ಏರ್ ಇಂಡಿಯಾ ವಿಮಾನದಲ್ಲಿ 'ಎಸಿ' ಸಮಸ್ಯೆ; ವಿಮಾನದಿಂದ ಕೆಳಗಿಳಿದ 200 ಪ್ರಯಾಣಿಕರು| Ac

air-india
Published on

ನವದೆಹಲಿ; ಸಿಂಗಾಪುರಕ್ಕೆ ಹೋಗುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಪರಿಣಾಮ, ದೆಹಲಿ ವಿಮಾನ ನಿಲ್ದಾಣದಲ್ಲಿ 200 ಕ್ಕೂ ಹೆಚ್ಚು ಪ್ರಯಾಣಿಕರನ್ನು ಕೆಳಗಿಳಿಸಲಾಗಿದೆ. ಈ ಪ್ರಯಾಣಿಕರು ಸುಮಾರು ಎರಡು ಗಂಟೆಗಳ ಕಾಲ ವಿಮಾನದಲ್ಲೇ ಇದ್ದರು ಮತ್ತು ನಂತರ ದೋಷಪೂರಿತ ಹವಾನಿಯಂತ್ರಣ ವ್ಯವಸ್ಥೆಯಿಂದಾಗಿ ಅವರನ್ನು ಕೆಳಗಿಳಿಸಲಾಯಿತು ಎನ್ನಲಾಗಿದೆ.

ಪಿಟಿಐ ವರದಿಯ ಪ್ರಕಾರ, ಬೋಯಿಂಗ್ 787-9 ಡ್ರೀಮ್‌ಲೈನರ್ ವಿಮಾನವು ರಾತ್ರಿ 11 ಗಂಟೆ ಸುಮಾರಿಗೆ ಹೊರಡಬೇಕಿತ್ತು. ಆದರೆ ಈ ಬಗ್ಗೆ ಯಾವುದೇ ಮಾಹಿತಿ ನೀಡದೆ, AI2380 ವಿಮಾನದ ಸಿಬ್ಬಂದಿ, ಪ್ರಯಾಣಿಕರನ್ನು ಕೆಳಗಿಳಿಸಲು ಮುಂದಾದರು. ಬಳಿಕ ಅವರನ್ನು ವಿಮಾನ ನಿಲ್ದಾಣದ ಟರ್ಮಿನಲ್ ಕಟ್ಟಡಕ್ಕೆ ಕರೆದೊಯ್ಯಲಾಯಿತು ಎನ್ನಲಾಗಿದೆ.

(ಏಜೆನ್ಸೀಸ್)

ಜೈಪುರದಿಂದ ದುಬೈಗೆ ಹೋಗುವ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನವು ಇದೇ ರೀತಿಯ ಸಮಸ್ಯೆಯನ್ನು ಎದುರಿಸಿದ ಕೇವಲ ಮೂರು ತಿಂಗಳ ನಂತರಈ ಘಟನೆ ನಡೆದಿದೆ.

ಇನ್ನೂ ಸಾಮಾಜಿಕ ಮಾಧ್ಯಮಗಳಲ್ಲಿ ಈ ವಿಡಿಯೋಗಳು ವೈರಲ್ ಆಗಿದ್ದು, ಪ್ರಯಾಣಿಕರು ವಿಮಾನದೊಳಗಿನ ವಸ್ತುಗಳು ಮತ್ತು ಪತ್ರಿಕೆಗಳನ್ನು ಬಳಸಿಕೊಂಡು ಗಾಳಿ ಬೀಸಿಕೊಳ್ಳುತ್ತಿರುವ ದೃಶ್ಯ ಕಂಡುಬಂದಿದೆ. ಈ ಬಗ್ಗೆ ಏರ್‌ ಇಂಡಿಯಾ ಮಾಹಿತಿ ಹಂಚಿಕೊಂಡಿದ್ದು, AI2380 ದೆಹಲಿ–ಸಿಂಗಪುರ ವಿಮಾನದಲ್ಲಿ ಎಸಿ ಸಮಸ್ಯೆ ಕಾಣಿಸಿಕೊಂಡ ಪರಿಣಾಮ, ವಿಮಾನವನ್ನು ಬದಲಿಸಲಾಗಿದೆ ಎಂದು ಹೇಳಿಕೊಂಡಿದೆ. ಸುಮಾರು ಆರು ಗಂಟೆಗಳ ವಿಳಂಬ ಅನುಭವಿಸಿದ ಬಳಿಕ ಇಂದು (ಸೆ.11) ಬೆಳಗ್ಗೆ 5.36ಕ್ಕೆ ವಿಮಾನವು ಸಿಂಗಪುರಕ್ಕೆ ಹೊರತು ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net