ಬೆಂಗಳೂರು: ಹಿಂದು ಯುವಕನನ್ನು ಮುಸ್ಲಿಂ ಧರ್ಮಕ್ಕೆ ಮತಾಂತರ ಮಾಡಿರುವ ಮಹಾಜಾಲ ಕೋಲಾರ ಜಿಲ್ಲೆಯಲ್ಲಿ ಪತ್ತೆಯಾಗಿದ್ದು, ತಬ್ಲಿಘಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.
ಗುಜರಾತ್ನಲ್ಲಿ ಸಮಾವೇಶವೊಂದರಲ್ಲಿ ಪಾಲ್ಗೊಳ್ಳಲು ಹೋಗಿದ್ದ ಇವರು ಕರೊನಾ ಲಾಕ್ಡೌನ್ನಿಂದಾಗಿ ಅಲ್ಲೇ ಇದ್ದರು. ಲಾಕ್ಡೌನ್ ಸಡಿಲಿಕೆ ಹಿನ್ನೆಲೆಯಲ್ಲಿ ಸೂರತ್‌ನಿಂದ ಮೇ 3ರಂದು ಕೋಲಾರ ಜಿಲ್ಲೆಗೆ ಬಂದ 44 ಜನರ ತಂಡವನ್ನು ಜಿಲ್ಲಾಡಳಿತ ಆರೋಗ್ಯ ತಪಾಸಣೆ ನಡೆಸಿ ಅವರ ಪೂರ್ವಾಪರ ಪರಿಶೀಲಿಸುವಾಗ ಮತಾಂತರ ಜಾಲ ಪತ್ತೆಯಾಗಿದೆ.
ಇದನ್ನೂ ಓದಿರಿ ಹೆಚ್ಚುತ್ತಲೇ ಇದೆ ಕರೊನಾ ವೈರಸ್ ಅಬ್ಬರ; 24 ಗಂಟೆಯಲ್ಲಿ ಸಾವನ್ನಪ್ಪಿದ್ದು 95 ಮಂದಿ, ಮಹಾರಾಷ್ಟ್ರದ್ದೇ ಮೇಲುಗೈ…
ಗುಜರಾತ್ನಿಂದ ಬಂದ ತಂಡದಲ್ಲಿ ಯುವಕ ಸಾದಿಕ್ ಎಂಬಾತನ ದಾಖಲೆ ಪರಿಶೀಲಿಸುವಾಗ ಅವನ ಹೆಸರು ನಕಲಿ ಎಂಬುದು ಜಿಲ್ಲಾಧಿಕಾರಿಗಳು, ಎಸ್ಪಿ ಮತ್ತು ಇತರ ಅಧಿಕಾರಿಗಳ ಸಮ್ಮುಖದಲ್ಲಿ ತಪಾಸಣೆ ಮಾಡುತ್ತಿದ್ದ ಪೊಲೀಸರಿಗೆ ಗೊತ್ತಾಗಿದೆ. ಹೆಚ್ಚಿನ ತನಿಖೆ ನಡೆಸಿದಾಗ ಆತ ಹಿಂದು ಯುವಕ, ಹೆಸರು ಕಾರ್ತಿಕ್ ಮುನಿಯೇಂದ್ರ. ತಮಿಳುನಾಡು ಮೂಲದವ. ಈತನನ್ನು ಮತಾಂತರ ಮಾಡಿ ಜತೆಯಲ್ಲೇ ಕರೆದುಕೊಂಡು ಬರಲಾಗಿದೆ ಎಂದು ಹೇಳಲಾಗಿದೆ.
ಸದ್ಯ ಇವರೆಲ್ಲರನ್ನೂ ಮಾಲೂರಿನ ರಾಜೇನಹಳ್ಳಿಯ ಮೊರಾರ್ಜಿ ವಸತಿ ಶಾಲೆಯಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಅಲ್ಲದೆ ತಬ್ಲಿಘಿ ತಂಡದೊಂದಿಗೆ ಬಂದ ಮೊಹಮದ್ ಹಮ್ಜಾ ಮತ್ತು ಸಮೀರ್ ಉತ್ತರ ಪ್ರದೇಶ, ಸಯ್ಯದ್ ರಿಜ್ವಾನ್ ಬೆಂಗಳೂರಿನ ಪಾದರಾಯನಪುರದವರು. ಇವರನ್ನು ಕರೆತಂದ ಮಾಲೂರು ಪಟ್ಟಣದ ಕುಂಬಾರಪೇಟೆಯ ಸಯ್ಯದ್ ಉಸ್ಮಾನ್ ಎಂಬಾತ ಇವರ ವಿಳಾಸವನ್ನು ಮರೆಮಾಚಿ ಮಾಲೂರು ನಿವಾಸಿಗಳೆಂದು ಕರೆತಂದಿದ್ದಾನೆ. ಈತನೊಂದಿಗೆ ಕಾರ್ತಿಕ್ ಮುನಿಯೇಂದ್ರ ಕೂಡ ಬಂದಿದ್ದ. ಸಯ್ಯದ್ ಉಸ್ಮಾನ್ ವಿರುದ್ಧ ಮಾಲೂರು ತಹಸೀಲ್ದಾರ್ ಮತಾಂತರ ಪ್ರಕರಣ ದಾಖಲಿಸಿಕೊಂಡಿದ್ದು, ವಿಚಾರಣೆ ಮುಂದುವರಿಸಿದ್ದಾರೆ.
ಇದನ್ನೂ ಓದಿರಿ ತಬ್ಲಿಘಿಗಳಿಗೆ ದುರ್ಗಕ್ಕೆ ಪ್ರವೇಶ ತಪ್ಪು ನಡೆ