ನ್ಯೂಸ್

ಮಡಿಕೇರಿಯಲ್ಲಿ ಭೀಕರ ಅಪಘಾತ: ನಾಲ್ವರು ದುರ್ಮರಣ..! | Accident

ಮಡಿಕೇರಿ: ಮಡಿಕೇರಿಯಿಂದ ಸುಳ್ಯದ ಕಡೆಗೆ ಪ್ರಯಾಣಿಸುತ್ತಿದ್ದ ಕಾರು-ಲಾರಿಯ ನಡುವೆ ಭೀಕರ ಅಪಘಾತ(Accident) ಸಂಭವಿಸಿದ ಪರಿಣಾಮ ನಾಲ್ವರು ಮೃತಪಟ್ಟಿರುವ ಘಟನೆ ಮಡಿಕೇರಿ ತಾಲೂಕು ದೇವರಕೊಲ್ಲಿಯಲ್ಲಿ ಶುಕ್ರವಾರ ನಡೆದಿದೆ.

ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಗೋಣಿಕೊಪ್ಪಲಿನ ಮಾರುಕಟ್ಟೆ ರಸ್ತೆಯ ನಿವಾಸಿಗಳಾದ ನಿಹಾದ್, ರಿಸ್ವಾನ್, ರಾಕಿಬ್ ಹಾಗೂ ರೀಶು ಮೃತ ದುರ್ದೈವಿಗಳು.ಮೃತದೇಹಗಳನ್ನು ಸುಳ್ಯದ ಆಸ್ಪತ್ರೆಯಲ್ಲಿ ಇಡಲಾಗಿದೆ.

ಆಂಬ್ಯುಲೆನ್ಸ್ ನಲ್ಲಿ ಗಾಯಾಳುಗಳನ್ನು ಸುಳ್ಯದ ಆಸ್ಪತ್ರೆಗೆ ದಾಖಲಿಸಿದರಾದರೂ ಅಷ್ಟೊತ್ತಿಗಾಗಲೇ ನಾಲ್ವರೂ ಮೃತಪಟ್ಟಿದ್ದರು ಎನ್ನಲಾಗಿದೆ.