ನ್ಯೂಸ್

ನೀವೆಷ್ಟು ಇನ್​ಕಮ್​ ಟ್ಯಾಕ್ಸ್​ ಪಾವತಿಸಬೇಕು: ಈ ವರ್ಷಕ್ಕೆ ಆದಾಯ ತೆರಿಗೆ ಪದ್ಧತಿ ಸರಳ ಲೆಕ್ಕಾಚಾರ ಹೀಗಿದೆ….

ಮುಂಬೈ: ಫೆಬ್ರುವರಿಯಲ್ಲಿ ಮಂಡಿಸಲಾದ ಮಧ್ಯಂತರ ಬಜೆಟ್​ನಲ್ಲಿ ಹಳೆಯ ಮತ್ತು ಹೊಸ ಆದಾಯ ತೆರಿಗೆ ಸ್ಲ್ಯಾಬ್‌ಗಳಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ, ಆದರೆ, ಮುಂಬರುವ ಲೋಕಸಭೆ ಚುನಾವಣೆಯ ನಂತರ ಹೊಸ ಸರ್ಕಾರ ರಚನೆಯಾದ ಮೇಲೆ ಮಂಡಿಸಲಾಗುವ ಪೂರ್ಣಪ್ರಮಾಣದ ಬಜೆಟ್​ನಲ್ಲಿ ಈ ಸ್ಲ್ಲ್ಯಾಬ್ ಬದಲಾಗಬಹುದು.

2024-2025ನೇ ಹಣಕಾಸು ವರ್ಷದಲ್ಲಿ ಆದಾಯ ತೆರಿಗೆ ಈ ರೀತಿ ಮುಂದುವರಿಯಲಿವೆ.

ಹಳೆಯ/ರೆಗುಲರ್​ ಪದ್ಧತಿಯಲ್ಲಿ ಆದಾಯ ತೆರಿಗೆ ಶ್ರೇಣಿ ದರಗಳು ಈ ರೀತಿ ಇವೆ.

ಹಳೆಯ/ರೆಗುಲರ್​ ತೆರಿಗೆ ಪದ್ಧತಿ

ರೂ. 2,50,000ವರೆಗೆ ಯಾವುದೇ ತೆರಿಗೆ ಇಲ್ಲ
ರೂ. 2,50,001 ರಿಂದ ರೂ 5 ಲಕ್ಷದವರೆಗೆ 5% ತೆರಿಗೆ
ರೂ. 5,00,001 ರಿಂದ 10 ಲಕ್ಷದವರೆಗೆ 20% ತೆರಿಗೆ
ರೂ. 10 ಲಕ್ಷ ಮೇಲ್ಪಟ್ಟ 30% ತೆರಿಗೆ

ಈ ಆದಾಯ ತೆರಿಗೆ ಸ್ಲ್ಯಾಬ್‌ಗಳು ಮತ್ತು ದರಗಳು ವ್ಯಕ್ತಿಗಳಿಗೆ ಅನ್ವಯಿಸುತ್ತವೆ. ಒಟ್ಟು ಆದಾಯವು 5 ಲಕ್ಷ ರೂ. ಮೀರಿರದಿದ್ದರೆ ತೆರಿಗೆ ವಿನಾಯಿತಿ ದೊರೆಯುತ್ತದೆ. 12,500 ರೂಪಾಯಿ ಅಥವಾ ಪಾವತಿಸಬೇಕಾದ ನಿಜವಾದ ತೆರಿಗೆ, ಯಾವುದು ಕಡಿಮೆ ಇರುತ್ತದೆಯೋ ಅಷ್ಟು ಮೊತ್ತದ ವಿನಾಯಿತಿ ಇದಾಗಿರುತ್ತದೆ.

60 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಹಿರಿಯ ನಾಗರಿಕರಾಗಿರುವವರಿಗೆ ಈ ಮೂಲ ತೆರಿಗೆ ವಿನಾಯಿತಿ ಮಿತಿಯು 3 ಲಕ್ಷ ರೂ. ಇರುತ್ತದೆ. ಅಲ್ಲದೆ, ಸೂಪರ್ ಸೀನಿಯರ್ಸ್​, ಅಂದರೆ 80 ಮತ್ತು ಅದಕ್ಕಿಂತ ಹೆಚ್ಚು ವಯಸ್ಸಿನ ನಾಗರಿಕರಿಗೆ ಈ ಮೂಲ ತೆರಿಗೆ ವಿನಾಯಿತಿ ಮಿತಿಯು 5 ಲಕ್ಷ ರೂ. ಆಗಿರುತ್ತದೆ.

ಹೊಸ ಆದಾಯ ತೆರಿಗೆ ಪದ್ಧತಿ (ನ್ಯೂ ಇನ್​ಕಮ್​ ಟ್ಯಾಕ್ಸ್ ರಿಜೈಮ್​) ಪ್ರಕಾರ 2024-25 ರ ಹಣಕಾಸು ವರ್ಷಕ್ಕೆ ತೆರಿಗೆ ಶ್ರೇಣಿ ಈ ರೀತಿ ಇರುತ್ತದೆ.

ಹೊಸ ಆದಾಯ ತೆರಿಗೆ ಪದ್ಧತಿ


ರೂ. 3 ಲಕ್ಷದವರೆಗೆ                                  ಯಾವುದೇ ತೆರಿಗೆ ಇಲ್ಲ
ರೂ. 3,00,001 ರಿಂದ 6 ಲಕ್ಷದವರೆಗೆ             5% ತೆರಿಗೆ
ರೂ. 6,00,001 ರಿಂದ 9ಲಕ್ಷದವರೆಗೆ             10% ತೆರಿಗೆ
ರೂ. 9,00,001 ರಿಂದ 12 ಲಕ್ಷದವರೆಗೆ          15% ತೆರಿಗೆ
ರೂ. 12,00,001 ರಿಂದ ರೂ. 15 ಲಕ್ಷ          20% ತೆರಿಗೆ
ರೂ. 15 ಲಕ್ಷಕ್ಕಿಂತ ಹೆಚ್ಚು                           30% ತೆರಿಗೆ

ಹೊಸ ಆದಾಯ ತೆರಿಗೆ ಆಡಳಿತದಲ್ಲಿ, ಅರ್ಹತೆಯ ಮಿತಿ ರಿಯಾಯಿತಿಯು ರೂ. 7,00,000 ಆಗಿದೆ. ತೆರಿಗೆದಾರರಿಗೆ
25,000 ರೂ.ವರೆಗೆ ರಿಯಾಯಿತಿ ಇರುತ್ತದೆ.

ಒಟ್ಟು ಆದಾಯ ರೂ 5 ಲಕ್ಷಕ್ಕಿಂತ ಹೆಚ್ಚು ಇದ್ದರೆ ಸರ್ಚಾರ್ಜ್ ವಿಧಿಸಲಾಗುತ್ತದೆ.

ಸರ್ಚಾರ್ಜ್ ದರಗಳು ಈ ರೀತಿ ಇವೆ.

ಸರ್ಚಾರ್ಜ್ ದರಗಳು                                 ಹಳೆಯ ತೆರಿಗೆ ಪದ್ಧತಿ                  ಹೊಸ ತೆರಿಗೆ ಪದ್ಧತಿ
ರೂ. 5 ಲಕ್ಷದಿಂದ 10 ಲಕ್ಷವರೆಗೆ                       10%                                  10%
ರೂ 10 ಲಕ್ಷ ಮೇಲ್ಪಟ್ಟು 20 ಲಕ್ಷಕ್ಕಿಂತ ಕಡಿಮೆ         15%                                   15%
ರೂ 20 ಲಕ್ಷ ಮೇಲ್ಪಟ್ಟು 50 ಲಕ್ಷಕ್ಕಿಂತ ಕಡಿಮೆ         25%                                   25%
ರೂ 50 ಲಕ್ಷ ಮೇಲ್ಪಟ್ಟು                                 37%                                   25%

ಇದಲ್ಲದೆ, 4% ಆರೋಗ್ಯ ಮತ್ತು ಶಿಕ್ಷಣ ಸೆಸ್ ಅನ್ನು ವಿಧಿಸಲಾಗುತ್ತದೆ.