ನ್ಯೂಸ್

ಭಾರತಕ್ಕೆ ಬಂತು ವಾಟ್ಸ್​ಆ್ಯಪ್​ ಪೇ! ನಿಮ್ಮ ಮೊಬೈಲ್‌ನಲ್ಲಿ ವಾಟ್ಸಾಪ್ ಪೇ ಆ್ಯಕ್ಟಿವೇಟ್ ಮಾಡಿಕೊಳ್ಳುವುದು ಹೇಗೆ?

Mandara

ಬೆಂಗಳೂರು: ವಾಟ್ಸ್​ಆ್ಯಪ್​ ಮೂಲಕ ಡಿಜಿಟಲ್​ ಪೇಮೆಂಟ್​ ಇದೀಗ ಭಾರತದಲ್ಲೂ ಆರಂಭವಾಗಿದೆ. ಇಷ್ಟು ದಿನ ಕೇವಲ ಸಂವಹನಕ್ಕೆ ಬಳಕೆಯಾಗುತ್ತಿದ್ದ ವಾಟ್ಸ್​ಆ್ಯಪ್​ ಇದೀಗ ಹಣ ಪಾವತಿಗೂ ಬಳಕೆಯಾಗಲಿದೆ. ಅಷ್ಟಕ್ಕೂ ಈ ವಾಟ್ಸ್​ಆ್ಯಪ್​ನಲ್ಲಿ ಹಣ ಕಳುಹಿಸುವುದು ಹೇಗೆ? ಈ ಪೇಮೆಂಟ್​ ಮಾರ್ಗವನ್ನು ಬಳಸುವುದು ಹೇಗೆ ಎನ್ನುವ ನಿಮ್ಮ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.

ಬಳಕೆ ಹೇಗೆ?

– ಪ್ಲೇಸ್ಟೋರ್​ನಲ್ಲಿ ವಾಟ್ಸ್​ಆ್ಯಪ್​ ಅನ್ನು ಅಪ್​ಡೇಟ್​ ಮಾಡಿಕೊಳ್ಳಿ

– ಚಾಟ್​ ವಿಂಡೋನ ಬಡ ಮೇಲ್ಭಾಗದಲ್ಲಿ ಕಾಣುವ ಮೂರು ಚುಕ್ಕೆಗಳ ಮೇಲೆ ಕ್ಲಿಕ್​ ಮಾಡಿ

– ಪೇಮೆಂಟ್​ ವಿಂಡೋ ತೆರೆದುಕೊಳ್ಳುತ್ತದೆ. ಅದರಲ್ಲಿ ಆ್ಯಡ್​ ಪೇಮೆಂಟ್​ ಮೇಲೆ ಕ್ಲಿಕ್ಕಿಸಿ

– ಅಕ್ಸೆಪ್ಟ್​ ಮೇಲೆ ಕ್ಲಿಕ್ಕಿಸಿ

– ಬ್ಯಾಂಕ್​ಗಳ ಪಟ್ಟಿ ತೆರೆದುಕೊಳ್ಳುತ್ತದೆ. ನಿಮ್ಮ ಬ್ಯಾಂಕ್​ ಆಯ್ಕೆ ಮಾಡಿ

– ಫೋನ್​ ನಂಬರ್​ ಮೂಲಕ ಬ್ಯಾಂಕ್​ ಖಾತೆ ಖಾತರಿ ಪಡಿಸಿಕೊಳ್ಳಿ

– ನಿಮ್ಮ ಖಾತೆಯನ್ನು ದೃಢೀಕರಿಸಲು ವಾಟ್ಸ್​ಆ್ಯಪ್​ ಟೆಕ್ಸ್ ಮೆಸೇಜ್​ ಕಳುಹಿಸಲು ಕೇಳುತ್ತದೆ. ಅದಕ್ಕೆ ಅನುಮತಿ ನೀಡಿ

– ಮತ್ತೊಮ್ಮೆ ಫೋನ್​ ನಂಬರ್​ ಕೇಳಲಾಗುತ್ತದೆ. ನಂಬರ್​ ಹಾಕಿದ ನಂತರ ನಿಮ್ಮ ಖಾತೆ ದೃಢೀಕರಣವಾಗುತ್ತದೆ

– ಡನ್​ ಮೇಲೆ ಕ್ಲಿಕ್ಕಿಸಿ, ನಂತರ ನೀವು ಪೇಮೆಂಟ್​ ಪೇಜ್​ಗೆ ಅಕ್ಸೆಸ್​ ಪಡೆಯಬಹುದು

ಪಾವತಿ ಹೇಗೆ?

– ಯಾರಿಗೆ ಹಣ ಕಳುಹಿಸಬೇಕೋ ಅವರ ಚಾಟ್​ ವಿಂಡೋ ತೆರೆಯಿರಿ

– ಕ್ಲಿಪ್​ ಐಕಾನ್​ ಮೇಲೆ ಕ್ಲಿಕ್ಕಿಸಿ

– ರೂಪಾಯಿ ಐಕಾನ್​ ಮೇಲೆ ಕ್ಲಿಕ್ಕಿಸಿ

– ಎಷ್ಟು ಹಣ ಕಳುಹಿಸಬೇಕು ಎನ್ನುವುದನ್ನು ನಮೂದಿಸಿ

– ನಿಮ್ಮ ಯುಪಿಐ ಪಿನ್​ ನಮೂದಿಸಿ

– ಹಣ ವರ್ಗಾವಣೆ ಸಂದೇಶದಿಂದ ಖಾತರಿ ಪಡಿಸಿಕೊಳ್ಳಿ