ನ್ಯೂಸ್

ಹಗ್‌ ಕರ್ಟನ್‌ ಧರಿಸಿ- ಆತಂಕವಿಲ್ಲದೇ ಪ್ರೀತಿಪಾತ್ರರನ್ನು ತಬ್ಬಿಕೊಳ್ಳಿ!

suchetana

ರಿಯೊ: ಕರೊನಾದ ಈ ಸಮಯದಲ್ಲಿ ಸಾಮಾಜಿಕ ಅಂತರ ಎಂಬುದು ಬಹಳ ಮುಖ್ಯವಾಗಿ ಬೇಕಾದದ್ದು. ಯಾರನ್ನೂ ಯಾರೂ ನಂಬದ ಪರಿಸ್ಥಿತಿ ಇದು. ಬೇರೆ ಯಾರನ್ನು ಏಕೆ? ನಮ್ಮನ್ನೇ ನಾವು ಮಾಡದ ಸ್ಥಿತಿ ಇದು.

ಇಂಥ ಸಮಯದಲ್ಲಿ ಪ್ರೀತಿ ಪಾತ್ರರಾದವನ್ನು ತಬ್ಬಿಕೊಳ್ಳುವುದು ಅಸಾಧ್ಯವೇ ಸರಿ. ಕೈಕುಲುಕಿದರೂ ಸೋಂಕು ದೇಹ ಪ್ರವೇಶಿಸುವ ಈ ಹೊತ್ತಿನಲ್ಲಿ ಅಪ್ಪಿಕೊಳ್ಳುವುದನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ.

ಇದಕ್ಕಾಗಿಯೇ ಬ್ರೆಜಿಲ್‌ನ ಉದ್ಯಮಿಯೊಬ್ಬರು ಪರಿಹಾರ ಕಂಡು ಹಿಡಿದಿದ್ದಾರೆ. ’ಹಗ್‌ ಕರ್ಟನ್‌’ ಎಂಬ ಸುರಕ್ಷಿತ ಕವಚವನ್ನು ಇವರು ತಯಾರಿಸಿದ್ದಾರೆ.

ಪಿಪಿಇ ಕಿಟ್‌ ಹಾಕಿಕೊಂಡು ವೈದ್ಯರು ಕರೊನಾ ಸೋಂಕಿತರ ಸೇವೆಯಲ್ಲಿ ತೊಡಗುವಂತೆ ಹಗ್‌ ಕರ್ಟನ್‌ ಹಾಕಿಕೊಂಡು ಅಪ್ಪಿಮುದ್ದಾಡಬಹುದು ಎನ್ನುವುದು ಅವರ ವಾದ. ಲಾಕ್‌ಡೌನ್‌ ವೇಳೆ ತಮ್ಮ ಪ್ರೀತಿ ಪಾತ್ರರಾದವರನ್ನು ಸನಿಹದಿಂದ ನೋಡಲಾಗದೇ ಬೇಸರಗೊಂಡಿದ್ದಾರೆ. ಅವರು ಏಕಾಏಕಿ ಎದುರಾದಾಗ ಅಪ್ಪಿಕೊಳ್ಳುವಂತೆಯೂ ಇಲ್ಲ. ಮಾತ್ರವಲ್ಲದೇ ತಮ್ಮ ತೀರಾ ಹತ್ತಿರ ಸಂಬಂಧಿಗಳೂ ಚಿಕಿತ್ಸೆಗೆ ಒಳಗಾಗುತ್ತಿದ್ದ ವೇಳೆ ಅವರ ಬಳಿ ಇದ್ದು ಹಾರೈಕೆ ಮಾಡಲಾಗದೇ ವ್ಯಥೆ ಪಟ್ಟಿದ್ದಾರೆ. ಈ ಅಂಶಗಳನ್ನು ಗಮನದಲ್ಲಿ ಇಟ್ಟುಕೊಂಡು ಇದನ್ನು ತಯಾರಿಸಿದ್ದೇನೆ ಎಂದು ಅವರು ಹೇಳಿದ್ದಾರೆ.

ಇದನ್ನು ಬ್ರೆಜಿಲ್‌ನ ನರ್ಸಿಂಗ್‌ ಹೋಂನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 93 ವರ್ಷದ ಡೀಸರ್‌ ಎಂಬಾಕೆ, 70 ದಿನಗಳ ಬಳಿಕ ಮೊದಲ ಬಾರಿಗೆ ತಮ್ಮ ಮಗಳನ್ನು ಭೇಟಿಯಾಗಿದ್ದು, “ಹಗ್‌ ಕಾರ್ಟನ್‌’ ಧರಿಸುವ ಮೂಲಕ ಪ್ರೀತಿಯ ಅಪ್ಪುಗೆ ನೀಡಿದ್ದಾರೆ.

ಸಾಮಾಜಿಕ ಅಂತರ ನಿಯಮವೂ ಪಾಲನೆಯೊಂದಿಗೆ ಪ್ರೀತಿ ಪಾತ್ರರನ್ನು ಸನಿಹದಿಂದ ನೋಡಲು ಅವಕಾಶ ಮಾಡಿಕೊಟ್ಟ ಉದ್ಯಮಿಯ ಈ ನಡೆಗೆ ಮೆಚ್ಚುಗೆ ವ್ಯಕ್ತವಾಗಿದ್ದು, ವೈದ್ಯರು ಕೂಡ “ಹಗ್‌ ಕಾರ್ಟನ್‌’ ಬಳಕೆಗೆ ಅರ್ಹ ಎಂದು ಹೇಳಿದ್ದಾರೆ ಎನ್ನಲಾಗಿದೆ. ಇದು ಯಶಸ್ವಿಯಾದರೆ ಬೇರೆ ದೇಶಗಳಿಂದ ಬರುವ ದಿನಗಳು ದೂರವಿಲ್ಲ. (ಏಜೆನ್ಸೀಸ್‌)