ತಿರುವನಂತಪುರಂ: ಕೇರಳದ ಪಲ್ಲೂರುತಿಯಲ್ಲಿ ಕ್ಯಾಥೋಲಿಕ್ ಚರ್ಚ್ ನಡೆಸುತ್ತಿರುವ ಶಾಲೆಯೊಂದು ಹಿಜಾಬ್ ವಿವಾದದಲ್ಲಿ ಶಿಕ್ಷಣ ಇಲಾಖೆ ಲೋಪ ಎಸಗಿದೆ ಎಂದು ಆರೋಪಿಸಿ, ಶಾಲಾ ಆಡಳಿತ ಮಂಡಳಿ ಹೈಕೋರ್ಟ್ ( High Court ) ಮೆಟ್ಟಿಲೇರಲಿದೆ ಎಂದು ವರದಿಯಾಗಿದೆ.
ವಿದ್ಯಾರ್ಥಿನಿ ಹಿಜಾಬ್ ಧರಿಸಿದ್ದಕ್ಕೆ ಶಾಲೆಯು ಆಕ್ಷೇಪ ವ್ಯಕ್ತಪಡಿಸಿ, 2 ದಿನಗಳ ರಜೆ ಘೋಷಿಸಿದಾಗ ವಿವಾದಗಳು ಭುಗಿಲೆದ್ದವು. ಅಕ್ಟೋಬರ್ 10 ರಂದು ವಿದ್ಯಾರ್ಥಿನಿಯ ಪಾಲಕರು ನಿರ್ಧಾರವನ್ನು ಪ್ರಶ್ನಿಸಲು ಶಾಲೆಗೆ ಭೇಟಿ ನೀಡಿದರು.
ಇದನ್ನೂ ಓದಿ: ಛತ್ತೀಸ್ಗಢದ 170 ಮಾವೋವಾದಿಗಳು ಮುಖ್ಯವಾಹಿನಿಗೆ; ಶಸ್ತ್ರಾಸ್ತ್ರ ತ್ಯಜಿಸದವರಿಗೆ ಮರಣದಂಡನೆ ಫಿಕ್ಸ್: ಗೃಹ ಸಚಿವ Amit Shah
ಈ ವೇಳೆ ಪೋಷಕ ಶಿಕ್ಷಕರ ಸಂಘದ (ಪಿಟಿಎ) ಅಧ್ಯಕ್ಷ ಜೋಶಿ ಕೈಥವಲಪ್ಪಿಲ್ ಸರಿಯಾದ ತನಿಖೆ ನಡೆಸದೆ ವರದಿಯನ್ನು ಸ್ವೀಕರಿಸಲಾಗಿದೆ. ಹಾಗಾಗಿ ನಾವು ಹೈಕೋರ್ಟ್ ಮೆಟ್ಟಿಲೇರಲು ಸಿದ್ಧರಿದ್ದೇವೆ. ಆದಾಗ್ಯೂ, ವರದಿಯಲ್ಲಿ ಶಾಲಾ ಆಡಳಿತ ಮಂಡಳಿ ಹಾಗೂ ಪಿಟಿಎ ಜೊತೆ ಸರಿಯಾದ ವಿಚಾರಣೆಗಳು ನಡೆದಿಲ್ಲ. ಈ ಸಂಬಂಧ ನಮ್ಮ ವಕೀಲರು ಶೀಘ್ರದಲ್ಲೇ ಅರ್ಜಿ ಸಲ್ಲಿಸಲಿದ್ದಾರೆ ಎಂದು ಸುದ್ದಿಮೂಲಗಳಿಗೆ ತಿಳಿಸಿದರು.
ಹಿಜಾಬ್ ಧರಿಸಿದ್ದಕ್ಕಾಗಿಯೇ ವಿದ್ಯಾರ್ಥಿನಿಯನ್ನು ಶಾಲೆಯಿಂದ ಹೊರಹಾಕಲಾಗಿದೆ ಎಂದು ದೂರ ಶಿಕ್ಷಣ ನಿರ್ದೇಶಾಲಯ (ಡಿಡಿಇ) ವರದಿ ಮಾಡಿದೆ. ಇದು ಶಿಕ್ಷಣದ ಹಕ್ಕಿನ ಉಲ್ಲಂಘನೆಯಾಗಿದೆ. ಶಾಲೆಯು ಇದನ್ನು ನಿರಾಕರಿಸಿದಿಯೇ ಹೊರತು ವಿದ್ಯಾರ್ಥಿಯನ್ನು ತರಗತಿಗೆ ಎಂದಿಗೂ ನಿರಾಕರಿಸಿಲ್ಲ ಎಂದು ಜೋಶಿ ಅವರು ಹೇಳಿದ್ದಾರೆ.
ಘಟನೆಯ ಬಳಿಕ ಬಾಲಕಿ ಅಸ್ವಸ್ಥಳಾಗಿದ್ದಾಳೆ. ಆಕೆ ಅದೇ ಶಾಲೆಯಲ್ಲಿ ಮುಂದುವರೆಸಲು ಬಯಸಿದರೆ ಕಳುಹಿಸುತ್ತೇವೆ ಒಪ್ಪದಿದ್ದರೆ ಆಕೆಯನ್ನು ವಾಪಸ್ಸು ಕರೆದುಕೊಂಡು ಹೋಗುತ್ತೇವೆ. ಸಣ್ಣ ವಿಚಾರಕ್ಕೆ ಆರಂಭವಾದ ವಿವಾದ ತೀವ್ರ ಒತ್ತಡವನ್ನು ಉಂಟುಮಾಡಿದೆ ಎಂದು ಆಕೆಯ ತಾಯಿ ತಿಳಿಸಿದ್ದಾರೆ.
ವಿದ್ಯಾರ್ಥಿನಿ ಹಿಜಾಬ್ ಇಲ್ಲದೆ ಹಾಜರಾಗುವುದಾಗಿ ಪಾಲಕರಿಂದ ಲಿಖಿತ ಭರವಸೆ ಕೋರಲಾಗಿದೆ ಎಂಬ ವರದಿಗಳನ್ನು ಪಿಟಿಎ ನಿರಾಕರಿಸಿದೆ. ಕೆಲವು ಪೋಷಕರು ಈ ವಿಷಯವನ್ನು ಎತ್ತಿದ್ದಾರೆ ಆದರೆ ಯಾವುದೇ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗಿಲ್ಲ ಎಂದು ಜೋಶಿ ಸ್ಪಷ್ಟಪಡಿಸಿದ್ದಾರೆ. (ಏಜೆನ್ಸೀಸ್)