More

    ಅಫ್ಘಾನಿಸ್ತಾನದಲ್ಲಿ ಮತ್ತೊಮ್ಮೆ ಪ್ರಬಲ ಭೂಕಂಪ; 6.3 ತೀವ್ರತೆ ದಾಖಲು

    ನವದೆಹಲಿ: ಕೆಲ ದಿನಗಳ ಹಿಂದಷ್ಠೇ ಪ್ರಬಲ ಭೂಕಂಪದ ಹೊಡೆತಕ್ಕೆ ತತ್ತರಿಸಿದ ಅಫ್ಘಾನಿಸ್ತಾನದಲ್ಲಿ ಮತ್ತೊಮ್ಮೆ ಭೂಕಂಪ ಸಂಭವಿಸಿದೆ. ಪಶ್ಚಿಮ ಅಫ್ಘಾನಿಸ್ತಾನದಲ್ಲಿ ಭಾನುವಾರ ಬೆಳಗ್ಗೆ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 6.3ರಷ್ಟು ತೀವ್ರತೆ ದಾಖಲಾಗಿದೆ. 

    ಭೂಕಂಪನದಲ್ಲಿ ಓರ್ವರು ಮೃತಪಟ್ಟು, 35ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಹೆರಾತ್​ ನಗರದ ಗವರ್ನರ್​ ತಿಳಿಸಿದ್ದಾರೆ. ಕಳೆದ ಕೆಲವು ವಾರಗಳಿಂದ ಸಂಭವಿಸಿದ ಪ್ರಬಲ ಭೂಕಂಪಗಳ ನಂತರ ಸಾವಿರಾರು ಜನರು ಮೃತಪಟ್ಟಿದ್ದಾರೆ.

    ಅಕ್ಟೋಬರ್ 7 ರಂದು ಕೂಡಾ ಇದೇ ಪ್ರಾಂತ್ಯದಲ್ಲಿ ಪ್ರಬಲ ಭೂಕಂಪ ಸಂಭವಿಸಿತ್ತು. ರಿಕ್ಟರ್ ಮಾಪಕದಲ್ಲಿ 6.3ರಷ್ಟು ತೀವ್ರತೆ ದಾಖಲಾಗಿತ್ತು. ಇದೀಗ ಅಷ್ಟೇ ಪ್ರಮಾಣದ ಮತ್ತೊಂದು ಭೂಕಂಪ ಇದೇ ಪ್ರಾಂತ್ಯದಲ್ಲಿ ಸಂಭವಿಸಿದೆ ಎಂದು ಅಮೆರಿಕದ ಭೂಗರ್ಭ ಸರ್ವೇಕ್ಷಣಾ ಇಲಾಖೆ ಮಾಹಿತಿ ನೀಡಿದೆ.

    Afghanistan, Earthquake

    ಇದನ್ನೂ ಓದಿ: ಪಾಕ್​ ವಿರುದ್ಧ ಅಬ್ಬರಿಸಿದ ರೋಹಿತ್ ಶರ್ಮಾ; ಏಕದಿನ ಕ್ರಿಕೆಟ್ ಮಾದರಿಯಲ್ಲಿ ನೂತನ ದಾಖಲೆ ಬರೆದ ಹಿಟ್​ಮ್ಯಾನ್

    ಅಫ್ಘಾನಿಸ್ತಾನದ ಜನರು ಒಂದರ ನಂತರ ಒಂದರಂತೆ ಭೂಕಂಪನದ ಪ್ರಬಲ ಕಂಪನವನ್ನು ಅನುಭವಿಸುತ್ತಿದ್ದಾರೆ. ಇದುವರೆಗೆ 4 ಸಾವಿರಕ್ಕೂ ಹೆಚ್ಚು ಮಂದಿ ಮೃತಪ್ಪಟ್ಟಿದ್ದಾರೆ. ಸಿರಿಯಾ ಮತ್ತು ಟರ್ಕಿಯಲ್ಲಿ ಸಂಭವಿಸಿದ ಭೂಕಂಪಕ್ಕಿಂತ ಅಫ್ಘಾನಿಸ್ತಾನದ ಭೂಕಂಪವು ಹೆಚ್ಚು ಭಯಾನಕವಾಗಿದೆ ಎಂದು ಹೇಳಲಾಗಿದೆ.

    ಭೂಕಂಪದ ಹೊಡೆತಕ್ಕೆ ತತ್ತರಿಸಿರುವ ಅಫ್ಘಾನಿಸ್ತಾನಕ್ಕೆ ವಿಶ್ವಸಂಸ್ಥೆ ವತಿಯಿಂದ 5 ಟ್ರಿಲಿಯನ್​ ಡಾಲರ್ ನೆರವನ್ನು ಘೋಷಿಸಲಾಗಿದೆ. ವಿಶ್ವ ಸಂಸ್ಥೆ ಮಾಹಿತಿ ಪ್ರಕಾರ ಈ ಭೂಕಂಪಕ್ಕೆ ಬಲಿಯಾದವರ ಪೈಕಿ ಶೇ. 90ರಷ್ಟು ಮಹಿಳೆಯರು ಹಾಗೂ ಮಕ್ಕಳೇ ಇದ್ದಾರೆ. ಭೂಕಂಪದಿಂದ ಒಟ್ಟು 12 ಸಾವಿರ ಮಂದಿ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ ಎಂದು ವಿಶ್ವ ಸಂಸ್ಥೆ ತಿಳಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts