ಬೆಂಗಳೂರು: 'ಎಷ್ಟೇ ವ್ಯಾಯಾಮ ಮಾಡಿದರೂ ನನ್ನ ಹೊಟ್ಟೆ ಯಾಕೆ ಕರಗುತ್ತಿಲ್ಲ?' ಎಂಬ ಪ್ರಶ್ನೆ ಫಿಟ್ನೆಸ್ ಕಾಪಾಡಿ ಸುಂದರವಾಗಿ ಕಾಣಲು ಹರಸಾಹಸ ಪಡುವ ಅನೇಕರಿಗೆ ಕಾಡುತ್ತಿರಬಹುದು. ವ್ಯಾಯಾಮ ಸಾಲಲ್ಲ ಅಂತ ಉಪ್ಪು ಹುಳಿ ಹಾಕದೆ ಹಸಿ ಸಲಾಡ್ ತಿನ್ನಲು ಕಷ್ಟಪಡುವವರು ಇನ್ನೊಂದು ಕಡೆ. ಆದರೆ ಕೆಲವು ಗಿಡಮೂಲಿಕೆಗಳ ಸಹಾಯದಿಂದ ನೀವು ನಿಮ್ಮ ಹೊಟ್ಟೆ ಸುತ್ತ ಬೆಳೆದಿರುವ ಕೊಬ್ಬನ್ನು ಸುಲಭವಾಗಿ ಕರಗಿಸಬಹುದು.
ಬೊಜ್ಜನ್ನು ಕರಗಿಸಲು ಇವನ್ನು ಬಳಸಿ:
ದಾಲ್ಚಿನ್ನಿ ಅನೇಕ ಔಷಧೀಯ ಗುಣಗಳನ್ನು ಹೊಂದಿದ್ದು ಅನೇಕ ರೀತಿಯ ಕಾಯಿಲೆಗಳಿಗೆ ಪರಿಣಾಮಕಾರಿ. ದಾಲ್ಚಿನ್ನಿ ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡುವಲ್ಲಿ ಗಮನಾರ್ಹ ಪರಿಣಾಮ ಬೀರುತ್ತದೆ. ಇದು ನಿಮ್ಮ ಜೀರ್ಣಕ್ರಿಯಯನ್ನು ವೇಗಗೊಳಿಸಿ ತೂಕ ನಷ್ಟಕ್ಕೆ ಸಹಾಯ ಮಾಡುತ್ತೆ. ಇದನ್ನು ಬೆಳಗಿನ ಚಹಾಕ್ಕೂ ಸೇರಿಸಬಹುದು. ಹೊಟ್ಟೆಯಲ್ಲಿ ಇರುವ ಕೊಬ್ಬಿನ ಪ್ರಮಾಣವನ್ನು ಕಡಿಮೆ ಮಾಡಲು ಬೆಳಿಗ್ಗೆ ನಿಮ್ಮ ಮೊದಲ ಕಪ್ ಚಹಾದಲ್ಲಿ ದಾಲ್ಚಿನ್ನಿ ಬಳಸಿ. ಜೊತೆಗೆ, ನೀವು ದಾಲ್ಚಿನ್ನಿ ಹಾಕಿ ಕುದಿಸಿದ ನೀರನ್ನು ಕುಡಿಯಬಹುದು. ಇದನ್ನು ಒಂದು ಗಂಟೆ ನೀರಿನಲ್ಲಿ ಹಾಕಿ ಅಥವಾ ಒಂದು ಗಂಟೆಯ ನಂತರ ಆ ನೀರಿನಲ್ಲಿ ಸ್ವಲ್ಪ ಜೇನುತುಪ್ಪವನ್ನು ಬೆರೆಸಿ ಕುಡಿದರೆ ಬೊಜ್ಜು ಮಾಯ.
ತ್ರಿಫಲಾ ತಯಾರಿಸಲು ಹರಿತಕಿ, ಬಿಭಿಟಕಿ ಮತ್ತು ಆಮಲಕಿ ಎನ್ನುವ ಮೂರು ಪ್ರಕಾರದ ಒಣ ಹಣ್ಣುಗಳನ್ನು ಬಳಸಲಾಗುತ್ತದೆ. ಈ ಮೂರು ಪದಾರ್ಥಗಳನ್ನು ಸೇರಿಸಿ ತ್ರಿಫಲಾ ತಯಾರಿಸುತ್ತಾರೆ. ಇದು ದೇಹದಿಂದ ಟಾಕ್ಸಿಕ್ ಅಂಶಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಉಷ್ಣ ಪ್ರಕೃತಿಯ ತ್ರಿಫಲಾ, ಜೀರ್ಣಕ್ರಿಯೆಯನ್ನು ಸುಗಮಗೊಳಿಸಿ ಹಸಿವೆಯನ್ನು ಹೆಚ್ಚಿಸುತ್ತದೆ. ಇಷ್ಟೆಲ್ಲಾ ಗುಣಗಳಿರುವ ತ್ರಿಫಲಾ ಹೊಟ್ಟೆಯ ಕೊಬ್ಬನ್ನು ಕರಗಿಸಲೂ ಸಹಾಯ ಮಾಡುತ್ತದೆ.
ಸ್ವಲ್ಪ ಕಹಿ ರುಚಿಯ ಮೆಂತೆ, ಜೀರ್ಣಕ್ರಿಯೆಯನ್ನು ಸುಧಾರಿಸಿ ಮತ್ತು ತೂಕ ಕಳೆದುಕೊಳ್ಳಲು ಸಹಾಯ ಮಾಡುತ್ತದೆ. ನೀರಿನಲ್ಲಿ ಕರಗುವ ಗ್ಯಾಲಕ್ಟೋಮನ್ನನ್ ಮೆಂತೆ ಕಾಳಿನ ಒಂದು ಅಂಶವಾಗಿದೆ. ಇದು ಹಸಿವನ್ನು ಕಡಿಮೆ ಮಾಡಿ ಹೊಟ್ಟೆ ತುಂಬಿದ ಅನುಭವ ಕೊಡುತ್ತದೆ. ಇದು ಮೆಟಬಾಲಿಸಂ ಹೆಚ್ಚಿಸಲು ಸಹಾಯ ಮಾಡುತ್ತದೆ. ಹಸಿವನ್ನು ಕಡಿಮೆ ಮಾಡುವ ಇದು ಕೊಬ್ಬನ್ನು ಕಣ್ಮರೆಯಾಗುವಂತೆ ಮಾಡಲು ಸಹಾಯಕಾರಿ.
ಫೆನ್ನೆಲ್ ಕಾಳುಗಳು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುವವರಿಗೆ ಹೆಚ್ಚು ಪ್ರಯೋಜನಕಾರಿ. ಇದು ಜೀರ್ಣಾಂಗ ವ್ಯವಸ್ಥೆಯನ್ನು ಸರಿಪಡಿಸಲು ಸಹಾಯ ಮಾಡುತ್ತದೆ. ಫೆನ್ನೆಲ್ ಕಾಳುಗಳು ಹಸಿವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಹಸಿವು ಕಮ್ಮಿಯಾದರೆ ಆಹಾರವೂ ಕಡಿಮೆ ಬೇಕಾಗುತ್ತದೆ. ಈ ಮೂಲಕ ಹೊಟ್ಟೆಯ ಕೊಬ್ಬನ್ನು ಕರಗಿಸಲು ಸಹಾಯ ಮಾಡುತ್ತದೆ. ಫೆನ್ನೆಲ್ ಅನ್ನು ನೀವು ಪಲ್ಯಕ್ಕೋ ಸಲಾಡ್ಗೋ ಸೇರಿಸಿ. ಅಥವಾ ಇದನ್ನು ಸಿರಪ್ ಮಾಡಿ ಕುಡಿಯುವುದು ಒಳ್ಳೆಯದು.
ಜಾಯಿಕಾಯಿಯನ್ನು ಹೆಚ್ಚಾಗಿ ಮಸಾಲೆಯಾಗಿ ಬಳಸಲಾಗುತ್ತದೆ. ಆಯುರ್ವೇದದ ಔಷಧಗಳಲ್ಲಿ ಇದಕ್ಕೆ ಮಹತ್ವದ ಸ್ಥಾನವಿದೆ. ನಿಯಮಿತವಾಗಿ ಜಾಯಿಕಾಯಿ ಬಳಕೆ ಮಾಡುವುದರಿಂದ ಹಲವಾರು ಪ್ರಯೋಜನಗಳನ್ನು ಪಡೆಯಬಹುದು. ಇದು ತೂಕ ಕಳೆದುಕೊಳ್ಳಲು ಹೇಳಿ ಮಾಡಿಸಿದ್ದು. ಇದರಿಂದ ನಿದ್ದೆಯ ಗುಣಮಟ್ಟವೂ ಹೆಚ್ಚುತ್ತದೆ. ಆದರ, ಹೃದಯ ಸಂಬಂಧಿ ಕಾಯಿಲೆ ಇರುವವರು ಇದನ್ನು ಸೇವಿಸಬಾರದು. ಜಾಯಿಕಾಯಿಯನ್ನು ಸೇವಿಸುವ ಮೊದಲು ಯಅವುದಕ್ಕೂ ಒಮ್ಮೆ ಆಯುರ್ವೇದ ತಜ್ಞರೊಂದಿಗೆ ಮಾತನಾಡಿ.
ನೆಲ್ಲಿಕಾಯಿ ಜ್ಯೂಸ್ ಕುಡಿಯುವುದರಿಂದ ಚರ್ಮ ಮತ್ತು ಆರೋಗ್ಯ ಸಮಸ್ಯೆಗಳು ನಿಯಂತ್ರಣಕ್ಕೆ ಬರಬಹುದು. ಪ್ರತಿದಿನ ಒಂದು ನೆಲ್ಲಿಕಾಯಿಯನ್ನು ಸೇವಿಸಿದರೆ ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚುತ್ತದೆ. ನೆಲ್ಲಿಕಾಯಿ ನಿಮ್ಮ ಆಹಾರಕ್ಕೆ ಸೇರಿಸುವುದರಿಂದ ಇದು ನಿಮ್ಮ ಮೆಟಬಾಲಿಸಂ ಹೆಚ್ಚಿಸುತ್ತದೆ. ನೀವು ಪ್ರತಿದಿನ ಒಣಗಿದ ನೆಲ್ಲಿಕಾಯಿಯಿಂದ ಮಾಡಿದ 3-6 ಗ್ರಾಂ ಪುಡಿಯನ್ನು ಸೇವಿಸಿದರೆ ವೇಗವಾಗಿ ತೂಕವನ್ನು ಕಳೆದುಕೊಳ್ಳಬಹುದು. ಪುಡಿ ತಿನ್ನುವುದು ಇಷ್ಟವಿಲ್ಲ ಎಂದರೆ ನೀವು ನೆಲ್ಲಿಕಾಯಿ ಜ್ಯೂಸ್ ಸಹ ಕುಡಿಯಬಹುದು. ನೆಲ್ಲಿಕಾಯಿ ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತಾ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ.
ವೈದರನ್ನು ಸಂಪರ್ಕಿಸಿದ ನಂತರವೇ ಈ ಮಾಹಿತಿಯನ್ನು ಬಳಸಿ. ಯಾವುದನ್ನು ಎಷ್ಟು ತಿನ್ನಬೇಕು ಎನ್ನುವುದನ್ನೂ ವೈದ್ಯರಿಂದ ಕೇಳಿ ತಿಳಿದುಕೊಳ್ಳಿ.