ನ್ಯೂಸ್

ಹೃದಯಾಘಾತದಿಂದ ಮೃತಪಟ್ಟ ಹೈಕೋರ್ಟ್​ ವಕೀಲ ವಿ.ಶ್ರೀನಿಧಿ

ಬೆಂಗಳೂರು: ರಾಜ್ಯ ಹೈಕೋರ್ಟ್‌ನಲ್ಲಿ ಹೆಚ್ಚುವರಿ ವಕೀಲರಾಗಿದ್ದ ವಿ.ಶ್ರೀನಿಧಿ(46) ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಮಲ್ಲೇಶ್ವರದ ಅಪೋಲೊ ಆಸ್ಪತ್ರೆಯಲ್ಲಿ ಮಧ್ಯಾಹ್ನ ನಿಧನರಾಗಿದ್ದಾರೆ.

ಹಿರಿಯೂರು ತಾಲ್ಲೂಕಿನ ಐಮಂಗಲ ಹೋಬಳಿಯ ತಾಳವಟ್ಟಿ ಗ್ರಾಮದ ಶ್ರೀನಿಧಿ, ಕಳೆದ ಎಂಟು ವರ್ಷಗಳಿಂದ ರಾಜ್ಯ ಸರ್ಕಾರದ ಪರ ಮತ್ತು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಪರ ವಕೀಲರಾಗಿ ವಾದ ಮಂಡನೆ ಮಾಡುತ್ತಿದ್ದರು.

ಅಲ್ಲದೆ ಒತ್ತುವರಿ ತೆರವು ಮತ್ತು ರಸ್ತೆ ಗುಂಡಿಗಳನ್ನು ಮುಚ್ಚುವುದಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ಶ್ರೀನಿಧಿ ಅವರು ಬಿಬಿಎಂಪಿ ವಕೀಲರಾಗಿ ವಾದ ಮಂಡನೆ ಮಾಡಿದ್ದಾರೆ.