ನ್ಯೂಸ್

ಹನಿಮೂನ್​​ ಹತ್ಯೆ ಕೇಸ್​​ಗೆ ಟ್ವಿಸ್ಟ್​ : ಪತಿಯನ್ನು ಕೊಲ್ಲಿಸಿದ್ದೇ ಪತ್ನಿ ಸೋನಮ್​​! | Indore Couple ​​

​Indore Couple: ದೇಶವನ್ನೇ ಬೆಚ್ಚಿಬಿಳಿಸಿದ್ದ ಮೇಘಾಲಯ ಹನಿಮೂನ್​​ ಪ್ರಕರಣ ಇದೀಗ ರೋಚಕ ತಿರುವು ಪಡೆದುಕೊಂಡಿದ್ದು, ಪತ್ನಿ ಸೋನಮ್​​ ಅವರೇ ತಮ್ಮ ಪತಿಯನ್ನು ಕೊಲ್ಲಿಸಿದ್ದಾಳೆ ಎಂದು ಪೊಲೀಸ್​ ತನಿಖೆಯಿಂದ ಹೊರ ಬಂದಿದೆ. ಈ ಹಿನ್ನೆಲೆ ಆಕೆಯನ್ನು ಬಂಧಿಸಲಾಗಿದೆ.

''ಪತಿ ರಾಜಾ ರಘುವಂಶಿ ಅವರ ಕೊಲೆಯನ್ನು ಅವರ ಪತ್ನಿಯೇ ಸುಪಾರಿ ಕೊಟ್ಟಿದ್ದಾಳೆ'' ಇದೀಗ ಆಕೆಯನ್ನು ಉತ್ತರ ಪ್ರದೇಶದ ಘಾಜಿಪುರದಲ್ಲಿ ಬಂಧಿಸಲಾಗಿದೆ. ಉಳಿದ ನಾಲ್ವರು ಆರೋಪಿಗಳಲ್ಲಿ ಮೂವರನ್ನು ವಶಕ್ಕೆ ಪಡೆದಿದ್ದು, ಮತ್ತೊಬ್ಬರ ಪತ್ತೆಗಾಗಿ ಶೋಧ ಕಾರ್ಯ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ರಾಜಾ ರಘುವಂಶಿ ಪತ್ನಿ ಸೋನಮ್, ರಾಜ್ ಕುಶ್ವಾಹ ಎಂಬ ಇನ್ನೊಬ್ಬ ವ್ಯಕ್ತಿಯೊಂದಿಗೆ ಸಂಬಂಧ ಹೊಂದಿದ್ದಳು. ಹೀಗಾಗಿ, ತನ್ನ ಪತಿಯ ಕೊಲೆಗೆ ಸಂಚು ರೂಪಿಸಿದ್ದಳು ಎನ್ನಲಾಗಿದೆ. ಮೇಘಾಲಯದ ಸುಂದರವಾದ ಸೊಹ್ರಾ ಪ್ರದೇಶದಲ್ಲಿ ಹನಿಮೂನ್​​ ಆಗಬೇಕಿದ್ದ ಈ ಸಂದರ್ಭದಲ್ಲಿ ಕೊಲೆ ಮಾಡಲು ಸಂಚು ರೂಪಿಸಿದ್ದಳು ಎಂದು ಇಂಡಿಯಾ ಟುಡೇ ವರದಿ ಮಾಡಿದೆ.

ಮೇ.23ರಂದು ಹನಿಮೂನ್ ಸಲುವಾಗಿ ಮೇಘಾಲಯದ ಚಿರಾಪುಂಜಿಗೆ ಪ್ರಯಾಣಿಸಿದ್ದ ಇಂದೋರ್‌ನ ದಂಪತಿ ಟ್ರೆಕ್ಕಿಂಗ್ ಮಾಡಲು ಹೋಗಿ ಕಾಣೆಯಾಗಿದ್ದರು. ಘಟನೆ ಕುಟುಂಬಸ್ಥರನ್ನು ಅಕ್ಷರಶಃ ಕಂಗಾಲಾಗಿಸಿತ್ತು. ದಂಪತಿ ಪೈಕಿ ಪತಿಯ ಮೃತದೇಹ ಸಿಕ್ಕಿದ್ದು, ಸೋನಮ್‌ಗಾಗಿ ಶೋಧ ಮುಂದುವರಿದಿತ್ತು. ಇದೀಗ ಆಕೆಯನ್ನು ಬಂಧಿಸಲಾಗಿದೆ.(ಏಜೆನ್ಸೀಸ್​)