ನ್ಯೂಸ್

ನೀವು ಎಣ್ಣೆ ತ್ವಚೆಯಿಂದ ಕಷ್ಟಪಡುತ್ತಿದ್ದೀರಾ?..ಈ ಟಿಪ್ಸ್​ಗಳಿಂದ ಪರಿಹಾರ ಕಂಡುಕೊಳ್ಳಿ...

ಬೆಂಗಳೂರು: ಮಹಿಳೆಯರು ಸೌಂದರ್ಯ ಪ್ರಿಯರು. ತಮ್ಮ ಬ್ಯೂಟಿ ಕುರಿತಾಗಿ ಹೆಚ್ಚಿನ ಗಮನವನ್ನು ಹರಿಸುತ್ತಾರೆ. ಮಾರುಕಟ್ಟೆಯಲ್ಲಿ ಸಿಗುವ ಎಲ್ಲಾ ಪ್ರಾಡೆಕ್ಟ್​ಗಳನ್ನು ಕೂಡಾ ಖರೀದಿಸಿ ಬಳಕೆ ಮಾಡುತ್ತಾರೆ. ಹೀಗಿರುವಾಗ ಎಲ್ಲಾ ಮಹಿಳೆಯರಿಗೆ ಹೆಚ್ಚಾಗಿ ಕಾಡುವ ಮಸ್ಯೆಯೇ ಎಣ್ಣೆ ತ್ವಚೆಯಾಗಿದೆ.

ಎಣ್ಣೆಯುಕ್ತ ಚರ್ಮದಿಂದ ಬಳಲುತ್ತಿರುವ ಜನರು ಮೊಡವೆಗಳ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಒಂದು ಗಂಟೆ ಹೊರಗೆ ಹೋದರೂ ಚರ್ಮವು ತಕ್ಷಣವೇ ಎಣ್ಣೆಯುಕ್ತವಾಗುತ್ತದೆ ಮತ್ತು ಕಪ್ಪಾಗಿ ಕಾಣುತ್ತದೆ. ಎಲ್ಲಾ ಚರ್ಮದ ಪ್ರಕಾರಗಳಿಗೆ ಮಾಯಿಶ್ಚರೈಸರ್ ಅಗತ್ಯವಿದೆ. ಚರ್ಮವನ್ನು ಸ್ವಚ್ಛಗೊಳಿಸಿದ ನಂತರ, ಟೋನರ್ ಮತ್ತು ಮಾಯಿಶ್ಚರೈಸರ್ ಅನ್ನು ಬಳಸಬೇಕು. ಎಣ್ಣೆಯುಕ್ತ ಚರ್ಮ ಹೊಂದಿರುವ ಜನರು ಯಾವ ರೀತಿಯ ಮಾಯಿಶ್ಚರೈಸರ್ ಅನ್ನು ಬಳಸಬೇಕು? ಹಾಗೆ ಮನೆಯಲ್ಲೇ ಸುಲಭವಾಗಿ ಹೇಗೆ ಪರಿಹಾರ ಕಂಡುಕೊಳ್ಳ ಬಹುದು ಎನ್ನುವ ಕುರಿತಾಗಿ ಇಂದು ತಿಳಿದುಕೊಳ್ಳೋಣ....

ಎಣ್ಣೆಯುಕ್ತ ಚರ್ಮ ಹೊಂದಿರುವ ಜನರು ವಿಟಮಿನ್ ಸಿ ಸೀರಮ್ ಅನ್ನು ಸಹ ಬಳಸಬಹುದು. ಇದು ನಿಮ್ಮ ತ್ವಚೆಗೆ ಮಾಯಿಶ್ಚರೈಸರ್ ಆಗಿ ಕಾರ್ಯನಿರ್ವಹಿಸುತ್ತದೆ. ಇದು ಮೊಡವೆ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ ಮತ್ತು ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ. ವಿಟಮಿನ್ ಸಿ ಸೀರಮ್ ಅನ್ನು ನಿಯಮಿತವಾಗಿ ಬಳಸುವುದರಿಂದ ಚರ್ಮವು ಹೊಳೆಯುತ್ತದೆ.

ಆಲಿವ್​​ ಎಣ್ಣೆ : ಆಲಿವ್​ ಎಣ್ಣೆಯನ್ನು ನಿಮ್ಮ ಮುಖಕ್ಕೆ ಹಚ್ಚಿ ವೃತ್ತಾಕಾರವಾಗಿ ಹಚ್ಚಿ ಮಸಾಜ್​ ಮಾಡಿ. ಕೆಲವು ನಿಮಿಷಗಳ ನಂತರ ಬೆಚ್ಚಗಿನ ನೀರಿನಲ್ಲಿ ಮುಖವನ್ನು ತೊಳೆದು ಬಿಡಿ.

ಜೇನುತುಪ್ಪ: ಜೇನುತುಪ್ಪ ಜೆತಗೆ ನಿಂಬೆ ರಸವನ್ನು ಮಿಶ್ರಣ ಮಾಡಿ, ನಿಮ್ಮ ಮುಖಕ್ಕೆ ಹಚ್ಚಿ 2 ನಿಮಿಷ ಚೆನ್ನಾಗಿ ಮಸಾಜ್​ ಮಾಡಿ.

ಸೌತೆಕಾಯಿ ಪೇಸ್ಟ್​​ : ಟೊಮ್ಯಾಟೋ ಹಾಗೂ ಸೌತೆಕಾಯಿಯನ್ನು ಚೆನ್ನಾಗಿ ರುಬ್ಬಿಕೊಂಡು ಮುಖಕ್ಕೆ ಹಚ್ಚಿ 15 ನಿಮಿಷಗಳ ಕಾಲ ಹಾಗೆ ಬಿಟ್ಟು. ನಂತರ ಬೆಚ್ಚಗಿನ ನೀರಿನಲ್ಲಿ ಮುಖವನ್ನು ತೊಳೆಯಬೇಕು.

ರೋಸ್​ವಾಟರ್​​: ನಿಮ್ಮ ಮುಖಕ್ಕೆ ರೋಸ್​​ವಾಟರ್​ನ್ನು ಹಚ್ಚಿ ಪ್ರತಿನಿತ್ಯ ಸಂಜೆ ಮಸಾಜ್​​ ಮಾಡಬೇಕು.

ಕಡಲೆಹಿಟ್ಟು: ಕಡಲೆಹಿಟ್ಟು, ಅರಿಶಿಣವನ್ನು ಚೆನ್ನಾಗಿ ಮಿಶ್ರಣ ಮಾಡಿ ನಿಮ್ಮ ಮುಖಕ್ಕೆ ಸ್ಕ್ರಬ್​​ ಮಾಡಿ ನಂತರ ಮುಖವನ್ನು ವಾಶ್​ ಮಾಡಬೇಕು.

ತೆಂಗಿನೆಣ್ಣೆ: ಒಂದು ಚಮಚ ತೆಂಗಿನೆಣ್ಣೆಯನ್ನು ಮುಖ, ಕೈ ಮತ್ತು ಪಾದಗಳಿಗೆ ಹಚ್ಚುವುದರಿಂದ ತ್ವಚೆಯು ತೇವಾಂಶದಿಂದ ಕೂಡಿರುತ್ತದೆ ಮತ್ತು ಚರ್ಮದ ಆರೋಗ್ಯವನ್ನು ಕಾಪಾಡುತ್ತದೆ. ಆದ್ದರಿಂದ, ನೀವು ಇದನ್ನು ಸ್ನಾನದ ನಂತರದ ಮಾಯಿಶ್ಚರೈಸರ್ ಬಳಸಬಹುದು.