Baby birth : ತುಂಬು ಗರ್ಭಿಣಿಯೊಬ್ಬಳು ಚಿಕಿತ್ಸೆಗಾಗಿ ಆಸ್ಪತ್ರೆಗೆ ಪ್ರವೇಶಿಸಿದ್ದು, ಈ ವೇಳೆ ಆಸ್ಪತ್ರೆ ಸಿಬ್ಬಂದಿಗಳು ಆಕೆಯನ್ನು ದಾಖಲು ಮಾಡಿಕೊಳ್ಳುವಲ್ಲಿ ನಿರ್ಲಕ್ಷ್ಯ ತೋರಿಸಿದ್ದರಿಂದ ನೋವು ತಾಳಲಾರದೆ ಗರ್ಭೀಣಿಯು ಆಸ್ಪತ್ರೆಯ ಹೊರಗೆ ಮಗುವಿಗೆ ಜನ್ಮ ನೀಡಿರುವ ಘಟನೆ ಮಧ್ಯಪ್ರದೇಶದ ಶಿವಪುರಿ ಆಸ್ಪತ್ರೆಯಲ್ಲಿ ನಡೆದಿದೆ.
ಮಾಹಿತಿಯ ಪ್ರಕಾರ, ಚೀನಾ ನಿವಾಸಿ ಎಂದು ಮಹಿಳೆ ತಿಳಿದು ಬಂದಿದೆ. ಇನ್ನು ಗೇಟ್ ಬಳಿ ತಲುಪುತ್ತಿದ್ದಂತೆಯೇ ಆಕೆಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಈ ವೇಳೆ ವೈದ್ಯಕೀಯ ಸಿಬ್ಬಂದಿಗಳು ಇಲ್ಲದ ಕಾರಣ ಅಲ್ಲಿರುವ ಮಹಿಳೆಯರ ಗುಂಪೊಂದು ಆವರಣದಲ್ಲಿಯೇ ಹೆರಿಗೆ ಮಾಡಿಸಿದ್ದಾರೆ ಎಂದು ಸುದ್ದಿ ಮೂಲಗಳಿಗೆ ತಿಳಿಸಿದ್ದಾರೆ.
ಇದನ್ನೂ ಓದಿ: ಬಾಯ್ಫ್ರೆಂಡ್ ಬಾಡಿಗೆ ಪಡೆದ ಯುವತಿ: 2 ಗಂಟೆಗೆ 18,000 ರೂಪಾಯಿ, ವಿವಾಹಿತ ಮಹಿಳೆಯರಿಂದಲೇ ಡಿಮ್ಯಾಂಡ್! Boyfriend
ಕುಟುಂಬಸ್ಥರ ಆರೋಪ
ಗರ್ಭಿಣಿ ಮಹಿಳೆಯನ್ನು ಆಸ್ಪತ್ರೆಗೆ ದಾಖಲಾಯಿಸಲು ಕರೆದುಕೊಂಡು ಬಂದಾಗ ಅಲ್ಲಿನ ಸಿಬ್ಬಂದಿಗಳು ಟೋಕನ್ ನೀಡಲು ನಿರಾಕರಿಸಿದ್ದಾರೆ. ಹಾಗೆಯೇ ವೈದ್ಯರು ಕೂಡಾ ಚಿಕಿತ್ಸೆ ನೀಡಲು ಸಹಕರಿಸಲಿಲ್ಲ. ಹಾಗಾಗಿ, ನೋವು ತಾಳಲಾರದೆ ಮಹಿಳೆಯು ಗೇಟಿನ ಮುಂದೆಯೇ ಮಗುವಿಗೆ ಜನ್ಮ ನೀಡಿದ್ದಾಳೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಈ ವಿಷಯಕ್ಕೆ ಸಂಬಂಧಿಸಿದಂತೆ ಅಲ್ಲಿನ ಸಿವಿಲ್ ಸರ್ಜನ್ ಡಾ. ಬಿ.ಎಲ್. ಯಾದವ್ ಮಾತನಾಡಿದ್ದು, ಸಿಬ್ಬಂದಿಗಳು ಆಕೆಯ ದಾಖಲಾತಿಯನ್ನು ಮುಂದೂಡಿದ್ದರಿಂದ ಸಕಾಲದಲ್ಲಿ ಕ್ರಮ ಕೈಗೊಳ್ಳಲು ಸಾಧ್ಯವಾಗಲಿಲ್ಲ. ಈ ಕಾರಣದಿಂದ ಆಸ್ಪತ್ರೆಯ ಹೊರಗೆಯೇ ಹೆರಿಗೆ ಮಾಡಿಸಲು ಒತ್ತಾಯಿಸಲಾಯಿತು. ಈಗ ತಾಯಿ ಹಾಗೂ ಮಗು ಆರೋಗ್ಯವಾಗಿದ್ದಾರೆ ಎಂದು ತಿಳಿಸಿದರು.
ಈ ರೀತಿಯ ಆರೋಗ್ಯ ಸೇವೆಯಲ್ಲಿ ನಿರ್ಲಕ್ಷ್ಯ ಮತ್ತು ಕಳಪೆ ಮೂಲಸೌಕರ್ಯಗಳ ಪ್ರಕರಣಗಳು ಜನರನ್ನು ಗಂಭೀರ ಕಳವಳ ವ್ಯಕ್ತಪಡಿಸುತ್ತವೆ. ಹಾಗಾಗಿ ಸ್ಥಳೀಯರು ಆಸ್ಪತ್ರೆಯ ಸಿಬ್ಬಂದಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. (ಏಜೆನ್ಸೀಸ್)