ಸಾಂದರ್ಭಿಕ ಚಿತ್ರ 
ನ್ಯೂಸ್

ಪಾರಿವಾಳ ಹಿಡಿಯಲು ಹೋದಾಗ ತಾಗಿದ ಹೈಟೆನ್ಶನ್ ವೈರ್; ಎರಡು ಮಕ್ಕಳ ಜೀವನ್ಮರಣ ಹೋರಾಟ!

ಬೆಂಗಳೂರು: ಮಕ್ಕಳಿಗೆ ಪಕ್ಷಿಗಳ ಮೇಲೆ ಕುತೂಹಲ ಸಹಜ. ಬಾಲ್ಯದಲ್ಲಿ ಪ್ರತಿಯೊಬ್ಬ ಮಕ್ಕಳಿಗೂ ಪಾರಿವಾಳಗಳನ್ನು ಹಿಡಿದು ಮನೆಯಲ್ಲಿ ಸಾಕಬೇಕು ಎಂಬ ಆಸೆ ಇದ್ದೇ ಇರುತ್ತದೆ. ಹೀಗಾಗಿ ಬಹುತೇಕ ಮಕ್ಕಳ ಪಾರಿವಾಳಗಳನ್ನು ಹಿಡಿಯುವ ವಿಫಲ ಪ್ರಯತ್ನ ನಡೆಸುತ್ತಲೇ ಇರುತ್ತಾರೆ. ಆದರೆ ಪಾರಿವಾಳಗಳನ್ನು ಹಿಡಿಯುವ ಪ್ರಯತ್ನ ಸಫಲವಾಗುವುದು ಮಾತ್ರ ವಿರಳ.

ಇದೀಗ ವಿಜಯಾನಂದ ನಗರದ ನಂದಿನಿ ಲೇಔಟ್​​ನಲ್ಲಿ ಪಾರಿವಾಗಳನ್ನು ಹಿಡಿಯಲು ಹೋದ ಬಾಲಕರು ತಮ್ಮ ಜೀವಕ್ಕೇ ಅಪಾಯ ತಂದೊಡ್ಡಿದ್ದಾರೆ. ಪಾರಿವಾಳ ಹಿಡಿಯಲು ಹೋದ ಮಕ್ಕಳಿಗೆ ವಿದ್ಯುತ್​​ ಹೈಟೆನ್ಶನ್ ವೈರ್ ತಾಗಿದೆ. ಇದು ಮಕ್ಕಳಿಬ್ಬರ ಜೀವಕ್ಕೆ ಕುತ್ತು ತಂದಿದ್ದು, ಇದೀಗ ಇಬ್ಬರೂ ಜೀವನ್ಮರಣದ ಹೋರಾಟ ನಡೆಸುವಂತಾಗಿದೆ.

ಬಾಲಕರಾದ ಸುಪ್ರೀತ್ (11) ಹಾಗೂ ಚಂದನ್​ (10)ಗೆ ವಿದ್ಯುತ್​​ ಹೈಟೆನ್ಶನ್ ವೈರ್ ತಾಗಿದ್ದರಿಂದ ಮೈಮೇಲೆ ಸುಟ್ಟ ಗಾಯಗಳಾಗಿವೆ. ಸಂಜೆ ಆರು ಘಂಟೆಯ ಸುಮಾರಿಗೆ ಈ ಘಟನೆ ನಡೆದಿದ್ದು, ಸದ್ಯ ಮಕ್ಕಳಿಬ್ಬರು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸಾವು ಬದುಕಿನ ನಡುವೆ ಹೋರಾಡುವಂತಾಗಿದೆ.