ವಿಂಗಡಿಸುವುದು, ಕಾರ್ಖಾನೆಗಳು ಅಥವಾ ಅಂಗಡಿಗಳಲ್ಲಿ ಕೆಲಸ ಮಾಡುವಂತಹ ವಿವಿಧ ಕೆಲಸಗಳಲ್ಲಿ ಮನುಷ್ಯರಿಗೆ ಸಹಾಯ ಮಾಡಲು ವಿನ್ಯಾಸಗೊಳಿಸಲಾಗಿದೆ.
(ಏಜೆನ್ಸೀಸ್)
ಈ ವಿಡಿಯೋ ವೈರಲ್ ಆದ ತಕ್ಷಣ, ಸೋಷಿಯಲ್ ಮೀಡಿಯಾ ಬಳಕೆದಾರರು ಆಶ್ಚರ್ಯ ಮತ್ತು ಹಾಸ್ಯದಿಂದ ಕಾಮೆಂಟ್ಗಳನ್ನು ಮಾಡಿದ್ದಾರೆ. ದುಬೈ ನನ್ನನ್ನು ವಿಸ್ಮಯಗೊಳಿಸುವಲ್ಲಿ ಎಂದಿಗೂ ವಿಫಲವಾಗುವುದಿಲ್ಲ ಎಂದು ಒಬ್ಬ ಬಳಕೆದಾರರು ಕಾಮೆಂಟ್ ಮಾಡಿದರೆ, ಮತ್ತೊಬ್ಬ ಬಳಕೆದಾರರು ಮೂತ್ರ ವಿಸರ್ಜನೆಗೆ ಆತುರಪಡುತ್ತೀಯಾ ಅಥವಾ ಕೆಲಸ ಹುಡುಕುತ್ತಿದ್ದೀಯಾ ಹೇ ರೋಬೋಟ್ ಎಲ್ಲಿಗೆ ಹೋಗುತ್ತಿದ್ದೀಯಾ ಎಂದು ತಮಾಷೆ ಮಾಡಿದ್ದಾರೆ.