ನವದೆಹಲಿ: ನಮ್ಮ ಕಣ್ಣುಗಳಿಗೆ ಸವಾಲು ಎಸೆಯುವ ಹಾಗೂ ಗೊಂದಲ ಮೂಡಿಸುವ ಚಿತ್ರಗಳು ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಕಾಣ ಸಿಗುತ್ತವೆ. ಅದು ಪ್ರಾಣಿ-ಪಕ್ಷಿಗಳಾಗಿರಬಹುದು ಅಥವಾ ವಸ್ತುಗಳನ್ನು ಪತ್ತೆ ಹಚ್ಚುವುದಾಗಿರಬಹುದು. ಆದರೆ, ನೆಟ್ಟಿಗರ ತಲೆಗೆ ಹುಳ ಬಿಡುವುದಂತೂ ನಿಜ. ಅಂಥದ್ದೇ ಮತ್ತೊಂದು ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರನ್ನು 'ದಿಗ್ಭ್ರಮೆ' ಮತ್ತು 'ಗೊಂದಲ'ಕ್ಕೀಡುಮಾಡಿದೆ.
ಫೋಟೋದಲ್ಲಿ ಏನಿದೆ?: ನಿಂತಿರುವ ಸ್ಕೂಟರ್ ಮೇಲೆ ಅರ್ಧ ಮಲಗಿದಂತಿರುವ ವ್ಯಕ್ತಿ ಒಂದು ಕಾಲನ್ನು ಸೀಟಿನ ಮೇಲೆ ಇಟ್ಟಿದ್ದಾರೆ. ಆತನ ಮಂಡಿಯು ಸ್ಕೂಟರ್ ಹ್ಯಾಂಡಲ್ಗೆ ತಾಗಿದ್ದು, ಅದರ ಮೇಲೆ ಹೆಲ್ಮೆಟ್ ಇದೆ. ಇನ್ನೊಂದು ಕಾಲನ್ನು ನೆಲಕ್ಕೆ ಚಾಚಿದ್ದು, ಕೈಯಲ್ಲಿ ಮೊಬೈಲ್ ನೋಡುತ್ತಿದ್ದಾನೆ.
ಚಿತ್ರವನ್ನು ಮೊದಲ ನೋಟದಲ್ಲಿ ನೋಡಿದಾಗ ಸ್ಕೂಟರ್ನಲ್ಲಿ ಇಬ್ಬರು ವ್ಯಕ್ತಿಗಳು ಇರುವಂತೆ ಗೋಚರವಾಗುತ್ತದೆ. ಆದರೆ, ಸೂಕ್ಷ್ಮವಾಗಿ ನೋಡಿದರೆ ವಾಸ್ತವ ಏನೆಂಬುದು ತಿಳಿಯುತ್ತದೆ. ವಾಸ್ತವಾಗಿ ಅಲ್ಲಿರುವುದು ಒಬ್ಬನೇ, ಆದರೆ ನಮಗೆ ಇಬ್ಬರು ಇರುವಂತೆ ಕಾಣುತ್ತದೆ. ಹುಡುಗಿಯೊಬ್ಬಳು ಸ್ಕೂಟರ್ ಮೇಲೆ ಮಲಗಿರುವಂತೆಯು, ಪುರುಷ ಸ್ಕೂಟರ್ಗೆ ಒರಗಿ ನಿಂತಿರುವಂತೆಯೂ ಕಾಣುತ್ತದೆ. ಆದರೆ, ಸೂಕ್ಷ್ಮವಾಗಿ ನೋಡಿದಾಗ ಫೋಟೋದಲ್ಲಿರುವುದು ಒಬ್ಬನೇ ವ್ಯಕ್ತಿ ಎಂಬುದು ಸ್ಪಷ್ಟವಾಗಿ ತಿಳಿಯುತ್ತದೆ.
ಇನ್ನು ಈ ಫೋಟೋವನ್ನು ರೆಡಿಟ್ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದ್ದು, ಸಿಕ್ಕಾಪಟ್ಟೆ ವೈರಲ್ ಆಗಿದೆ. ಫೋಟೋ ನೋಡಿ ನಿಜಕ್ಕೂ ನಾವು ಶಾಕ್ ಆದೆವು. ಹುಡುಗಿ ಅಂದುಕೊಂಡೆವು ಎಂದು ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ. ವಾವ್ ಮೃದುವಾದ ಕಾಲುಗಳು ಎಂದು ಮತ್ತೊಬ್ಬ ನೆಟ್ಟಿಗ ಕಮೆಂಟಿಸಿದ್ದಾರೆ. ಫೋಟೋ ನೋಡಿದ ನಿಮಗೂ ಏನಾದರೂ ಅನಿಸಿದ್ದರೆ, ಕಾಮೆಂಟ್ ಮಾಡಬಹುದಾಗಿದೆ. (ಏಜೆನ್ಸೀಸ್)