More

    ತಬ್ಲಿಘ್ ಸಂಪರ್ಕ ತಂದ ಕಂಟಕ: ತಹಸೀಲ್ದಾರ್, ಡಿಎಚ್‌ಒ ಸೇರಿ ಹಲವು ಹಿರಿಯ ಅಧಿಕಾರಿಗಳಿಗೆ ಕ್ವಾರಂಟೈನ್!

    ಚಿತ್ರದುರ್ಗ: ಗುಜರಾತ್‌ನಿಂದ ಚಿತ್ರದುರ್ಗಕ್ಕೆ ಮರಳಿದ 15 ತಬ್ಲಿಘ್ ಸದಸ್ಯರ ಪೈಕಿ ಮೂವರಲ್ಲಿ ಕರೊನಾ ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ಕೆಲವು ಹಿರಿಯ ಅಧಿಕಾರಿಗಳೂ ಸಂಕಷ್ಟ ಅನುಭವಿಸುವಂತಾಗಿದೆ.

    ತಬ್ಲಿಘ್‌ಗಳ ಪ್ರಾಥಮಿಕ ಸಂಪರ್ಕಕ್ಕೆ ಬಂದ ಜಿಲ್ಲಾ ಆರೋಗ್ಯಾಧಿಕಾರಿ, ಉಪವಿಭಾಗಾಧಿಕಾರಿ, ತಹಸೀಲ್ದಾರ್ ಸೇರಿ ಆರೇಳು ಜನರಿಗೆ ಹೋಂ ಕ್ವಾರಂಟೈನ್‌ಗೆ ಸೂಚಿಸಲಾಗಿದೆ.

    ತಬ್ಲಿಘ್ ಸದಸ್ಯರು ಪ್ರಯಾಣಿಸುತ್ತಿದ್ದ ವಾಹನವನ್ನು ಚಿತ್ರದುರ್ಗ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಮೇ 5 ರಂದು ತಡೆದು ವಿಚಾರಿಸಿ ಅವರನ್ನು ನೇರವಾಗಿ ಕ್ವಾರಂಟೈನ್ ಮಾಡಲಾಗಿತ್ತು.

    ಇದನ್ನೂ ಓದಿ ಲಾಕ್‌ಡೌನ್ ನಡುವೆಯೂ ಬಾಲ್ಯವಿವಾಹ: ಪೊಲೀಸರು ಎಚ್ಚರಿಸಿದರೂ ಡೋಂಟ್ ಕೇರ್!

    ಆದರೂ ತಬ್ಲಿಘ್ ಸದಸ್ಯರಿಂದ ಮಾಹಿತಿ ಕಲೆ ಹಾಕುವ ಸಂದರ್ಭದಲ್ಲಿ ಅವರ ಪ್ರಾಥಮಿಕ ಸಂಪರ್ಕಕ್ಕೆ ಬಂದಿರಬಹುದಾದ ಜಿಲ್ಲಾ ಆರೋಗ್ಯಾಧಿಕಾರಿ, ಉಪವಿಭಾಗಾಧಿಕಾರಿ, ತಹಸೀಲ್ದಾರ್, ತಾಲೂಕು ಸಮಾಜ ಕಲ್ಯಾಣ ಅಧಿಕಾರಿ, ಒಬ್ಬ ನೌಕರ, ಹಾಸ್ಟೆಲ್ ವಾರ್ಡನ್ ಸೇರಿ ಆರೇಳು ಜನರಿಗೆ ಹೋಂಕ್ವಾರಂಟೈನ್ ಮಾಡಲಾಗುತ್ತಿದೆ.

    ಅಧಿಕಾರಿಗಳು ಸಹಿತ ಒಟ್ಟು 15 ಜನರ ಗಂಟಲು ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಆರ್. ವಿನೋತ್ ಪ್ರಿಯಾ ತಿಳಿಸಿದ್ದಾರೆ.

    ಜೈಲಿಗೆ ಹೋಗಿ ಬಂದರೂ ಬುದ್ಧಿ ಕಲಿಯದ ರೌಡಿ ದಡಿಯಾ ಕೊನೆಗೂ ಫಿನಿಶ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts