ನ್ಯೂಸ್

ಕರಾವಳಿ ಭದ್ರತೆಗೆ ಹೈ ಅಲರ್ಟ್: ಅರೇಬಿಯ್​ ಸಮುದ್ರದಲ್ಲಿ ಬಾಂಬ್ ಸ್ಪೋಟಗೊಳಿಸುವುದಾಗಿ ಅಪರಿಚಿತ ಕರೆ!| Arabian Sea

Arabian Sea : ಮುಂಬೈ ಬಳಿಯ ಅರೇಬಿಯ್​ ಸಮುದ್ರದಲ್ಲಿ ಬಾಂಬ್ ಸ್ಪೋಟಗೊಳಿಸುವುದಾಗಿ ಅಪರಿಚಿತ ವ್ಯಕ್ತಿಯಿಂದ 112 ಗೆ ಕರೆ ಬಂದ ನಂತರ, ನಗರವು ಮತ್ತೊಮ್ಮೆ ಭಯಭೀತಿಗೊಳಗಾಗಿದ್ದು, ಅಧಿಕಾರಿಗಳು ನಗರದಾದ್ಯಂತ ಇರುವ ಜನರಿಗೆ ಎಚ್ಚರಿಕೆ ನೀಡಿದ್ದಾರೆ.

ಬೆದರಿಕೆ ಕರೆ ಬಂದ ನಂತರ ಮುಂಬೈ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದು, ಕರಾವಳಿ ಭದ್ರತಾ ಸಂಸ್ಥೆಗಳು ಮತ್ತು ಅಲ್ಲಿನ ಸ್ಥಳೀಯ ಪೊಲೀಸರು ಹೆಚ್ಚಿನ ಗಮನವಹಿಸಿದ್ದಾರೆ. ಇನ್ನು ಕರೆ ಮಾಡಿದ ವ್ಯಕ್ತಿಯ ಪತ್ತೆಹಚ್ಚಲು ಪೊಲೀಸರು ಕಾರ್ಯಾಚರಣೆ ಮುಂದುವರೆಸಿದ್ದಾರೆ.

ಮುಂಬರುವ ಹಬ್ಬಗಳ ಗಮನದಲ್ಲಿಟ್ಟಕೊಂಡು ಬೆದರಿಕೆ ಕರೆಯನ್ನು ಗಂಭೀರವಾಗಿ ಪರಿಗಣಿಸಲಾಗುತ್ತಿದೆ. ಪೊಲೀಸರು ಸತ್ಯಾಸತ್ಯತೆಗಳನ್ನು ಪರಿಶೀಲನೆ ನಡೆಸಿದ್ದು, ಕರೆ ಮಾಡಿದ ಅಪರಿಚಿತ ವ್ಯಕ್ತಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಇದು ಇಚ್ಚೀಚೆಗೆ ಎರಡನೇ ಬಾರಿ ಬೆದರಿಕೆ ಕರೆಯಾಗಿದ್ದು, ಭಯವನ್ನು ಹರಡಲು ಸಹಾಯವಾಣಿಗಳ ದುರುಪಯೋಗದ ಬಗ್ಗೆ ಕಳವಳ ವ್ಯಕ್ತವಾಗಿದೆ ಎಂದು ಹಿರಿಯ ಅಧಿಕಾರಿ ತಿಳಿಸಿದ್ದಾರೆ. (ಏಜೆನ್ಸೀಸ್​)