More

    ಚೌಡೇಶ್ವರಿ ದೇವಿಗೆ ನೂತನ ರಥ ಸಮರ್ಪಣೆ

    ಹಿರೀಸಾವೆ : ಧಾರ್ಮಿಕ ಸೇವೆಯಲ್ಲಿ ವಾಗಿ ಉತ್ತಮ ಕೆಲಸ ಮಾಡಿದ್ದಲ್ಲಿ ಮನಸ್ಸಿಗೆ ನೆಮ್ಮದಿ ಸಿಗಲಿದೆ ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಪೀಠಾಧ್ಯಕ್ಷ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.
    ಪಟ್ಟಣದ ಗ್ರಾಮದೇವತೆ ಚೌಡೇಶ್ವರಿ ದೇವಿಗೆ ನೂತನ ರಥ ಸಮರ್ಪಿಸಿ, ನವೀಕೃತ ತೇರಿನ ಮನೆಯನ್ನು ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.
    ಉತ್ತಮ ಕೆಲಸಗಳಲ್ಲಿ ತೊಡಗಿಸಿಕೊಳ್ಳುವುದರಿಂದ ನಮ್ಮ ಸಂಸ್ಕಾರ ವೃದ್ಧಿಗೊಳ್ಳುತ್ತದೆ. ನಮ್ಮ ದೇಶದ ಆಂತರಿಕ ಶಕ್ತಿಯೇ ಧಾರ್ಮಿಕ ಶ್ರದ್ಧೆ. ಅದನ್ನು ಜ್ಞಾನದ ಜ್ಯೋತಿ ಎಂದೇ ಭಾವಿಸಿ ಮುಂದುವರಿಯಬೇಕು ಎಂದು ಅವರು ತಿಳಿಸಿದರು.
    ಶಾಸಕ ಸಿ.ಎನ್.ಬಾಲಕೃಷ್ಣ ಅಧ್ಯಕ್ಷತೆ ವಹಿಸಿ ಮಾತನಾಡಿ, ಈ ವರ್ಷ ಮಳೆಯ ಅಭಾವದಿಂದ ನೀರಿಗೆ ಹಾಹಾಕಾರ ಉಂಟಾಗಿದೆ. ದೇವರ ಕೃಪೆಯಿಂದ ಸಮೃದ್ಧವಾಗಿ ಮಳೆಯಾಗಿ, ಕೆರೆ ಕಟ್ಟೆಗಳು ತುಂಬಲಿ ಎಂದು ಪ್ರಾರ್ಥನೆ ಮಾಡುವೆ ಎಂದರು. ಹಾಸನದ ವೇದಬ್ರಹ್ಮ ಕೃಷ್ಣಮೂರ್ತಿ ಘನಪಾಟಿ ನೇತೃತ್ವದಲ್ಲಿ ವಿಧಿ, ವಿಧಾನಗಳು ನೆರವೇರಿದವು. ಭಕ್ತರಿಗೆ ಅನ್ನದಾಸೋಹ ಏರ್ಪಡಿಸಲಾಗಿತ್ತು. ನಿವೃತ್ತ ಉಪ ಪ್ರಧಾನ ಅರಣ್ಯಾಧಿಕಾರಿ ಜಿ.ಎನ್. ಶ್ರೀಕಂಠಯ್ಯ, ರಥ ನಿರ್ಮಾಣ ಸಮಿತಿ ಅಧ್ಯಕ್ಷ ಎಚ್.ಆರ್.ಬಾಲಕಷ್ಣ, ದಾನಿ ಮಂಗಳ ಚಂದ್ರು, ದೇವಸ್ಥಾನದ ಮುಖ್ಯಸ್ಥರಾದ ಫಣೀಶ್, ಅನಂತರಾಮಯ್ಯ, ತೇರಿನ ಶಿಲ್ಪಿ ಶಿವಮೊಗ್ಗ ಸಂತೋಷ್, ಮುಖಂಡರಾದ ಶಿವನಂಜೇಗೌಡ, ರಾಮಕೃಷ್ಣ, ಎಚ್.ಎನ್.ಮಂಜಪ್ಪ, ಎಚ್.ಎಸ್.ಕುಮಾರ್, ಹೊಸಮನೆ ಚಂದ್ರು, ರಾಮಕೃಷ್ಣ, ರವಿಕುಮಾರ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts