More

    ದೇಶದಲ್ಲಿ ಸಾಮಾಜಿಕ ಸಾಮರಸ್ಯವನ್ನು ಬಲಪಡಿಸುವ ಅಗತ್ಯತೆ ಹೆಚ್ಚಿದೆ: ಮೋಹನ್​ ಭಾಗವತ್

    ಜಮ್ಮು-ಕಾಶ್ಮೀರ: ದೇಶದಲ್ಲಿ ಪರಿಸರ ಸಂರಕ್ಷಣೆ, ಸಾಮಾಜಿಕ ಸೌಹಾರ್ದತೆ ಹಾಗೂ ಸಾಂಪ್ರದಾಯಿಕ ಕುಟುಂಬ ಪದ್ದತಿಯನ್ನು ಭದ್ರಪಡಿಸುವ ನಿಟ್ಟಿನಲ್ಲಿ ಸಂಘ ಮತ್ತು ಅದರ ಅಂಗಸಂಸ್ಥೆಗಳು ಕೆಲಸ ಮಾಡಬೇಕೆಂದು ಆರ್​ಎಸ್​ಎಸ್​ನ ಮುಖ್ಯಸ್ಥ ಮೋಹನ್​ ಭಾಗವತ್​ ಕರೆ ನೀಡಿದ್ದಾರೆ.

    ಮೂರು ದಿನಗಳ ಜಮ್ಮು-ಕಾಶ್ಮೀರ ಪ್ರವಾಸದಲ್ಲಿರುವ ಮೋಹನ್ ಭಾಗವತ್, ಆರ್​ಎಸ್​ಎಸ್​ ಸಹಭಾಗಿತ್ವದಲ್ಲಿ ಆಯೋಜನೆಗೊಂಡಿದ್ದ ಸಮನ್ವ ಬೈಠಕ್​ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ್ದಾರೆ.

    ಆರ್​ಎಸ್​ಎಸ್​ ಸಂದೇಶವನ್ನು ಪ್ರತಿ ಮನೆಗೂ ತಲುಪುವಂತೆ ಸಾಂಸ್ಥಿಕ ಜಾಲಗಳನ್ನು ಮತ್ತಷ್ಟು ಹರಡುವ ಅಗತ್ಯವಿದೆ. 2025ರಲ್ಲಿ ಆರ್​ಎಸ್​ಎಸ್​ ಶತಮಾನೋತ್ಸವ ಕಾರ್ಯಕ್ರಮ ನಡೆಯಲಿದ್ದು, ಈ ನಿಟ್ಟಿನಲ್ಲಿ ನಾವು ನಮ್ಮ ಜಾಲವನ್ನು ಮತ್ತಷ್ಟು ಹರಡಬೇಕಿದೆ.

    ಇದನ್ನೂ ಓದಿ: ಉದ್ಯೋಗಾಕಾಂಕ್ಷಿ ಆತ್ಮಹತ್ಯೆ ಪ್ರಕರಣ; ತೆಲಂಗಾಣದಲ್ಲಿ ಯುವಕರ ಕನಸು, ಆಕಾಂಕ್ಷೆಗಳ ಹತ್ಯೆ ಮಾಡಲಾಗಿದೆ: ರಾಹುಲ್ ಗಾಂಧಿ

    ದೇಶದಲ್ಲಿ ಪರಿಸರ ಸಂರಕ್ಷಣೆ, ಸಾಮಾಜಿಕ ಸೌಹಾರ್ದತೆ ಹಾಗೂ ಸಾಂಪ್ರದಾಯಿಕ ಕುಟುಂಬ ಪದ್ದತಿಯನ್ನು ಭದ್ರಪಡಿಸುವ ನಿಟ್ಟಿನಲ್ಲಿ ಸಂಘ ಮತ್ತು ಅದರ ಅಂಗಸಂಸ್ಥೆಗಳು ಕೆಲಸ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ನಾವೆಲ್ಲರೂ ಕಾರ್ಯಪ್ರವೃತ್ತರಾಗಬೇಕಿದೆ. ಗ್ರಾಮಗಳ ಅಭಿವೃದ್ಧಿ ಮತ್ತು ಗ್ರಾಮೀಣ ಆರ್ಥಿಕತೆಗಾಗಿ ನಾವು ಇನ್ನಷ್ಟು ಕಾರ್ಯಕ್ರಮಗಳನ್ನು ರೂಪಿಸುವ ಅಗತ್ಯತೆ ಇದೆ ಎಂದು ಹೇಳಿದ್ದಾರೆ.

    ಸಮನ್ವ ಬೈಠಕ್​ ಕಾರ್ಯಕ್ರಮದಲ್ಲಿ 38 ಸಂಘಟನೆಯ 100ಕ್ಕೂ ಹೆಚ್ಚು ಜನರು ಭಾಗಿಯಾಗಿದ್ದರು. ಇದಲ್ಲದೆ ಸಭೆಯಲ್ಲಿ ವಿವಿಧ ಸಾಮಾಜಿಕ ಸಮಸ್ಯೆಗಳ ಕುರಿತು ಚರ್ಚಿಸಲಾಯಿತು ಮತ್ತು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts