ನ್ಯೂಸ್

ಚಿಟಿಕೆ ಹೊಡೆಯುವಷ್ಟರಲ್ಲಿ ಆಗುತ್ತೆ ಅರ್ಧ ಡಜನ್ ಚಪಾತಿ! ಮನೆಗೆ ಬಂದವರು ಎಂದಿಗೂ ಕೈರುಚಿ ಮರೆಯಲ್ಲ

Webdesk - Savina Naik

 ನವದೆಹಲಿ: ತಾವು ಮಾಡಿದ ಚಪಾತಿ ಸಾಫ್ಟ್ ಆಗಿರಬೇಕೆಂದು ಬಯಸುತ್ತಾರೆ. ಆದರೆ ಎಷ್ಟೋ ಬಾರಿ ಕೆಲ ಮಂದಿ ಮಾಡುವ ಚಪಾತಿ ತಿನ್ನುವಾಗ ಹಪ್ಪಳದಂತೆ ಕರಂ-ಕರಂ ಎಂಬ ಶಬ್ಧವನ್ನುಂಟು ಮಾಡುತ್ತದೆ. ಆದರೆ ಇಲ್ಲಿ ವೈರಲ್​​ ಆಗಿರುವ ವಿಡಿಯೋದಲ್ಲಿ ಮಹಿಳೆ ಒಂದೇ ಬಾರಿಗೆ 6 ಚಪಾತಿ ಮಾಡುವ ವಿಧಾನವನ್ನು ತೋರಿಸಿ ಕೊಟ್ಟಿದ್ದಾಳೆ. 

ಈ ವೀಡಿಯೊವನ್ನು  @Patnasehainji ಪುಟದಲ್ಲಿ ಪೋಸ್ಟ್ ಮಾಡಲಾಗಿದೆ. ಇದನ್ನು ಈಗಾಗಲೇ 6 ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ಆಕೆ ಚಪಾತಿ ಮಾಡುವ ರೀತಿ ನೋಡಿದರೆ ನೀವು ಬೆರಗಾಗುತ್ತೀರಿ ಎಂದು ಶೀರ್ಷಿಕೆ ನೀಡಿದ್ದಾರೆ.

ವಿಡಿಯೋದಲ್ಲಿ ಅಡುಗೆ ಮನೆಯಲ್ಲಿ ಮಹಿಳೆ ಚಪಾತಿ ಮಾಡುತ್ತಿದ್ದಾಳೆ. ಇದಕ್ಕಾಗಿ ಚಪಾತಿ ಉಂಡೆಗಳನ್ನು ಒಂದರ ಮೇಲೊಂದರಂತೆ ತೆಳುವಾದ ಕವರ್ ಗಳ ಮೇಲೆ ಹಾಕಿದಳು. ಉಂಡೆಗಳು ಅಂಟಿಕೊಳ್ಳದಂತೆ ಮಧ್ಯದಲ್ಲಿ ಕವರ್‌ಗಳನ್ನು ಹಾಕಿ. ಆ ನಂತರ ಚಪಾತಿ ಪ್ರೆಸ್ ಅನ್ನು ಉಂಡೆಗಳ ಮೇಲೆ ಒತ್ತಿ.. ಒಂದೇ ಬಾರಿಗೆ ಆರು ಚಪಾತಿ ಮಾಡಿರುವುದನ್ನು ವಿಡಿಯೋದಲ್ಲಿ ತೋರಿಸಲಾಗಿದೆ.  ಇದನ್ನು ನೋಡಿದ ನೆಟಿಜನ್‌ಗಳು ಅಚ್ಚರಿಗೊಂಡಿದ್ದಾರೆ.

ಈ ವಿಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿದರೆ.. ಇದರಲ್ಲಿನ ಮೋಸವನ್ನು ಗುರುತಿಸಬಹುದು. ಆಕೆ ಚಪಾತಿಗಳನ್ನು ಪೆಸ್ಟಲ್‌ನಿಂದ ಒತ್ತಿದಾಗ ಸುಮಾರು 19 ಸೆಕೆಂಡ್‌ಗಳಲ್ಲಿ ವೀಡಿಯೊವನ್ನು ಕತ್ತರಿಸಲಾಗಿದೆ ಎಂಬುದು ಸ್ಪಷ್ಟವಾಗಿದೆ.

ಪೂರ್ತಿಯಾಗಿ ತಯಾರಾದ ಚಪಾತಿಗಳನ್ನು ಅಲ್ಲೇ ಇಟ್ಟು.. ನಂತರ ಪೆಸ್ಟಲ್ನಿಂದ ಒತ್ತಿದರೆ ಸ್ಪಷ್ಟವಾಗುತ್ತದೆ. ಹಾಗಾಗಿ ಇದೊಂದು ನಕಲಿ ವಿಡಿಯೋ ಎಂದು ಅರ್ಥೈಸಬಹುದು. ಆದರೆ ನೆಟ್ಟಿಗರಲ್ಲಿ ಹಲವರು ಇದನ್ನೇ ನಿಜವೆಂದು ನಂಬಿ ಚಪಾತಿಯನ್ನೂ ಹೀಗೆಯೇ ಮಾಡುತ್ತಾರೆ ಎನ್ನುತ್ತಾರೆ.

ಚಪಾತಿ ಮಾಡುವ ವಿಧಾನ: ಗೋಧಿ  ಹಿಟ್ಟಿಗೆ ತಣ್ಣೀರಿನ ಬದಲು ಬೆಚ್ಚಗಿನ ನೀರನ್ನು ಸೇರಿಸಿ ಹಿಟ್ಟನ್ನು ಕಲಸಿ. ಹಿಟ್ಟನ್ನು ಬೆಚ್ಚಗಿನ ನೀರಿನಲ್ಲಿ ಬೆರೆಸಿದರೆ ಅದು ಮೃದುವಾಗುತ್ತದೆ. ಜೊತೆಗೆ ಈ ಹಿಟ್ಟಿನಿಂದ ತಯಾರಿಸಿದ ಚಪಾತಿ ಮೃದುವಾಗಿರುತ್ತದೆ. ಚಪಾತಿ ಒತ್ತುವಾಗ ಸ್ವಲ್ಪ ದಪ್ಪವಾಗಿಯೂ ಮತ್ತು ತೀರಾ ತೆಳ್ಳಗಾಗದಂತೆ ಒತ್ತಿ. ತವಾ ಮೇಲೆ ಲಟ್ಟಿಸಿದ ಚಪಾತಿ ಹಿಟ್ಟನ್ನು ಹಾಕಿ ಮಧ್ಯಮ ಉರಿಯಲ್ಲಿ ಚೆನ್ನಾಗಿ ಬೇಯಿಸಿ. ಆಗ ಮಾತ್ರ ಚಪಾತಿ ಚೆನ್ನಾಗಿ ಉಬ್ಬುತ್ತವೆ ಮತ್ತು ತಿನ್ನಲು ಕೂಡ ಸಾಫ್ಟ್ ಆಗಿರುತ್ತದೆ.