ಒನ್‌ವೇನಲ್ಲಿ ಬಂದು ರೇಂಜ್ ರೋವರ್ ಚಾಲಕನಿಗೆ ಬೆದರಿಕೆ ಹಾಕಿದ KSRP ಪೊಲೀಸ್​ 
ನ್ಯೂಸ್

ಬೆಂಗಳೂರಿನಲ್ಲಿ KSRP ಪೊಲೀಸರ ದರ್ಪ: ಒನ್‌ವೇನಲ್ಲಿ ಬಸ್ ಚಲಾಯಿಸಿ ಕಾರು ಚಾಲಕನಿಗೆ ಧಮ್ಕಿ! | KSRP police bus violation

Bengaluru Traffic: ಸಂಚಾರ ನಿಯಮ ಪಾಲಿಸಬೇಕಾದ ಪೊಲೀಸರೇ ನಿಯಮ ಮೀರಿ ದರ್ಪ ತೋರಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಕರ್ನಾಟಕ ರಾಜ್ಯ ಮೀಸಲು ಪೊಲೀಸ್ (KSRP) ಬಸ್‌ವೊಂದು ಒನ್‌ವೇನಲ್ಲಿ ಬಂದಿದ್ದನ್ನು ಪ್ರಶ್ನಿಸಿದ್ದಕ್ಕೆ, ರೇಂಜ್ ರೋವರ್ ಕಾರು ಚಾಲಕನಿಗೆ ಪೊಲೀಸರು ಬೆದರಿಕೆ ಹಾಕಿದ್ದಾರೆ. ಈ ಘಟನೆಯ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಈ ಘಟನೆ ಸೋಮವಾರ ರಾತ್ರಿ ಸುಮಾರು 7 ಗಂಟೆಗೆ ಹೊಸೂರು ರಸ್ತೆಯ ಅಕ್ಕಿತಿಮ್ಮನಹಳ್ಳಿ, ನಂಜಪ್ಪ ಸರ್ಕಲ್ ಬಳಿ ನಡೆದಿದೆ. ಈ ಪ್ರದೇಶ ಅಶೋಕನಗರ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುತ್ತದೆ.ಕೆಎಸ್‌ಆರ್‌ಪಿ ಬಸ್ ನಿಯಮ ಮೀರಿ ಒನ್‌ವೇನಲ್ಲಿ ಬಂದಿದ್ದರಿಂದ ಆ ರಸ್ತೆಯಲ್ಲಿ ಕೆಲಕಾಲ ಭಾರಿ ಟ್ರಾಫಿಕ್ ಜಾಮ್ ಉಂಟಾಗಿತ್ತು.

ಚಾಲಕನಿಗೆ ಅವಾಚ್ಯವಾಗಿ ನಿಂದಿಸಿದ ಪೊಲೀಸರು

ರಸ್ತೆಯಲ್ಲಿ ಎದುರಾದ ಕಪ್ಪು ರೇಂಜ್ ರೋವರ್ ಕಾರು ಚಾಲಕ ‘ಒನ್‌ವೇನಲ್ಲಿ ಯಾಕೆ ಬಂದ್ರಿ?’ ಎಂದು ಕೇಳಿದ್ದಕ್ಕೆ ಪೊಲೀಸರು ಸಿಟ್ಟಾಗಿದ್ದಾರೆ. ತಕ್ಷಣ ಕಾರನ್ನು ಸುತ್ತುವರಿದು, ಚಾಲಕನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿದ್ದಾರೆ. ವಿಶೇಷ ಎಂದರೆ ಅಶೋಕನಗರ ಟ್ರಾಫಿಕ್ ಪೊಲೀಸರು ಅಲ್ಲೇ ಇದ್ದರೂ ಇದನ್ನು ತಡೆಯುವ ಗೋಜಿಗೆ ಹೋಗಲಿಲ್ಲ.

ಇದನ್ನೂ ಓದಿ: Keerthy Suresh marriage: ‘ಅಮ್ಮ ಡೈರಿ ಓದಿದ್ರು, ಮನೆಯಲ್ಲಿ ಗಲಾಟೆಯಾಗಿತ್ತು’! ಅಂತರಧರ್ಮೀಯ ಮದುವೆ ಕಥೆ ಬಿಚ್ಚಿಟ್ಟ ಕೀರ್ತಿ ಸುರೇಶ್

ಖಾಕಿ ವರ್ತನೆ ಕಂಡು ನೆಟ್ಟಿಗರು ಗರಂ

ಪೊಲೀಸರ ಈ ಬೇಜವಾಬ್ದಾರಿ ವರ್ತನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಕೆಎಸ್‌ಆರ್‌ಪಿ ಸಿಬ್ಬಂದಿ ನಡೆದುಕೊಂಡ ರೀತಿಯ ಬಗ್ಗೆ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.