Honeymoon Murder: ಇಡೀ ದೇಶವನ್ನೇ ಬೆಚ್ಚಿಬೀಳಿಸಿರುವ ಮೇಘಾಲಯ ಹನಿಮೂನ್ ಕೊಲೆ ಪ್ರಕರಣದಲ್ಲಿ ಎ1 ಆರೋಪಿ ಆಗಿರುವ ಸೋನಮ್ ಮತ್ತು ಆಕೆಯ ಪ್ರಿಯಕರ ಸದ್ಯ ಪೊಲೀಸ್ ಠಾಣೆಯಲ್ಲಿ ಕಂಬಿ ಎಣಿಸುತ್ತಿದ್ದಾರೆ. ಪ್ರಸ್ತುತ ಕೊಲೆ ಪ್ರಕರಣದ ತನಿಖೆ ಚುರುಕಿನಿಂದ ಸಾಗಿದ್ದೇ ಆದರೂ ಸೋನಮ್ ಮಾತ್ರ ಮೌನಕ್ಕೆ ಜಾರಿದ್ದಾಳೆ. ಅತ್ತ ಮಗ ರಾಜಾ ರಘುವಂಶಿಯನ್ನು ಕಳೆದುಕೊಂಡು ತಾಯಿ ಕಣ್ಣೀರಿಡುತ್ತಿದ್ದರೆ, ಇತ್ತ ಕೊಲೆ ಕೇಸ್ನಲ್ಲಿ ಹೊಸ ಬೆಳವಣಿಗೆ ಕಂಡುಬಂದಿದೆ.
ಇದನ್ನೂ ಓದಿ: 92 ಸಾವು, 33 ಮಂದಿ ಕಾಣೆ, 249 ರಸ್ತೆ ಬಂದ್! ಹಿಮಾಚಲ ಪ್ರದೇಶಕ್ಕೆ ತಪ್ಪದ ವರುಣ ಸಂಕಷ್ಟ | Himachal Pradesh
ಈಗಲೂ ತನಿಖೆ ಹಂತದಲ್ಲಿರುವ ರಾಜಾ ರಘುವಂಶಿ ಕೊಲೆ ಪ್ರಕರಣದಲ್ಲಿ ಮೃತ ರಾಜಾ ಪತ್ನಿ ಸೋನಮ್ ಪ್ರಿಯಕರ ರಾಜ್ ಕುಶ್ವಾ ಜೊತೆಗೆ ಕೈಜೋಡಿಸಿದ್ದ ಇಬ್ಬರಿಗೆ ಇದೀಗ ಶಿಲ್ಲಾಂಗ್ ಕೋರ್ಟ್ ಜಾಮೀನು ನೀಡಿದೆ. ಲೋಕೆಂದ್ರ ಸಿಂಗ್ ತೋಮರ್ ಮತ್ತು ಬಲ್ಬಿರ್ ಅಹಿರ್ವರ್ಗೆ ನ್ಯಾಯಾಲಯ ಷರತ್ತುಬದ್ಧ ಜಾಮೀನನ್ನು ಮಂಜೂರು ಮಾಡಿದೆ. ಈ ಇಬ್ಬರು ಕೊಲೆ ಪ್ರಕರಣದಲ್ಲಿ ಬಂಧಿತರಾಗಿದ್ದ ಆರೋಪಿಗಳು. ಆದರೆ, ವಿಚಾರಣೆ ನಡೆಸಿದ ಕೋರ್ಟ್, ಹಲವು ನಿಯಮಗಳನ್ನು ಜಾರಿಗೊಳಿಸಿ, ಷರತ್ತುಬದ್ಧ ಜಾಮೀನಿನ ಮೇರೆಗೆ ಹೊರಗೆ ಕಳುಹಿಸಿದೆ. ಸದ್ಯ ನ್ಯಾಯಾಲಯದ ಈ ಆದೇಶ ಹಲವರ ಅಚ್ಚರಿಗೆ ಕಾರಣವಾಗಿದೆ.
ರಾಜಾ ಕೊಲೆ ಪ್ರಕರಣದಲ್ಲಿ ಸಹ ಆರೋಪಿಗಳಾದ ಲೋಕೆಂದ್ರ ಸಿಂಗ್ ತೋಮರ್ ಮತ್ತು ಬಲ್ಬಿರ್ ಅಹಿರ್ವರ್ ನೇರವಾಗಿ ಹತ್ಯೆಯಲ್ಲಿ ಭಾಗಿಯಾಗಿಲ್ಲ. ಬದಲಿಗೆ ಅವರಿಬ್ಬರು ತಮ್ಮನ್ನು ಕರೆದುಕೊಂಡವರು ಏನು ಆದೇಶ ನೀಡಿದ್ದರೋ, ಅದನ್ನು ಮಾತ್ರ ಮಾಡಿದ್ದಾರೆ ಎಂದು ಆರೋಪಿಗಳ ಪರ ವಕೀಲರು ವಾದಿಸಿದ್ದರು. ಇದನ್ನು ಆಧರಿಸಿದ ನ್ಯಾಯಾಲಯ, ಕಠಿಣ ನಿಯಮ ಮತ್ತು ಷರತ್ತುಬದ್ಧ ಜಾಮೀನಿನ ಮೇರೆಗೆ ಇಬ್ಬರನ್ನೂ ಬಿಡುಗಡೆಗೊಳಿಸಿದೆ. ಈ ಮಧ್ಯೆ ರಾಜಾ ಕುಟುಂಬಸ್ಥರು ತನಿಖೆಯನ್ನು ಶೀಘ್ರವೇ ಮುಗಿಸಿ, ತಪ್ಪಿಸ್ಥರನ್ನು ಶಿಕ್ಷೆಗೆ ಒಳಪಡಿಸಿ ಎಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ತುಂಡು ಬಟ್ಟೆ, ಅವರೊಂದಿಗೆ ಮಾತುಕತೆ! ದೀಪಕ್ ಯಾದವ್ ವಿರುದ್ಧ ರಾಧಿಕಾ ಆಪ್ತೆ ಅಚ್ಚರಿ ಹೇಳಿಕೆ | Radhika Yadav
ಮೇ.23ರಂದು ಮೇಘಾಲಯದ ಚಿರಾಪುಂಜಿಗೆ ಹನಿಮೂನ್ ಸಲುವಾಗಿ ಪ್ರಯಾಣಿಸಿದ್ದ ಇಂದೋರ್ನ ದಂಪತಿ ಕಾಣೆಯಾಗಿದ್ದರು. ಈ ಪ್ರಕರಣ ಪೊಲೀಸರಿಗೆ ದೊಡ್ಡ ಸವಾಲಾಗಿ ಎದುರಾಗಿತ್ತು. ದಂಪತಿಯ ಪೈಕಿ ಮೊದಲು ರಾಜು ಮೃತದೇಹ ಝರಿ ನಡುವೆ ಪತ್ತೆಯಾಗಿದ್ದು, ಕೊಳೆತ ಸ್ಥಿತಿಯಲ್ಲಿ ಜೂ. 02ರಂದು ಸಿಕ್ಕಿತು. ಈ ಕೇಸ್ನಲ್ಲಿ ಕಾಣೆಯಾಗಿದ್ದ ಪತ್ನಿಯ ಹುಡುಕಾಟದಲ್ಲಿದ್ದ ಪೊಲೀಸರಿಗೆ ಕಡೆಗೂ ಆಕೆಯೇ ಕೊಲೆಗಾತಿ ಎಂಬುದು ಮೂವರ ಬಂಧನದ ಬಳಿಕ ಸ್ಪಷ್ಟವಾಯಿತು. ಕೊಲೆ ಪ್ರಕರಣದಲ್ಲಿ ಸೋನಮ್ ಮತ್ತು ಆಕೆಯ ಪ್ರಿಯಕರ ರಾಜ್ ಕುಶ್ವಾ ಸೇರಿದಂತೆ ಒಟ್ಟು ಐವರನ್ನು ಖಾಕಿ ಬಂಧಿಸಿ, ತನಿಖೆಗೆ ಒಳಪಡಿಸಿತು,(ಏಜೆನ್ಸೀಸ್).