ನವದೆಹಲಿ: ಇತ್ತೀಚಿನ ದಿನಗಳಲ್ಲಿ ಅದರಲ್ಲೂ ಡಿಜಿಟಲ್ ಯುಗದಲ್ಲಿ ಎಲ್ಲವೂ ಸರಳ, ಸುಲಭವಾಗಿದೆ. ಜಗತ್ತಿನ ಯಾವುದೇ ಮೂಲೆಯಲ್ಲಿ ಎಂತಹದ್ದೇ ಘಟನೆಗಳು ಸಂಭವಿಸಿದರು ಕೇವಲ ಕೆಲವೇ ನಿಮಿಷಗಳಲ್ಲಿ ಆ ವಿಷಯವನ್ನು ತಲುಪಿಸುವ ಕೆಲಸವನ್ನು ಮಾಡುವಲ್ಲಿ ಸಾಮಾಜಿಕ ಜಾಲತಾಣಗಳು ಪ್ರಮುಖವಾಗಿದೆ.
ಸೋಷಿಯಲ್ ಮೀಡಿಯಾದಲ್ಲಿ ಮೆಟ್ರೋ ರೈಲಿನಲ್ಲಿ ಮಾಡಿದ ಡ್ಯಾನ್ಸ್ ವಿಡಿಯೋ, ವಿಶೇಷ ಬಗೆಯ ತಿಂಡಿ-ತಿನಿಸುಗಳನ್ನು ಮಾಡುವ ಪಾಕಶಾಲೆಯ ದೃಶ್ಯಗಳು ಸೇರಿದಂತೆ ಹಲವು ಕುತೂಹಲಕಾರಿ ವಿಷಯಗಳ ವಿಡಿಯೋ ಹೆಚ್ಚಿನ ಸಂಖ್ಯೆಯಲ್ಲಿ ಟ್ರೆಂಡ್ ಆಗುತ್ತಿದೆ.
ಸದ್ಯ ಈ ಸಾಲಿಗೆ ಉಪಯುಕ್ತ ವಿಷಯಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಬಹಳ ವೈರಲ್ ಆಗುತ್ತಿದೆ. ದಿನನಿತ್ಯ ಆಫೀಸ್ಗೆ ಹೋಗುವವರು, ಶಾಲೆಗೆ ಹೋಗುವ ವಿದ್ಯಾರ್ಥಿಗಳು ತಾವು ಧರಿಸುವ ಟೈ ಅನ್ನು ಕಟ್ಟಲು ಹರಸಾಹಸ ಪಡುತ್ತಾರೆ. ಈ ರೀತಿ ಪರದಾಡುವವರಿಗೆ ಇಲ್ಲೊಬ್ಬರು ಸುಲಭವಾಗಿ, ಸರಳವಾಗಿ ಕೇವಲ ಮೂರು ಸ್ಟೆಪ್ಸ್ನಲ್ಲಿ ಟೈ ಕಟ್ಟುವುದು ಹೇಗೆ ಎಂಬುದನ್ನು ವಿಡಿಯೋ ಮುಖೇನ ತೋರಿಸಿದ್ದಾರೆ ವೀಕ್ಷಿಸಿ.