ನ್ಯೂಸ್

ಕೆಲಸ ಮಾಡೋ ವಿಚಾರಕ್ಕೆ ಕೊಡಲಿ ಹಿಡಿದವ ತನ್ನ ಪತ್ನಿಯನ್ನೇ ಮನಸೋಇಚ್ಛೆ ಕೊಚ್ಚಿ ಕೊಂದ!

ವಿಜಯಪುರ: ಮನೆಯಲ್ಲಿ ನಾನೊಬ್ಬಳೇ ಕೆಲಸ ಮಾಡಬೇಕು, ನೀನು ಮಾಡುತ್ತಿಲ್ಲ. ಎಷ್ಟು ಅಂತ ಮನೆ ಕೆಲಸ ಮಾಡೋದು? ನನಗೂ ಸಾಕುಸಾಕಾಗಿದೆ, ಬೆಳಗ್ಗೆ ಎದ್ದಾಗಿನಿಂದ ಮಾಡುತ್ತಲೇ ಇರುವೆ... ನೀವು ಸ್ವಲ್ಪ ಸಹಾಯ ಮಾಡಬಾರದೆ... ಈ ಮಾತು ಪ್ರತಿಯೊಬ್ಬರ ಮನೆಯಲ್ಲಿ ಪದೇಪದೆ ಕೇಳುಬರುತ್ತಲೇ ಇರುತ್ತೆ. ಇದು ಸಹಜ ಪ್ರಕ್ರಿಯೆ ಕೂಡ.

ಆದರೆ ಇಲ್ಲೊಂದು ಮನೆಯಲ್ಲಿ ಕೆಲಸ ಮಾಡೋ‌ ವಿಚಾರವಾಗಿ ಪತಿ-ಪತ್ನಿ ನಡುವೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಸಿಟ್ಟಿಗೆದ್ದ ಪತಿರಾಯ, ಪತ್ನಿಯನ್ನ ಕೊಡಲಿಯಿಂದ ಕೊಚ್ಚಿ ಕೊಂದು ಹಾಕಿದ್ದಾನೆ. ಇದನ್ನೂ ಓದಿರಿ ತೊಗರಿ ಒಕ್ಕಣೆ ಮಾಡುತ್ತಿದ್ದ ಮಹಿಳೆ ಮಷಿನ್​ಗೆ ಸಿಲುಕಿ ಸಾವು!

ಇಂತದ ದುರ್ಘಟನೆ ವಿಜಯಪುರ ‌ಜಿಲ್ಲೆ ಬಸವನ ಬಾಗೇವಾಡಿ ತಾಲೂಕಿನ ಇಂಗಳೇಶ್ವರ ಗ್ರಾಮದಲ್ಲಿ ಸಂಭವಿಸಿದೆ. ನಾಗಮ‌್ಮ(60) ಕೊಲೆಯಾದ ದುರ್ದೈವಿ. ಪತಿ ಯಲ್ಲಪ್ಪ(65) ಆರೋಪಿ.

ಸ್ಥಳಕ್ಕೆ ಭೇಟಿ ನೀಡಿದ ಬಸವನ ಬಾಗೇವಾಡಿ ಸಿಪಿಐ‌ ಸೋಮಶೇಖರ್ ಜುಟ್ಟಲ್ ಹಾಗೂ ಪೊಲೀಸ್​ ಸಿಬ್ಬಂದಿ, ಕೊಲೆ ಆರೋಪಿ ಯಲ್ಲಪ್ಪನನ್ನು ಬಂಧಿಸಿದರು.