ನ್ಯೂಸ್

ಪಾಕ್​ ವಿರುದ್ಧದ ಗೆಲುವಿಗೆ ಮೊಹಬತ್​ ಕಿ ದುಕಾನ್ ಮಾತ್ರ​ ಯಾಕೆ ಸುಮ್ಮನಿತ್ತು; ರಾಹುಲ್​ ಗಾಂಧಿ ಹೆಸರೇಳದೆ ಕುಟುಕಿದ ಅಸ್ಸಾಂ ಸಿಎಂ

ಗುವಾಹಟಿ: ಶನಿವಾರ (ಅಕ್ಟೋಬರ್ 14) ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಭಾರತ ತಂಡ 7 ವಿಕೆಟ್​ಗಳ ಜಯ ಸಾಧಿಸಿದ್ದು, ಇಡೀ ದೇಶವೇ ಸಂಭ್ರಮಾಚರಣೆಯಲ್ಲಿ ತೊಡಗಿದೆ. ಆದರೆ, ಮೊಹಬತ್​ ಕಿ ದುಕಾನ್​ ಮಾತ್ರ ಸುಮ್ಮನಿರುವುದು ಯಾಕೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಾಂತ್​ ಬಿಸ್ವಾಸ್​ ಶರ್ಮಾ ಪ್ರಶ್ನಿಸಿದ್ಧಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಬರೆದುಕೊಂಡಿರುವ ಅವರು ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ ಹೆಸರೇಳದೆ ಮೊಹಬತ್​ ಕಿ ದುಕಾನ್​ ಎಂದು ಉಲ್ಲೇಖಿಸಿ ವಾಗ್ದಾಳಿ ನಡೆಸಿದ್ದಾರೆ.

ನಿನ್ನ ವಿಶ್ವಕಪ್​ನಲ್ಲಿ ಭಾರತ ಪಾಕಿಸ್ತಾನವನ್ನು ಸೋಲಿಸಿತ್ತು. ಇಡೀ ದೇಶವೇ ಸಂಭ್ರಮಾಚರಣೆಯಲ್ಲಿ ತೊಡಗಿದ್ದರೆ ಮೊಹಬತ್​ ಕಿ ದುಕಾನ್​ ಮಾತ್ರ ಒಂದು ಪದ ಮಾತನಾಡಿಲ್ಲ ಎಂದು ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಬರೆದುಕೊಂಡಿದ್ದಾರೆ.

ಇಸ್ರೇಲ್​ ಹಾಗೂ ಹಮಾಸ್​ ನಡುವಿನ ಸಂಘರ್ಷದ ನಿಲುವು ಪಾಕಿಸ್ತಾ ಹಾಗೂ ಅಫ್ಘಾನಿಸ್ತಾದಂತಿದೆ. ಕಾಂಗ್ರೆಸ್​ ಹಾಗೂ ಅದರ ಮಿತ್ರಪಕ್ಷಗಳು ಪಾಕಿಸ್ತಾನ ಹಾಗ ಅಫ್ಘಾನಿಸ್ತಾನಕ್ಕೆ ತೆರಳಿ ಸಮ್ಮಿಶ್ರ ಸರ್ಕಾರ ರಚಿಸುವುದು ಎಂದು ಉತ್ತಮ ಎಂದು ಈ ಹಿಂದೆ ವಾಗ್ದಾಳಿ ನಡೆಸಿ ಸುದ್ದಿಯಾಗಿದ್ದರು.