ನ್ಯೂಸ್

ಅವರ ದ್ವೇಷಕ್ಕೆ ನಾನು ಬಲಿಯಾದೆ ಎಂದ ಮಿಕ್ಸಿ ಬ್ಲಾಸ್ಟ್​ ಸಂತ್ರಸ್ತ..!

ಹಾಸನ: ಇತ್ತೀಚೆಗೆ ಕೊರಿಯರ್​ ಆಫೀಸಿಗೆ ಬಂದಿದ್ದ ಪಾರ್ಸೆಲ್​ ಒಂದು ಸ್ಫೋಟವಾಗಿ ಅಂಗಡಿ ಮಾಲಿಕನಿಗೆ ಭಾರಿ ಗಾಯಗಾಳು ಆಗುವಂತೆ ಮಾಡಿತ್ತು. ಈ ಘಟನೆಯಿಂದಾಗಿ ಅನೇಕರು ಇದು ಮಂಗಳೂರಿನಲ್ಲಿ ನಡೆದ ಕುಕ್ಕರ್​ ಬ್ಲಾಸ್ಟ್​ ರೀತಿಯೇ ಇದೆ ಎಂದು ಅಭಿಪ್ರಾಯ ಪಟ್ಟಿದ್ದರು. ಆದರೆ ನಂತರ ಇದು ಉಗ್ರಗಾಮಿಗಳಿಗೆ ಸಂಬಂಧಿಸಿದ ವಿಷಯವಲ್ಲ ಎನ್ನುವುದು ತಿಳಿದು ಬಂದಿತ್ತು. ಇದೀಗ ಸ್ಫೋಟದಲ್ಲಿ ಗಾಯಗೊಂಡಿದ್ದ ಸಂತ್ರಸ್ತ ಹೇಳಿಕೆ ನೀಡಿದ್ದು ಪಾರ್ಸೆಲ್ ಹಿಂದಿನ ಅಸಲಿಯತ್ತನ್ನು ಹೇಳಿದ್ದಾರೆ.​

ಸಂತ್ರಸ್ತ ಶಶಿ 'ಮಹಿಳೆಯೊಬ್ಬರು ಇತ್ತೀಚೆಗೆ ಮಿಕ್ಸಿ ಹಿಂದುರುಗಿಸಿದ್ದರು. ಅವರು ಹಿಂತಿರುಗಿಸುವಾಗ ಬಾಕ್ಸ್ ಒಪನ್ ಇತ್ತು. ನಮಗೆ ಈ ಪಾರ್ಸೆಲ್ ಬೇಡ ಎಂದು ಆ ಮಹಿಳೆ ಹೇಳಿದ್ದರು. ವಾಪಸ್ ಕಳಿಸಲು 300 ರೂ. ಆಗಲಿದೆ ಎಂದು ತಿಳಿಸಿದ್ದೆವು. 300 ಕೊಡಲ್ಲ ಬೇಕಾದ್ರೆ ಬಿಡಿ ನಮಗೆ ಬೇಡ ಎಂದು ಆ ಮಹಿಳೆ ಹೇಳಿದ್ದರು.

ಈ ಕೊರಿಯರ್​ ಬೆಂಗಳೂರಿನ ಪೀಣ್ಯದಿಂದ ಬಂದಿತ್ತು . ಎಲ್ಲಿಂದ ಕಳಿಸಲಾಗುತ್ತಿದೆ ಎಂದು ಗೊತ್ತಾಗಲು ವಿಳಾಸ ಇರಲಿಲ್ಲ. ವಸಂತ ಎಂಬ ಮಹಿಳೆಯ ವಿಳಾಸಕ್ಕೆ ಈ ಪಾರ್ಸೆಲ್ ಬಂದಿತ್ತು. ನಾನು ಆ ಮಿಕ್ಸಿಯನ್ನ ಎತ್ತಿಡಲು ಮುಂದಾದಾಗ ಮಿಕ್ಸಿ ಬಾಕ್ಸ್​ನಿಂದ ಕೆಳಗೆ ಬಿದ್ದಿದೆ. ಮಿಕ್ಸಿ ಕೆಳಗೆ ಬಿದ್ದಾಗ ತೀವ್ರ ಸ್ಪೋಟ ಆಗಿದೆ. ಸ್ಪೋಟದ ತೀವ್ರತೆಗೆ ನನ್ನ ಕಿವಿ ಕೇಳದ ಹಾಗೆ ಆಗಿತ್ತು. ತೀವ್ರ ಗಾಯದ ಜೊತೆಗೆ ನನ್ನ ಅಂಗಡಿ ಒಳಗಿನ ಉಪಕರಣಗಳು ಛಿದ್ರವಾಗಿದೆ. ಅವರ ದ್ವೇಷಕ್ಕೆ ನಾನು ಬಲಿಯಾದೆ' ಎಂದಿದ್ದಾರೆ.

'ಈ ಹಿಂದೆ ಕೂಡ 50 ರೂ ಹಣ ಆ ವ್ಯಕ್ತಿ ಕಳಿಸಿದ್ದನಂತೆ. ಮಹಿಳೆ ಮತ್ತು ಆ ವ್ಯಕ್ತಿ ನಡುವೆ ಯಾವ ಸಂಬಂಧ ಇತ್ತೊ ಗೊತ್ತಿಲ್ಲ. ಆಕೆಯನ್ನ ಕೊಲ್ಲಬೇಕೆಂದು ಆ ವ್ಯಕ್ತಿ ಉದ್ದೇಶಕ್ಕೆ ನಾನು ಬಲಿಯಾದೆ. ಪ್ರಕರಣ ನಂತರ ಆ ವ್ಯಕ್ತಿಯನ್ನ ಪೊಲೀಸ್ ಬಂಧಿಸಿದ್ದಾರೆಂದು ಹೇಳ್ತಿದ್ದಾರೆ' ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.