High Tension Wire: ಹೈಟೆನ್ಷನ್ ವಿದ್ಯುತ್ ತಂತಿ ಬಿದ್ದು ದಂಪತಿಗಳು ಸಜೀವ ದಹನವಾದ ಘಟನೆ ಹೈದರಾಬಾದ್‌ನಲ್ಲಿ ಭಾನುವಾರ (ಜೂ.15) ನಡೆದಿದೆ.
ಎಲ್‌ಬಿ ನಗರದ ಚಿಂತಲಕುಂಟ ಪ್ರದೇಶದ ಬಳಿಯ ಸಾಗರ್ ರಿಂಗ್ ರಸ್ತೆಯಲ್ಲಿ ಈ ಅಪಘಾತ ಸಂಭವಿಸಿದೆ.
ಇದನ್ನು ಓದಿ: ಕಿಚ್ಚ ಸುದೀಪ್ ‘ಬಿಗ್ ಬಾಸ್ ಸೀಸನ್ 12’ ರ ನಿರೂಪಣೆ ಮಾಡಲು ಷರತ್ತು ಹಾಕಿದ್ರಾ, ಅವರ ಬದಲು ಯಾರು…?! | Biggboss Kannada
ತಂತಿ ತುಂಡಾಗಿ ದೇವಸ್ಥಾನದ ಮುಂದೆ ಪಾದಚಾರಿ ರಸ್ತೆಯಲ್ಲಿ ಮಲಗಿದ್ದ ಪುರುಷ ಮತ್ತು ಮಹಿಳೆಯ ಮೇಲೆ ಬಿದ್ದಿದೆ. ಇಬ್ಬರೂ ಭಿಕ್ಷುಕರಾಗಿದ್ದು, ಶವಗಳನ್ನು ಶವಪರೀಕ್ಷೆಗಾಗಿ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿದ್ಯುತ್ ಇಲಾಖೆಯ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಘಟನೆಯ ತನಿಖೆ ಆರಂಭಿಸಿದ್ದಾರೆ, ರಾಚಕೊಂಡ ಕಮಿಷನರೇಟ್‌ನ ಎಲ್‌ಬಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಏಜೆನ್ಸೀಸ್)