ನ್ಯೂಸ್

ಹಸೆಮಣೆ ಏರಿದ ವಿಕ್ಟರಿ ವೆಂಕಟೇಶ್ ಪುತ್ರಿ .. ಬಂದ ಹೀರೋಗಳು ಯಾರು ಗೊತ್ತಾ?

ಹೈದರಾಬಾದ್​: ತೆಲುಗು ಚಿತ್ರರಂಗದಲ್ಲಿ ದಗ್ಗುಬಾಟಿ ಕುಟುಂಬದ ವಿಶಿಷ್ಟತೆಯ ಬಗ್ಗೆ ಬೇರೇನೂ ಹೇಳಬೇಕಾಗಿಲ್ಲ. ಮೊಗಲ್ ದಗ್ಗುಬಾಟಿ ರಾಮಾನಾಯ್ಡು ಸಿನಿಮಾದಿಂದ ಶುರುವಾದ ಅವರ ಕುಟುಂಬದ ಸಿನಿಮಾ ಕರಿಯರ್ ಇಂದಿಗೂ ಮುಂದುವರೆದಿದೆ. ಅಂದಹಾಗೆ, ಇದೇ ಕುಟುಂಬದಿಂದ ಬಂದಿರುವ ವಿಕ್ಟರಿ ವೆಂಕಟೇಶ್ ಟಾಲಿವುಡ್‌ನಲ್ಲಿ ಬಹಳ ಸಮಯದಿಂದ ಸ್ಟಾರ್ ಹೀರೋ ಆಗಿ ತಮ್ಮ ಹವಾ ತೋರಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಅವರ ಮಗಳ ಮದುವೆ ಹೈದರಾಬಾದ್‌ನಲ್ಲಿ ನಡೆಯಿತು.

ವಿಕ್ಟರಿ ವೆಂಕಟೇಶ್ ಅವರ ಎರಡನೇ ಪುತ್ರಿ ಹಯವಾಹಿನಿ ಶುಕ್ರವಾರ ರಾತ್ರಿ ವಿಜಯವಾಡದ ಡಾ. ಪಾತೂರಿ ವೆಂಕಟರಾಮ ರಾವ್, ಡಾ. ಅರುಣಾ ದಂಪತಿಯ ಮಗ ನಿಶಾಂತ್ ಜೊತೆ ತುಂಬಾ ಸಿಂಪಲ್ ಆಗಿ ಮದುವೆ ಮಾಡಿಕೊಂಡರು.

ಹೈದರಾಬಾದ್ ನ ರಾಮನಾಯ್ಡು ಸ್ಟುಡಿಯೋದಲ್ಲಿ ಏರ್ಪಡಿಸಿದ್ದ ಮದುವೆ ಸಮಾರಂಭದಲ್ಲಿ ಹಿರಿಯರು, ಹಿತೈಷಿಗಳು, ಚಿತ್ರರಂಗದ ಗಣ್ಯರು, ರಾಜಕೀಯ ಮತ್ತು ಉದ್ಯಮಿಗಳನ್ನು ಆಹ್ವಾನಿಸಲಾಗಿತ್ತಾದರೂ, ಎರಡೂ ಕುಟುಂಬದ ಹಿರಿಯರು ಹಾಗೂ ಆತ್ಮೀಯರ ನಡುವೆ ನಡೆದಿದೆ.

ಈ ಮದುವೆಗೆ ಚಿತ್ರರಂಗದ ತಾರೆಯರು ಹಾಜರಾಗದಿದ್ದರೂ, ದಗ್ಗುಬಾಟಿ ರಾಣಾ, ಅಕ್ಕಿನೇನಿ ನಾಗ ಚೈತನ್ಯ, ಅಖಿಲ್ ಮತ್ತು ಅಭಿರಾಮ್ ಆಗಮಿಸಿದ್ದರು.

ವೆಂಕಟೇಶ್‌ಗೆ ಮೂವರು ಪುತ್ರಿಯರು ಮತ್ತು ಒಬ್ಬ ಪುತ್ರನಿದ್ದು, ಹಯವಾಹಿನಿ ಎರಡನೇ ಮಗಳು. ಈ ಹಿಂದೆ ಹಿರಿಯ ಮಗಳ ಮದುವೆ ಮಾಡಿದ್ದು ಗೊತ್ತೇ ಇದೆ. ಕಳೆದ ವರ್ಷ ಅಕ್ಟೋಬರ್ ನಲ್ಲಿ ಹಯವಾಹಿನಿ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಟಾಲಿವುಡ್ ಸ್ಟಾರ್ ಹೀರೋಗಳಾದ ಮೆಗಾಸ್ಟಾರ್ ಚಿರಂಜೀವಿ, ಸೂಪರ್ ಸ್ಟಾರ್ ಮಹೇಶ್ ಬಾಬು, ದಗ್ಗುಬಾಟಿ ರಾಣಾ, ಅಕ್ಕಿನೇನಿ ನಾಗ ಚೈತನ್ಯ ಸೇರಿದಂತೆ ಹಲವರು ಸಮಾರಂಭದಲ್ಲಿ ಪಾಲ್ಗೊಂಡು ಹಯವಾಹಿನಿ - ನಿಶಾಂತ್ ಅವರನ್ನು ಆಶೀರ್ವದಿಸಿದ್ದರು.

ಮುಂದೆ ಸೆಲೆಬ್ರಿಟಿಗಳಿಗೆ ಆರತಕ್ಷತೆ ಏರ್ಪಡಿಸಲಾಗುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.