ನ್ಯೂಸ್

ಒಂದೇ ಬಾರಿಗೆ 7 ಚಲನಚಿತ್ರಗಳನ್ನು ಪ್ರಕಟಿಸಿದ ಹೊಂಬಾಳೆ ಫಿಲ್ಮ್ಸ್; ಜುಲೈನಲ್ಲಿ ಫಸ್ಟ್ ಮೂವಿ ರಿಲೀಸ್| Hombale Films

Hombale Films: ಕಾಂತಾರ, ಕೆಜಿಎಫ್ ಸಿನಿಮಾದಂತಹ ಬಹುದೊಟ್ಟ ಸಿನಿಮಾಗಳನ್ನು ನೀಡಿದ ಹೊಂಬಾಳೆ ಫಿಲ್ಮ್ಸ್ ಈಗಾಗಲೇ ದೇಶಾದ್ಯಂತ ಚಿರ-ಪರಿಚಿತವಾಗಿದೆ. ಇದೀಗ ಹೊಂಬಾಳೆ ಫಿಲ್ಮ್ಸ್ ಬಿಗ್ ಅಪ್ಡೇಟ್ ಕೊಟ್ಟಿದ್ದು 7 ಮೂವಿಗಳನ್ನು ಒಟ್ಟಿಗೆ ಅನೌನ್ಸ್ ಮಾಡಿದೆ.

ಕೆಲ ತಿಂಗಳ ಹಿಂದೆ ನಟ ಪ್ರಭಾಸ್ ಜೊತೆಗೆ ಒಟ್ಟಿಗೆ ಮೂರು ಸಿನಿಮಾಗಳನ್ನು ನಿರ್ಮಿಸುವುದಾಗಿ ಹೊಂಬಾಳೆ ಫಿಲ್ಮ್ಸ್ ಘೋಷಿಸಿತ್ತು. ಇದೀಗ ಒಟ್ಟಿಗೆ ಏಳು ಸಿನಿಮಾಗಳನ್ನು ಹೊಂಬಾಳೆ ಕೈಗೆತ್ತಿಕೊಂಡಿದ್ದು, ಏಳು ಸಿನಿಮಾಗಳು ಪೌರಾಣಿಕ ಕತೆ ಆಧರಿತ ಸಿನಿಮಾಗಳೇ ಆಗಿವೆ. ಇದಕ್ಕೆ ‘ಮಹಾವತಾರ್ ಯೂನಿವರ್ಸ್’ ಎಂದು ಹೆಸರಿಡಲಾಗಿದೆ.

ಭಾರತದ ಪೌರಾಣಿಕ ಕತೆಗಳಲ್ಲಿರುವಂತೆ ವಿಷ್ಣುವಿನ ಏಳು ಮಹಾವತಾರಗಳ ಬಗ್ಗೆ ಸಿನಿಮಾ ಮಾಡಲು ಹೊಂಬಾಳೆ ಮುಂದಾಗಿದೆ. ಈಗಾಗಲೇ ‘ಮಹಾವತಾರ್ ನರಸಿಂಹ’ ಸಿನಿಮಾದ ಎಲ್ಲಾ ಕಾರ್ಯಗಳು ಮುಗಿದಿದ್ದು, ಮುಂದಿನ ತಿಂಗಳು ಅಂದರೆ ಜುಲೈ 25ಕ್ಕೆ ಸಿನಿಮಾ ಬಿಡುಗಡೆ ಆಗಲಿದೆ. ಈ ಸಿನಿಮಾದ ಟೈಟಲ್ ಟೀಸರ್ ಈಗಾಗಲೇ ಬಿಡುಗಡೆ ಆಗಿದೆ. ಈ ಸಿನಿಮಾ ಅನಿಮೇಷನ್ ಸಿನಿಮಾ ಎನ್ನಲಾಗುತ್ತಿದೆ.

ಸಿನಿಮಾ ಬಿಡುಗಡೆ ದಿನಾಂಕ:

(ಏಜೆನ್ಸೀಸ್)

ಮಹಾವತಾರ್ ನರಸಿಂಹ ಜುಲೈ 25, 2025 ರಂದು 3D ಮತ್ತು ಐದು ಭಾರತೀಯ ಭಾಷೆಗಳಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತದೆ. ವಿಶೇಷ ಸಿನಿಮೀಯ ಅದ್ಭುತ ಅನುಭವಕ್ಕೆ ಸಿದ್ಧರಾಗಿ ಎಂದು ಟ್ವೀಟ್​ನಲ್ಲಿ ತಿಳಿಸಲಾಗಿದೆ.

ಮಹಾವತಾರ್ ಕಲ್ಕಿ ಪಾರ್ಟ್ 2 (2037)

ಮಹಾವತಾರ್ ಕಲ್ಕಿ ಪಾರ್ಟ್ 1 (2035)

ಮಹಾವತಾರ್ ಗೋಕುಲಾನಂದ (2033)

ಮಹಾವತಾರ್ ದಾವ್ಕಾದೇಶ್ (2031)

ಮಹಾವತಾರ್ ರಘುನಂದನ್ (2029)

ಮಹಾವತಾರ್ ಪರಶುರಾಮ್ (2027)

ಮಹಾವತಾರ್ ನರಸಿಂಹ (25th ಜುಲೈ-2025)