

ನವದೆಹಲಿ: ಅಹಮದಬಾದಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಶನಿವಾರ (ಅಕ್ಟೋಬರ್ 14) ನಡೆದ ಏಕದಿನ ವಿಶ್ವಕಪ್ ಪಂದ್ಯದಲ್ಲಿ ಭಾರತ ತನ್ನ ಸಾಂಪ್ರಾದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ 7 ವಿಕೆಟ್ಗಳ ಭರ್ಜರಿ ಜಯಗಳಿಸಿದೆ. ಈ ಮೂಲಕ ವಿಶ್ವಕಪ್ನಲ್ಲಿ ಪಾಕಿಸ್ತಾನದ ವಿರುದ್ಧ ತನ್ನ ಪ್ರಾಬಲ್ಯವನ್ನು ಭಾರತ ಮುಂದುವರೆಸಿದೆ.
ಪಂದ್ಯದ ಬಳಿಕ ಪಾಕಿಸ್ತಾನದ ನಾಯಕ ಬಾಬರ್ ಅಜಂ ಭಾರತದ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ ಅವರನ್ನು ಭೇಟಿ ಮಾಡಿದ್ದು, ಅವರು ಸಹಿ ಮಾಡಿರುವ ಜೆರ್ಸಿಯನ್ನು ಉಡುಗೊರೆಯನ್ನಾಗಿ ಪಡೆದುಕೊಂಡಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧದ ಚರ್ಚೆ ವ್ಯಾಪಕವಾಗಿ ನಡೆಯುತ್ತಿದೆ.
ಪಂದ್ಯ ಮುಗಿದ ನಂತರ ಕ್ರೀಡಾಂಗಣದಲ್ಲೇ ಎರಡು ತಂಡಗಳ ಆಟಗಾರರು ಪರಸ್ಪರ ಭೇಟಿಯಾಗಿ ಮಾತುಕತೆ ನಡೆಸಿದರು. ಈ ನಡುವೆ ಪಾಕಿಸ್ತಾನ ತಂಡದ ನಾಯಕ ಬಾಬರ್ ಆಝಮ್ ರ ಜೊತೆ ಟೀಮ್ ಇಂಡಿಯಾದ ರನ್ ಮಷೀನ್ ವಿರಾಟ್ ಕೊಹ್ಲಿ ಕೂಡ ಸ್ನೇಹಯುತವಾಗಿ ಕೆಲ ಸಮಯ ಮಾತುಕತೆ ನಡೆಸಿದರು. ಈ ವೇಳೆ ವಿರಾಟ್, 3 ಪಟ್ಟಿಯ ಬಿಳಿ ಜೆರ್ಸಿ (ಟೆಸ್ಟ್) ಹಾಗೂ ಮೂರು ಬಣ್ಣದ ಪಟ್ಟಿಯ ಜೆರ್ಸಿ ಮೇಲೆ ತಮ್ಮ ಹಸ್ತಾಕ್ಷರವುಳ್ಳ ಭಾರತ ತಂಡದ ಜೆರ್ಸಿಗಳನ್ನು ಉಡುಗೊರೆಯಾಗಿ ನೀಡುವ ಮೂಲಕ ಹೃದಯ ವೈಶಾಲ್ಯತೆ ಮೆರೆದಿದ್ದಾರೆ.
ಇತ್ತ ವಿರಾಟ್ ಕೊಹ್ಲಿಯಿಂದ ಬಾಬರ್ ಅಜಂ ಜೆರ್ಸಿಯನ್ನು ಉಡಗೊರೆಯಾಗಿ ಪಡೆದಿರುವ ಕ್ರಮವನ್ನು ಖಂಡಿಸಿರುವ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ವಾಸಿಂ ಅಕ್ರಮ್ ಇದನ್ನು ಬೇರೊಂದು ದಿನ ಮಾಡಬಹುದಿತ್ತು. ನಿಮ್ಮ ಮಾವನ ಮಗ ನಿಜವಾಗಿಯೂ ಕೊಹ್ಲಿಯ ಜೆರ್ಸಿ ಕೇಳಿದ್ದರೆ ನೀವು ಅದನ್ನು ಡ್ರೆಸ್ಸಿಂಗ್ ರೂಮಿಗೆ ತೆಋಳಿ ಪಡೆದುಕೊಳ್ಲಬಹುದಿತ್ತು. ಈ ರೀತಿ ಸ್ವೀಕರಿಸಿದ್ದು, ಸರಿ ಕಾಣುತ್ತಿಲ್ಲ ಎಂದು ವಾಸಿಂ ಅಕ್ರಮ್ ಕಿಡಿಕಾರಿದ್ದಾರೆ.