ನವದೆಹಲಿ: ಕೇಂದ್ರ ಸರ್ಕಾರ ಚೀನಾ ಆ್ಯಪ್ಗಳನ್ನು ಬ್ಯಾನ್ ಮಾಡಿದೆ. ಇದರಿಂದ ಚೀನಾ ಕಂಪನಿಗಳು ಬಾಯ್ಬಡಿಕೊಳ್ಳುತ್ತಿವೆ. ಕೋರ್ಟ್ ಮೆಟ್ಟಿಲೇರಲು ಸಿದ್ಧತೆ ನಡೆಸಿವೆ. ಇದಕ್ಕೆಲ್ಲ ಕಾರಣವೇನು ಗೊತ್ತೆ? ಅವುಗಳ ಭಾರಿ ಕಮಾಯಿಗೆ ಕಲ್ಲು ಬಿದ್ದಿರುವುದು.
ಅಷ್ಟಕ್ಕೂ ಚೀನಾ ಆ್ಯಪ್ಗಳು ಭಾರತದಿಂದ ಗಳಿಕೆ ಮಾಡುತ್ತಿದುದಾದರೂ ಎಷ್ಟು ಅಂತೀರಾ? ಇಲ್ಲಿದೆ ನೋಡಿ ಮಾಹಿತಿ.
ಯುಸಿ ಬ್ರೌಸರ್: ಜಾಕ್ ಮಾ ಒಡೆತನದ ಅಲಿಬಾಬಾ ಕಂಪನಿಯ ಯುಸಿ ಮೊಬೈಲ್ ವೆಬ್ ಪ್ರೈವೇಟ್ ಲಿಮಿಟೆಡ್ ಕಂಪನಿ ಯುಸು ಬ್ರೌಸರ್ ಹಾಗೂ ಯುಸಿ ನ್ಯೂಸ್ ಆ್ಯಪ್ಗಳನ್ನು ಹೊರತಂದಿದೆ. ಭಾರತದ ಸ್ಮಾರ್ಟ್ ಫೋನ್ಗಳಲ್ಲಿ ಶೇ.22 ಈ ಬ್ರೌಸರ್ ಬಳಸಲಾಗುತ್ತಿತ್ತು. ಭಾರತದಲ್ಲಿ ಕೇವಲ ನೂರು ಸಿಬ್ಬಂದಿ ಹೊಂದಿದ್ದ ಈ ಕಂಪನಿ 2018-19 ರಲ್ಲಿ 226.64 ಕೋಟಿ ರೂ. ಸಂಪಾದನೆ ಮಾಡಿತ್ತು.
ಟಿಕ್ಟಾಕ್, ಹಲೋ: ಭಾರತದಲ್ಲಿ ಭಾರಿ ಜನಪ್ರಿಯವಾಗಿದ್ದ ಟಿಕ್ ಟಾಕ್ ಹಾಗೂ ಹಲೋ ಆ್ಯಪ್ ಒಟ್ಟಾರೆ 17 ಕೋಟಿ ಬಳಕೆದಾರರನ್ನು ಹೊಂದಿತ್ತು. ಅತಿ ಹೆಚ್ಚು ಬಳಕೆದಾರರನ್ನು ಹೊಂದಿದ್ದ ಆ್ಯಪ್ ಎಂಬ ಹೆಗ್ಗಳಿಕೆಗೂ ಪಾತ್ರವಾಗಿತ್ತು. 2018-19ರಲ್ಲಿ 43.6 ಕೋಟಿ ರೂ.ಗಳನ್ನು ಗಳಿಸಿತ್ತು.
ಶೇರ್ ಇಟ್: ಚೀನಾದ ಶೇರ್ ಇಟ್ ಆ್ಯಪ್ಗೂ ಭಾರತ ಅತಿ ದೊಡ್ಡ ಮಾರುಕಟ್ಟೆಯಾಗಿತ್ತು . ಇದಕ್ಕೆ 40 ಕೋಟಿ ಬಳಕೆದಾರರಿದ್ದರು. ಆದರೆ, ಗಳಿಸಿದ ಆದಾಯ 14.73 ಕೋಟಿ ರೂ. ಭಾರತದ ಶೇರ್ ಇಟ್ ಕಂಪನಿ ಹಾಂಗ್ಕಾಂಗ್ ಸಂಸ್ಥೆಯ ಒಡೆತನದಲ್ಲಿತ್ತು.
ಇದನ್ನೂ ಓದಿ: ರೋಗ ಪ್ರತಿರೋಧಕ ಶಕ್ತಿ ಕುಂದಿದವರಿಗೂ ಆಕ್ಸ್ಫರ್ಡ್ ಕರೊನಾ ಲಸಿಕೆ ಸುರಕ್ಷಿತ; ಫಲಿತಾಂಶ ಪ್ರಕಟಿಸಿದ ತಜ್ಞರು
ಇ-ಮಾರ್ಕೆಟ್ ತಾಣ ಕ್ಲಬ್ ಫ್ಯಾಕ್ಟರಿ 3,000ಕ್ಕೂ ಅಧಿಕ ವರ್ತಕರನ್ನು ನೋಂದಾಯಿಸಿಕೊಂಡಿತ್ತು. ಇದರ ಮಾತೃ ಸಂಸ್ಥೆಯಾದ ಗ್ಲೋಬ್ ಮ್ಯಾಕ್ಸ್ ಕಾಮರ್ಸ್ ಇಂಡಿಯಾ ಕಂಪನಿ ಕಳೆದ ಸಾಲಿನಲ್ಲಿ 172.14 ಕೋಟಿ ಆದಾಯ ಗಳಿಸಿತ್ತು. ಇದಲ್ಲದೇ. ಕ್ಯಾಮ್ಸ್ಕ್ಯಾನರ್ ಕಂಪನಿ 10 ಕೋಟಿ ಸಕ್ರಿಯ ಬಳಕೆದಾರರನ್ನು ಭಾರತದಲ್ಲಿ ಹೊಂದಿತ್ತು.