ಮುಂಬೈ; ಸಾಮಾನ್ಯವಾಗಿ ಹಲವರು ನಟಿಯರ ಬ್ಯೂಟಿ ಮತ್ತು ಅವರ ಅಭಿನಯಕ್ಕೆ ಮಾರುಹೋಗಿ ಅಭಿಮಾನಿಗಳಾಗಿರುತ್ತಾರೆ. ಆದರೆ, ಹಾಲಿವುಡ್ ನಟರೊಬ್ಬರು ಒಂದೇ ದಿನದ ಪರಿಚಯದಲ್ಲಿ ಬಾಲಿವುಡ್ನ Star ಹೀರೋಹಿನ್ ಬಗ್ಗೆ ಹಾಡಿ ಹೊಗಳಿದ್ದಾರೆ.
ಹೌದು, ತಮ್ಮ ನೆಚ್ಚಿನ ನಟರು ಜಾಗತಿಕ ಮಟ್ಟದ ಸಮಾರಂಭದಲ್ಲಿ ಕಾಣಿಸಿಕೊಂಡಾಗ ಫ್ಯಾನ್ಸ್ಗಳಿಗೆ ತುಂಬಾನೆ ಖುಷಿಯಾಗುತ್ತದೆ. ಅದೇ ರೀತಿ ಇತ್ತೀಚಿಗೆ ಜಾಗತಿಕ ಮಟ್ಟದಲ್ಲಿ ನಡೆದ ರೆಡ್ ಸಿ ಫಿಲ್ಮ್ ಫೆಸ್ಟಿವಲ್ನಲ್ಲಿ ನಮ್ಮ ಭಾರತೀಯ ಚಿತ್ರರಂಗದ ಹಲವು ಸೆಲಬ್ರಿಟಿಗಳು ಭಾಗವಹಿದ್ದರು. ಇದೇ ಕಾರ್ಯಕ್ರಮಲ್ಲಿ ಆಶಿಕಿ-2 ಚಿತ್ರದ ಖ್ಯಾತಿ, ಬಾಲಿವುಡ್ ನಟಿ ಶ್ರದ್ಧಾ ಕಪೂರ್ ಮತ್ತು ನಟ ರಣಬೀರ್ ಕಪೂರ್ ಪಾಲ್ಗೊಂಡಿದ್ದರು.
ಫಿಲ್ಮ್ ಫೆಸ್ಟಿವಲ್ನಲ್ಲಿ ಶ್ರದ್ಧಾ ಕಪೂರ್ ಜತೆ ಕಾಣಿಸಿಕೊಂಡ ಸ್ಪೈಡರ್ಮ್ಯಾನ್ ಖ್ಯಾತಿಯ ಹಾಲಿವುಡ್ ನಟ ಆಂಡ್ಯ್ರೂ ಗಾರ್ಫೀಲ್ಡ್ , ಶ್ರದ್ಧಾ ಬಗ್ಗೆ ಹಾಡಿ ಹೊಗಳಿದ್ದಾರೆ. ಇವರು ಮಾತನಾಡಿರುವ ವಿಡಿಯೋದ ಕ್ಲೀಪ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವಿಡಿಯೋದಲ್ಲಿ ಏನಿದೆ?
ಫಿಲ್ಮ್ ಫೆಸ್ಟಿವಲ್ ಬಳಿಕ ಕ್ಯಾಮರಾಗೆ ಪೋಸ್ ನೀಡುವ ಮುಂಚೆ ಇಬ್ಬರು ಮಾತನಾಡಿಕೊಂಡಿದ್ದಾರೆ.'' ಶ್ರದ್ಧಾ ಅವರು ತುಂಬಾ ಸುಂದರವಾಗಿದ್ದಾರೆ. ಅಲ್ಲದೆ, ದಯೆ ಮತ್ತು ಸೌಮ್ಯವಾಗಿ ಕಾಣುತ್ತಾಳೆ'' ಎಂದು ಆಂಡ್ಯ್ರೂ ಹೇಳಿದ್ದಾರೆ. ಬಳಿಕ ತುಂಬಾ ಹಳೆಯ ಸ್ನೇಹಿತರಂತೆ ಫೋಟೋ ಪೋಸ್ಗೆ ತಾ ಮುಂದು ನಾ ಮುಂದು ಎಂದು ಪ್ರೀತಿಯಿಂದ ಬಡಿದಾಡಿಕೊಂಡಿರುವ ದೃಶ್ಯಗಳು ವಿಡಿಯೋದಲ್ಲಿ ಕಾಣ ಸಿಗುತ್ತದೆ.
ಇನ್ನೂ ಶ್ರದ್ಧಾ ಸಿನಿಮಾ ವಿಚಾರಕ್ಕೆ ಬರುವುದಾರೆ, ಬ್ಲಾಕ್ ಬ್ಲಾಸ್ಟರ್ ಹಿಟ್ ಹಾರರ್ ಕಾಮಿಡಿ ಹೊಂದಿರುವ ಸ್ಟ್ರೀ-2ನಲ್ಲಿ ನಟಿಸಿದ್ದರು. ಈ ಚಿತ್ರ ಸಿನಿ ಪ್ರೇಕ್ಷಕರಿಂದ ಒಳ್ಳೆಯ ರೆಸ್ಪಾನ್ಸ್ ಪಡೆದುಕೊಂಡಿದೆ. ಇವರು ಮುಂದಿನ ಸಿನಿಮಾಗಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಧೂಮ್ 4 ಚಿತ್ರದಲ್ಲಿ ರಣಬೀರ್ ಕಪೂರ್ ಜತೆ ನಟಿಸಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ,(ಏಜೆನ್ಸೀಸ್).