ಸಾಂದರ್ಭಿಕ ಚಿತ್ರ 
ನ್ಯೂಸ್

ಫ್ರೀ ಚಹಾ ಕೊಡುವಂತೆ ಅಂಗಡಿ ಮಾಲೀಕನಿಗೆ ಯುವಕನಿಂದ ಅವಾಜ್​: ಆ ಬಳಿಕ ನಡೆದಿದ್ದಿಷ್ಟು..

ಥಾಣೆ: ಉಚಿತವಾಗಿ ಟೀ ಕೊಡಲಿಲ್ಲ ಎಂಬ ಕಾರಣಕ್ಕೆ ಅಂಗಡಿಯವನನ್ನು ಯುವಕರ ಗುಂಪೊಂದು ಮನಬಂದಂತೆ ಥಳಿಸಿರುವ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದೆ.

ಸ್ಥಳೀಯ ಉಲ್ಲಾಸ್‌ನಗರದ ಚೌಕ್‌ನಲ್ಲಿ ಕನ್ಹಯ್ಯಾ ಟೀ ಅಂಗಡಿ ಇದ್ದು, ಕೌಂಟರ್​ನಲ್ಲಿ ಅಂಗಡಿಯ ಮಾಲೀಕ ಪ್ರಸ್ ಸಚ್ ದೇವ್ ಕುಳಿತಿದ್ದರು. ಆಗ ಬಿಟ್ಟು ಎಂಬ ಯುವಕ ಟೀ ಕುಡಿಯಲು ಬಂದು ತನಗೆ ಉಚಿತವಾಗಿ ಟೀ ಬೇಕು ಎಂದಿದ್ದಾನೆ. ಈ ವೇಳೆ ಅಂಗಡಿ ಮಾಲೀಕ ಆತನಿಗೆ ಚಹಾ ನೀಡಲು ನಿರಾಕರಿಸಿದ್ದು, ಈ ವೇಳೆ ಯುವಕ ಅಂಗಡಿಯಿಂದ ಹೊರನಡೆದಿದ್ದಾನೆ.

ಸ್ವಲ್ಪ ಸಮಯದ ನಂತರ ಮತ್ತೆ ಅಂಗಡಿಗೆ ತನ್ನ ಇಬ್ಬರ ಸಹಚರರೊಂದಿಗೆ ಯುವಕ ಬಂದಿದ್ದು, ಈ ವೇಳೆ ಹೋಟೆಲ್ ಮಾಲೀಕನ ಸಹೋದರ ಅಜ್ಜು ಸಚ್‌ದೇವ್ ಕೌಂಟರ್‌ನಲ್ಲಿ ಕುಳಿತಿದ್ದನು. ಆಗ ಮೂವರು ಸೇರಿಕೊಂಡು ಫ್ರೀ ಚಹಾ ನೀಡುವಂತೆ ಕೇಳಿದ್ದು, ಅದಕ್ಕೆ ಅಜ್ಜು ಕೂಡ ನಿರಾಕರಿಸಿದ್ದಾನೆ. ಇದರಿಂದ ತೀವ್ರ ಕೋಪಗೊಂಡ ಮೂವರು, ಆ ವ್ಯಕ್ತಿಗೆ ಥಳಿಸಿದ್ದು ಘಟನೆಯ ಎಲ್ಲ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಸುದ್ದಿ ತಿಳಿದ ಬಳಿಕ ಪೊಲೀಸರು ಬಿಟ್ಟು ಮತ್ತು ಆತನ ಇಬ್ಬರು ಸಹಚರರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.(ಏಜೆನ್ಸೀಸ್​)