ನ್ಯೂಸ್

ರಾಶಿ ರಾಶಿ ಸೇಬನ್ನು ಚರಂಡಿಗೆ ಎಸೆದ ಹಿಮಾಚಲ ಪ್ರದೇಶದ ರೈತರು!

ಹಿಮಾಚಲ ಪ್ರದೇಶ: ತಾವು ಬೆಳೆದ ರಾಶಿ ರಾಶಿ ಸೇಬು ಹಣ್ಣನ್ನು ಮಾರಾಟ ಮಾಡಲಾಗದ ಪರಿಸ್ಥಿತಿ ತಲುಪಿದ್ದಕ್ಕೆ ಬೇಸರಗೊಂಡ ರೈತರು, ಹಣ್ಣುಗಳನ್ನು ಚರಂಡಿಗೆ ಎಸೆದಿರುವ ಘಟನೆ ಹಿಮಾಚಲ ಪ್ರದೇಶದಲ್ಲಿ ವರದಿಯಾಗಿದೆ.

ಹಿಮಾಚಲ ಪ್ರದೇಶದಲ್ಲಿ ಕಳೆದ ಹಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯ ಕಾರಣ, ಹಲವೆಡೆ ಗುಡ್ಡ ಕುಸಿತಗೊಂಡಿದ್ದು, ರಸ್ತೆಗಳು ಜಲಾವೃತಗೊಂಡಿದೆ. ಇದರಿಂದ ಸೇಬನ್ನು ಬೆಳೆದ ರೈತರು ಮಾರುಕಟ್ಟೆಗೆ, ಹಣ್ಣಿನ ಮಂಡಿಗಳಿಗೆ ಹೋಗಲಾಗದಂತಹ ಕಠಿಣ ಪರಿಸ್ಥಿತಿ ಎದುರಾಗಿದೆ. ಹಣ್ಣುಗಳನ್ನು ವ್ಯಾಪಾರ ಮಾಡಲಾಗದೆ ಮನೆಯಲ್ಲೇ ಇಟ್ಟ ಪರಿಣಾಮ, ಸಂಪೂರ್ಣವಾಗಿ ಫಂಗಸ್​​ ಆಗಿದೆ.

ಈ ಎಲ್ಲಾ ಕಾರಣಗಳನ್ನು ಮುಂದಿಟ್ಟ ರೈತರು, ಆ್ಯಪಲ್​​ಗಳನ್ನು ಚರಂಡಿಗೆ ಎಸೆದು, ಹಿಮಾಚಲ ಸರ್ಕಾರದ ವಿರುದ್ಧ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ,(ಏಜೆನ್ಸೀಸ್).