Bangalore: ರಾಜ್ಯ ರಾಜಧಾನಿಯಲ್ಲಿ ನಡೆಯುವ ಐತಿಹಾಸಿಕ ಕರಗ ಮಹೋತ್ಸವಕ್ಕೆ ಈಗಾಗಲೆ ಇಲ್ಲಾ ರೀತಿಯ ಸಿದ್ಧತೆ ಆರಂಭಗೊಂಡಿದೆ. ರಾತ್ರಿ 12:30ಕ್ಕೆ ದ್ರೌಪದಿ ದೇವಿಯ ಕರಗ ಉತ್ಸವಕ್ಕೆ ಚಾಲನೆ ಸಿಗಲಿದೆ. ಮಲ್ಲಿಗೆ ಹೂವಿನಿಂದ ಸಿಂಗಾರಗೊಂಡ ಕರಗ, ಧರ್ಮರಾಯಸ್ವಾಮಿ ದೇಗುಲದಿಂದ ಹೊರಟು ಮೆರವಣಿಗೆ ಆರಂಭವಾಗಲಿದೆ. ಅರ್ಚಕ ಜ್ಞಾನೇಂದ್ರ ಅವರು 15ನೇ ಬಾರಿಗೆ ಕರಗ ಹೊರಲು ಸಿದ್ಧರಾಗಿದ್ದಾರೆ.
ಇದನ್ನೂ ಓದಿ: ಬೇಸಿಗೆಯಲ್ಲಿ 'ಎಸಿ' ಬಳಕೆಯಿಂದ ವಿದ್ಯುತ್ ಬಿಲ್ ಹೆಚ್ಚಾಗಿ ಬರುತ್ತಾ; ಅದನ್ನು ಕಡಿಮೆ ಮಾಡಲು ಇಲ್ಲಿದೆ ನೋಡಿ ಪ್ಲಾನ್ | AC
ತಿಗಳರಪೇಟೆಯ ಧರ್ಮರಾಯಸ್ವಾಮಿ ದೇವಸ್ಥಾನದಲ್ಲಿ ಕರಗದ ಆಚರಣೆಗಳು ನಡೆಯುವುದರಿಂದ ಏಪ್ರಿಲ್ 12ರ ರಾತ್ರಿ 10 ಗಂಟೆಯಿಂದ ಏಪ್ರಿಲ್ 13ರ ಸಂಜೆ 6 ಗಂಟೆಯವರೆಗೆ ಅವೆನ್ಯೂ ರಸ್ತೆ, ಕಾಟನ್‌ಪೇಟ್, ಕೆ.ಜಿ.ರಸ್ತೆ, ಚಿಕ್ಕಪೇಟೆ, ಕೆ.ಆರ್ ಮಾರ್ಕೆಟ್ ರಸ್ತೆ, ಮಾರುಕಟ್ಟೆ ವೃತ್ತ ಸೇರಿದಂತೆ ಕೆಲ ರಸ್ತೆಗಳಲ್ಲಿ ವಾಹನಗಳ ಸಂಚಾರಕ್ಕೆ ಅವಕಾಶ ಇರುವುದಿಲ್ಲ ಎಂದು ಟ್ರಾಫಿಕ್ ಪೊಲೀಸರು ಮಾಹಿತಿ ನೀಡಿದ್ದಾರೆ.
ಬೆಂಗಳೂರು ಕರಗ ಮಹೋತ್ಸವ ಇರುವುದರಿಂದ ಎರಡು ದಿನಗಳ ಕಾಲ ಕೆಲ ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ.
ಮಾರ್ಕೆಟ್ ವೃತ್ತದಿಂದ ಕೆ.ಜಿ.ರಸ್ತೆ, ಆನಂದ್‌ರಾವ್ ಸರ್ಕಲ್ನಿಂದ ಮೆಜೆಸ್ಟಿಕ್ ಕಡೆಗೆ ಹೋಗಬಹುದು.
ಮಿನರ್ವಾ ಸರ್ಕಲ್ ಮತ್ತು ಜೆಸಿ ರಸ್ತೆ ಮೂಲಕ ಟೌನ್‌ಹಾಲ್ ಕಡೆಗೆ ಚಲಿಸಬಹುದು.
ಶಾಂತಲಾ ಜಂಕ್ಷನ್‌ನಿಂದ ಖೋಡೆ ಜಂಕ್ಷನ್, ಹುಣಸೆಮರ ಜಂಕ್ಷನ್ ರಸ್ತೆ ಮೂಲಕ ಮೈಸೂರು ರಸ್ತೆ ಕಡೆಗೆ ಹೋಗಬಹುದಾಗಿದೆ.
ರಾತ್ರಿ 1 ರಿಂದ 2 ಗಂಟೆ ಒಳಗೆ ಕರಗ ಉತ್ಸವದ ಮೆರವಣಿಗೆ ಧರ್ಮರಾಯಸ್ವಾಮಿ ದೇಗುಲವನ್ನು ಪ್ರದಕ್ಷಿಣೆ ಹಾಕುವ ಮೂಲಕ, ಕುಂಬಾರಪೇಟೆ ರೋಡ್, ರಾಜ ಮಾರ್ಕೆಟ್ ಸರ್ಕಲ್-ಸಿಟಿ ಮಾರ್ಕೆಟ್ ಸರ್ಕಲ್, ಕೋಟೆ ಆಂಜನೇಯ ಸ್ವಾಮಿ ದೇಗುಲ ತಲುಪಲಿದೆ. ಸಿಟಿ ಮಾರ್ಕೆಟ್ ಸರ್ಕಲ್-ಪೊಲೀಸ್ ರೋಡ್ ಮೂಲಕ ಬಾಳೇಪೇಟೆ ಸರ್ಕಲ್ ಅಣ್ಣಮ್ಮ ದೇವಿಯ ದೇವಸ್ಥಾನಕ್ಕೆ ಬರಲಿದೆ. ನಂತರ ಕಬ್ಬನ್ ಪೇಟೆ ಮುಖ್ಯ ರಸ್ತೆಯಿಂದ ಶ್ರೀಧರ್ಮರಾಯ ಸ್ವಾಮಿ ದೇಗುಲಕ್ಕೆ ಪ್ರವೇಶಿಸಲಿದೆ.
(ಏಜೆನ್ಸೀಸ್)